Asianet Suvarna News Asianet Suvarna News

ಹಗ್ಗದಾಟವಾಡಿದರೆ ಬಗ್ಗಲ್ಲ ಆರೋಗ್ಯ

ಬಹುತೇಕ ಜನರಿಗೆ ಬೆಳಗ್ಗೆ ಬೆವರು ಸುರಿಸುವಷ್ಟು ದುಡಿಯುವುದು ಅಂದರೆ ವರ್ಕೌಔಟ್(Workout) ಮಾಡುವುದೆಂದರೆ ಖುಷಿಯೋ ಖುಷಿ. ಬೆವರು(Sweat) ಸುರಿಸಿ ದೇಹದ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅದರಲ್ಲೂ ಬ್ಯಾಟಲ್ ರೋಪ್(Battle Rope) ಅಭ್ಯಾಸ ಆರೋಗ್ಯಕ್ಕೆ ಎಷ್ಟು ಒಳ್ಳೆಯದು. ಈ ಬಗ್ಗೆ ಇಲ್ಲಿದೆ ಮಾಹಿತಿ. 

Battle Rope Exercise Can Increase your Health
Author
First Published Dec 5, 2022, 5:11 PM IST

ಇತ್ತೀಚೆಗೆ ಹೆಚ್ಚು ಪ್ರಚಲಿತವಾಗಿತ್ತಿರುವ ಫಿಟ್ನೆಸ್ ವರ್ಕೌಔಟ್(Fitness Workout) ಎಂದರೆ ಅದು ಬ್ಯಾಟಲ್ ರೋಪ್(Battle Rope). ಎರಡೂ ಕೈನಲ್ಲೂ ಹಗ್ಗ(Rope) ಹಿಡಿದು ಮಾಡುವ ಅಭ್ಯಾಸ ಇದಾಗಿದೆ. ಇಡೀ ದೇಹಕ್ಕೆ ಅಭ್ಯಾಸವನ್ನು ಒದಗಿಸುವುದಲ್ಲದೆ ಆರೋಗ್ಯಕ್ಕೆ ಬಹಳ ಪ್ರಯೋಜನಗಳನ್ನು ನೀಡುತ್ತದೆ.

ಎರಡೂ ಕೈಗಳಲ್ಲಿಯೂ ಒಂದೊAದಿ ಹಗ್ಗ ಹಿಡಿದು ಮೇಲೆ ಕೆಳಗೆ ಮಾಡುತ್ತಾ ಎಳೆಯುತ್ತಾ ಒಂದು ಕಡೆ ಅಚಲವಾಗಿ ನಿಂತು ಮಾಡುವ ಅಭ್ಯಾಸ ಇದಾಗಿದೆ. ಬ್ಯಾಟಲ್ ರೋಪ್ ಅಭ್ಯಾಸದಲ್ಲಿ ಹಗ್ಗವು ದಪ್ಪ(Thick) ಹಾಗೂ ಭಾರವಾಗಿಯೂ ಇರುವುದರಿಂದ ಒಂದು ಕಡೆ ನಿಂತುಕೊಂಡು ಅಭ್ಯಾಸ ಮಾಡಬೇಕಾಗುತ್ತದೆ. ಇದು ಕಾರ್ಡಿಯೋಗೆ(Cardio) ಅತ್ಯುತ್ತಮವಾಗಿದ್ದು, ಕೀಲುಗಳ ಮೇಲೆ ಒತ್ತಡವನ್ನು(Stress) ಉಂಟುಮಾಡುತ್ತದೆ. ಆದರೂ ದೇಹಕ್ಕೆ ಬಹಳ ಒಳ್ಳೆಯದು. ಏಕೆಂದರೆ ಈ ಅಭ್ಯಾಸ ಮಾಡುವಾಗ ಸಂಪೂರ್ಣ ಸ್ನಾಯು(Muscles) ವ್ಯವಸ್ಥೆಯನ್ನು ಬಳಸಲಾಗುತ್ತದೆ.

ಬ್ಯಾಟಲ್ ರೋಪ್ ತರಬೇತಿಯಿಂದ ಬಹಳಷ್ಟು ಪ್ರಯೋಜನವಿದೆ. ಈ ದೈತ್ಯಾಕಾರದ ಹಗ್ಗವನ್ನು ಕ್ರೀಡಾಪಟುಗಳು ಹೆಚ್ಚಿನದಾಗಿ ಬಳಸುತ್ತಾರೆ ಹಾಗೂ ತ್ವರಿತವಾಗಿ ದೇಹದ ಆಕಾರವನ್ನು(Body Posture) ಪಡೆಯುವ ಜನರಿಗೆ ಇದು ಉತ್ತಮ ತಾಲೀಮು. ಇವು ಬಹುಮುಖ, ಪೋರ್ಟಬಲ್ ಮತ್ತು ಯಾವುದೇ ವಿದ್ಯುತ್ ಅಥವಾ ತೂಕ ತರಬೇತಿ ಉಪಕರಣಗಳ ಅಗತ್ಯವಿಲ್ಲದ ಕಾರಣ ಎಲ್ಲಿ ಬೇಕಾದರೂ ಬಳಸಬಹುದು. ಬ್ಯಾಟಲ್ ರೋಪ್ ಹಗ್ಗವು 30 ಅಡಿ ಉದ್ದದಲ್ಲಿರುತ್ತದೆ. ಅವುಗಳ ಬಾಳಿಕೆ ಮತ್ತು ಹವಾಮಾನ ಬದಲಾವಣೆಗೆ ನೈಸರ್ಗಿಕ ಪ್ರತಿರೋಧದೊಂದಿಗೆ ಹೊರಾಂಗಣ ಜೀವನಕ್ರಮಕ್ಕೆ ಪರಿಪೂರ್ಣವಾಗಿದೆ.  

ರಾತ್ರಿಯಲ್ಲಿ ಜಿಮ್ ಮಾಡ್ತೀರಾ? ಮಾಡೋ ಮುನ್ನ ಇದನ್ನೊಮ್ಮೆ ಓದಿ

ಬ್ಯಾಟಲ್ ರೋಪ್‌ಗಳನ್ನು ಬಳಸುವುದರಿಂದ ಆಗುವ ಪ್ರಯೋಜನಗಳು
1. ಕೊಬ್ಬು ಮತ್ತು ಕಾರ್ಡಿಯೊವನ್ನು ಬರ್ನ್ ಮಾಡುತ್ತದೆ(Great for Burning Fat and Cardio
)

ವ್ಯಾಯಾಮದ ಸಮಯದಲ್ಲಿ ನಿಯಮಿತವಾಗಿ ಬ್ಯಾಟ್‌ಲ್ ರೋಪ್ ಅನ್ನು ಬಳಸಿದರೆ, ಸಾಮಾನ್ಯಕ್ಕಿಂತ ಹೆಚ್ಚಿನ ಕ್ಯಾಲೊರಿಗಳನ್ನು(Calories) ಬರ್ನ್ ಮಾಡಲು ಸಾಧ್ಯವಾಗುತ್ತದೆ. ನಿಮ್ಮನ್ನು ಮಿತಿಗೊಳಿಸಿದಾಗ ಹೃದಯವನ್ನು(Heart) ಗಟ್ಟಿಯಾಗಿ ಕೆಲಸ ಮಾಡಲು ಒತ್ತಾಯಿಸುತ್ತದೆ. ಇದು ಬಹುಮುಖ ಸಾಧನಗಳಾಗಿರುವುದರಿಂದ, ಹೃದಯ ಮತ್ತು ಶಕ್ತಿಯ ಅಭ್ಯಾಸದಲ್ಲಿ ಬಳಸಬಹುದು.

2. ಕೋರ್ ಬಲಪಡಿಸುತ್ತದೆ
ದೇಹದ ಸಮತೋಲನವನ್ನು ಕಾಪಾಡಿಕೊಳ್ಳಲು ಮತ್ತು ಗಾಯಗಳನ್ನು(Injuries) ತಪ್ಪಿಸಲು ಈ ಅಭ್ಯಾಸವು ಕೋರ್‌ಗಳಿಗೆ ಬಲಪಡಿಸುತ್ತದೆ. ಬ್ಯಾಟಲ್ ರೋಪ್ ಅಭ್ಯಾಸದಿಂದ ಎಬಿಎಸ್(Abs), ಬೆನ್ನು(Back), ಭುಜಗಳು(Sholders) ಮತ್ತು ತೋಳುಗಳನ್ನು(Arms) ಬಲಪಡಿಸಲು ಸಾಧ್ಯವಾಗುತ್ತದೆ.

3. ದೇಹದ ಮೇಲ್ಭಾಗವನ್ನು ಬಲಪಡಿಸುತ್ತದೆ(Improves Upper Body Strength)
ಮೇಲ್ಭಾಗದ ದೇಹ ಆರೋಗ್ಯವಾಗಿರುವುದು ಬಹಳ ಮುಖ್ಯ. ಬ್ಯಾಟಲ್ ರೋಪ್ ಅಭ್ಯಾಸದಿಂದ ದೇಹದ ಮೇಲ್ಭಾಗವನ್ನು ಶಕ್ತಿಯಾಗಿ ಹಾಗೂ ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ.  

4. ಹಿಡಿತದ ಬಲ ಹೆಚ್ಚಿಸುತ್ತದೆ(Increases Grip Strength)
ಹಿಡಿತದಲ್ಲಿ ಬಲವಿರುವುದು ಅಗತ್ಯ. ಬ್ಯಾಟಲ್ ರೋಪ್ ತರಬೇತಿಯು ಮುಂದೋಳುಗಳಲ್ಲಿ(Forearms) ಸ್ನಾಯುಗಳನ್ನು ನಿರ್ಮಿಸಬಹುದು ಮತ್ತು ನಿಮ್ಮ ಕೈಯಲ್ಲಿ ಒಟ್ಟಾರೆ ಶಕ್ತಿಯನ್ನು ಸುಧಾರಿಸಬಹುದು. ಭಾರವಾದ ಅಥವಾ ಜಾರು ಏನನ್ನಾದರೂ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದರೆ ಈ ಅಭ್ಯಾಸ ಸಹಾಯವಾಗುತ್ತದೆ.

ಎಕ್ಸರ್‌ಸೈಸ್‌ ಮಾಡೋಕೆ ಟೈಮಿಲ್ವಾ ? ಈ ಮಿನಿ ವರ್ಕೌಟ್ ಟ್ರೈ ಮಾಡ್ಬೋದು ನೋಡಿ

5. ವೇಗ ಮತ್ತು ಚುರುಕುತನ ಹೆಚ್ಚಿಸುತ್ತದೆ(Increases Speed and Agility) 
ಬ್ಯಾಟಲ್ ರೋಪ್ ತರಬೇತಿಯಲ್ಲಿ ದೇಹದ ಕೆಳ ಭಾಗವು(Lower Body) ಸ್ಟಿಫ್ ಆಗಿರುವುದು ಬಹಳ ಮುಖ್ಯ ಅವು ತೊಡೆ ಮತ್ತು ಕರುಗಳಿಗೆ(Thighs and Calves) ಅತ್ಯುತ್ತಮವಾಗಿವೆ. ಏಕೆಂದರೆ ಅಭ್ಯಾಸ ಮಾಡುವ ಸಮಯದಲ್ಲಿ ಅವು ಒಟ್ಟಾರೆ ವೇಗ ಮತ್ತು ಚುರುಕುತನವನ್ನು ಹೆಚ್ಚಿಸುತ್ತದೆ. 

6. ಉತ್ತಮ ಸಮತೋಲನ ಮತ್ತು ಸಮನ್ವಯ ಒದಗಿಸುತ್ತದೆ (Provide Better Balance and Coordination)
ಹಗ್ಗದೊಂದಿಗೆ ಬ್ಯಾಲೆನ್ಸ್ ಮಾಡುವುದು ಮೊದಲು ತಿಳಿದಿರಬೇಕು. ಅದು ನಿಮ್ಮ ವ್ಯಾಯಾಮದ ದಿನಚರಿಯಲ್ಲಿ ದೊಡ್ಡ ಸಮಸ್ಯೆಯಾಗಬಹುದು. ವ್ಯಾಯಾಮ ಮಾಡುವಾಗ ಸರಿಯಾದ ಭಂಗಿ ಮತ್ತು ಸಮತೋಲನವನ್ನು(Coordination) ಕಾಪಾಡಿಕೊಳ್ಳಲು ಬಯಸಿದರೆ ಬಲವಾದ ಕೋರ್ ಅತ್ಯಗತ್ಯ. 

7. ಹೃದಯದ ಆರೋಗ್ಯ ಸುಧಾರಿಸುತ್ತದೆ(Improves Heart Health)
ಬ್ಯಾಟಲ್ ರೋಪ್ ದೇಹದಲ್ಲಿ ರಕ್ತಪರಿಚಲನೆಯನ್ನು(Blood Circulation) ಸುಧಾರಿಸಲು ಮತ್ತು ಹೃದಯ ಬಡಿತವನ್ನು(Heart Beat) ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲದೆ ಹೃದಯರಕ್ತನಾಳದ(Heart Blood Vessels) ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

Follow Us:
Download App:
  • android
  • ios