Asianet Suvarna News Asianet Suvarna News

ಜೈಪುರದಲ್ಲಿ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಮಕ್ಕಳು ಅದಲು-ಬದಲು!

ಜೈಪುರದ ಮಹಿಳಾ ಚಿಕಿತ್ಸಾಲಯದಲ್ಲಿ ಹೆರಿಗೆಯ ಸಮಯದಲ್ಲಿ ಮಹಾ ಎಡವಟ್ಟು ನಡೆದಿದೆ. ಇಬ್ಬರು ಮಹಿಳೆಯರ ಮಕ್ಕಳು ಅದಲು ಬದಲಾಗಿದೆ. ವಿನಿಮಯ ಮಾಡಿಕೊಂಡ ಎರಡು ಶಿಶುಗಳನ್ನು ಡಿಎನ್ಎ ಪರೀಕ್ಷೆಯ ನಂತರ ಅವರ ಪೋಷಕರೊಂದಿಗೆ ಮತ್ತೆ ಸೇರಿಸಲಾಯಿತು. 

Babies Reunited With Family After Being Switched At Birth In Jaipur Vin
Author
First Published Sep 13, 2022, 12:05 PM IST

ಜೈಪುರದಲ್ಲಿ ಹುಟ್ಟಿದಾಗ ಬದಲಾವಣೆಯಾಗಿದ್ದ ಮಕ್ಕಳು ಕೊನೆಗೂ ತಮ್ಮ ತಾಯಿ ಮಡಿಲು ಸೇರಿದ್ದಾರೆ. ಜೈಪುರದ ಮಹಿಳಾ ಚಿಕಿತ್ಸಾಲಯದಲ್ಲಿ ಹೆರಿಗೆಯ ಸಮಯದಲ್ಲಿ ವಿನಿಮಯ ಮಾಡಿಕೊಂಡ ಎರಡು ಶಿಶುಗಳನ್ನು ಡಿಎನ್ಎ ಪರೀಕ್ಷೆಯ ನಂತರ ಅವರ ಪೋಷಕರೊಂದಿಗೆ ಮತ್ತೆ ಸೇರಿಸಲಾಯಿತು. ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಸೆಪ್ಟೆಂಬರ್ 1ರಂದು ಶಿಶುಗಳು ಪರಸ್ಪರ ಬದಲಾಯಿಸಲ್ಪಟ್ಟವು. ಹೆರಿಗೆಯಾದ ಮೂರು ದಿನಗಳ ನಂತರ ಆಸ್ಪತ್ರೆ ಸಿಬ್ಬಂದಿ ತಮ್ಮ ತಪ್ಪನ್ನು ಗುರುತಿಸಿದ್ದಾರೆ. 

ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಮಕ್ಕಳು ಅದಲು-ಬದಲು
ಜೈಪುರದಲ್ಲಿ ಡಿಎನ್ಎ ಪರೀಕ್ಷೆಯ ನಂತರ ಶಿಶುಗಳನ್ನು (Babies) ತಮ್ಮ ಪೋಷಕರೊಂದಿಗೆ ಮತ್ತೆ ಸೇರಿಸಲಾಯಿತು. ಆಸ್ಪತ್ರೆ ಆಡಳಿತವು ಪೊಲೀಸರ ಸಹಾಯದಿಂದ ಎರಡು ಶಿಶುಗಳ ಜೈವಿಕ ಪೋಷಕರನ್ನು ಖಚಿತಪಡಿಸಲು ಡಿಎನ್ಎ ಪರೀಕ್ಷೆ (DNA Test)ಯನ್ನು ಮಾಡಿತು. ನಿಶಾ ಗಂಡು ಮಗುವಿಗೆ ಜನ್ಮ ನೀಡಿದ್ದರೆ, ರೇಷ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಹೆಸರು ಹೇಳಲಿಚ್ಛಿಸದ ಆಸ್ಪತ್ರೆ ಆಡಳಿತದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರಂಭದಲ್ಲಿ, ಪೋಷಕರು (Parents) ತಮ್ಮ ಮಕ್ಕಳನ್ನು ಪರಸ್ಪರ ಬದಲಾಯಿಸಿಕೊಂಡಿದ್ದಾರೆ ಎಂದು ನಂಬಲು ನಿರಾಕರಿಸಿದರು. ಇದರ ನಂತರ, ಆಸ್ಪತ್ರೆಯ ಆಡಳಿತವು ಶಿಶುಗಳ ಜೈವಿಕ ಪೋಷಕರನ್ನು ಗುರುತಿಸಲು ರಕ್ತ ಪರೀಕ್ಷೆ (Blood test) ಮತ್ತು ನಂತರ ಡಿಎನ್ಎ ಪರೀಕ್ಷೆಯನ್ನು ನಡೆಸಿತು. ಡಿಎನ್‌ಎ ವರದಿಯು ನಿರ್ಲಕ್ಷ್ಯವನ್ನು ದೃಢಪಡಿಸಿದ ನಂತರ ಜೈವಿಕ ಪೋಷಕರು ಶಿಶುಗಳನ್ನು ಬದಲಾಯಿಸಲು ಒಪ್ಪಿಕೊಂಡರು ಎಂದು ಅಧಿಕಾರಿ (Officer)ಯೊಬ್ಬರು ತಿಳಿಸಿದ್ದಾರೆ.

Belagavi Rain: ಮನೆಯಲ್ಲಿ ಸಿಲುಕಿದ್ದ 12 ದಿನದ ಹಸುಗೂಸು, ಬಾಣಂತಿ ರಕ್ಷಿಸಿದ ಯುವಕರು!

ಜೈಪುರದ ಸ್ಥಳೀಯ ಆಸ್ಪತ್ರೆಯಲ್ಲಿ ಜನ್ಮ ನೀಡಿದ ಎಂಟು ದಿನಗಳ ನಂತರ, ನವಜಾತ ಶಿಶುಗಳಿಗೆ ಟ್ಯಾಗ್ ಮಾಡುವಾಗ ಆಸ್ಪತ್ರೆಯ ಅಧಿಕಾರಿಗಳು ಮಾಡಿದ ಬ್ಲೂಪರ್ ಅನ್ನು ಪರಿಹರಿಸುವ ಡಿಎನ್‌ಎ ವರದಿಗಳು ತಮ್ಮ ಶಿಶುಗಳ ಗುರುತನ್ನು ದೃಢಪಡಿಸಿದ್ದರಿಂದ ಇಬ್ಬರು ಮಹಿಳೆಯರು ಅಂತಿಮವಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಡಿಎನ್‌ಎ ಪರೀಕ್ಷೆಯಲ್ಲಿ ನಿಜಾಂಶ ಬಯಲು
ಜೈಪುರದ ಘಾಟ್ ಗೇಟ್ ನಿವಾಸಿ 25 ವರ್ಷದ ರೇಷ್ಮಾ ಅವರು ಸಂಗನೇರಿ ಗೇಟ್‌ನಲ್ಲಿರುವ ಮಹಿಳಾ ಆಸ್ಪತ್ರೆಯಿಂದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ತಿಳಿಸಿದ್ದು, ಅದೇ ಪ್ರದೇಶದ ನಿವಾಸಿ 26 ವರ್ಷದ ನಿಶಾ ಅವರು ಹೆಣ್ಣು ಮಗುವಿಗೆ ಜನ ನೀಡಿದ್ದಾರೆ ಎಂದು ತಿಳಿಸಲಾಯಿತು. ಮೂರು ದಿನಗಳ ನಂತರ ಸೆಪ್ಟೆಂಬರ್ 3ರಂದು, ಇಬ್ಬರು ತಾಯಂದಿರನ್ನು ಆಸ್ಪತ್ರೆಯ ಅಧಿಕಾರಿಗಳು ತಮ್ಮ ಶಿಶುಗಳೊಂದಿಗೆ 'ತುರ್ತು ವೈದ್ಯಕೀಯ ಪರೀಕ್ಷೆಗೆ' ಬರುವಂತೆ ಕರೆದರು. ಇಬ್ಬರು ಮಹಿಳೆಯರು ತಮ್ಮ ಕುಟುಂಬಗಳೊಂದಿಗೆ ಆಸ್ಪತ್ರೆಗೆ ಧಾವಿಸಿದಾಗ, ಅವರು ಆಘಾತಕ್ಕೊಳಗಾದರು. ಜನನದ ಸಮಯದಲ್ಲಿ ಆಸ್ಪತ್ರೆಯು ಶಿಶುಗಳನ್ನು ತಪ್ಪಾಗಿ ಬದಲಾಯಿಸಿದೆ ಎಂದು ತಿಳಿಸಿದರು. 

Children Care: ಮಗು ರಾತ್ರಿ ಪದೇ ಪದೇ ಎದ್ದೇಳುತ್ತಾ? ಹಸಿವಾಗಿರಬಹುದು ನೋಡಿ

ಉದ್ರಿಕ್ತ ಪೋಷಕರು ಗದ್ದಲ ಸೃಷ್ಟಿಸಿದ್ದು, ಪರಿಸ್ಥಿತಿ ನಿಯಂತ್ರಿಸಲು ಆಸ್ಪತ್ರೆ ಆಡಳಿತ ಪೊಲೀಸರಿಗೆ ಕರೆ ಮಾಡಬೇಕಾಯಿತು. ಇಬ್ಬರು ತಾಯಂದಿರು ಹಾಗೂ ಇಬ್ಬರು ನವಜಾತ ಶಿಶುಗಳನ್ನು ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಅದರ ನಂತರ, ಆಸ್ಪತ್ರೆಯ ಅಧಿಕಾರಿಗಳು ನವಜಾತ ಶಿಶುಗಳ ಗುರುತನ್ನು ದೃಢೀಕರಿಸಲು ಡಿಎನ್ಎ ಪರೀಕ್ಷೆಯ ಮಾರ್ಗವನ್ನು ತೆಗೆದುಕೊಂಡರು. ಪರೀಕ್ಷಾ ವರದಿಯಲ್ಲಿ ನಿಶಾ ಗಂಡು ಮಗುವಿಗೆ,  ರೇಷ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿರುವುದು ತಿಳಿದುಬಂತು. ಮೂರು ದಿನಗಳ ಕಾಲ ಬೇರೊಬ್ಬರ ಮಗುವಿಗೆ ಹಾಲುಣಿಸುತ್ತಿದ್ದರೂ, ಅವರು ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಂಡರು ಎಂದು ಇಬ್ಬರು ತಾಯಂದಿರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಆಸ್ಪತ್ರೆ ಅಧೀಕ್ಷಕಿ ಆಶಾ ವರ್ಮಾ, ‘ಆಸ್ಪತ್ರೆಯ ಕಡೆಯಿಂದ ತಪ್ಪಾಗಿರುವುದು ನಿಜ, ಆಸ್ಪತ್ರೆ ಆಡಳಿತವೇ ತನ್ನ ತಪ್ಪನ್ನು ಕಂಡು ಹಿಡಿದಿದೆ. ಆಸ್ಪತ್ರೆಯಲ್ಲಿ ಪ್ರತಿದಿನ 50ರಿಂದ 70 ಹೆರಿಗೆಯಾಗುತ್ತಿದೆ.ಆದರೂ ಇಂತಹ ಪ್ರಸಂಗ ಮೊದಲ ಬಾರಿಗೆ ಗಮನಕ್ಕೆ ಬಂದಿದೆ. ಇಂತಹ ತಪ್ಪು ಮರುಕಳಿಸದಂತೆ ನೋಡಿಕೊಳ್ಳಲು ಸಮಿತಿಯ ಸದಸ್ಯರು ಕೆಲವು ಸಲಹೆಗಳನ್ನು ನೀಡಿದ್ದು, ಅವುಗಳನ್ನು ಕಾರ್ಯಗತಗೊಳಿಸಲಾಗುವುದು' ಎಂದು ಹೇಳಿದರು.

Follow Us:
Download App:
  • android
  • ios