Asianet Suvarna News Asianet Suvarna News

ತೀರ ತುರ್ತು ಇದ್ದರೆ ಮಾತ್ರ ಐಸಿಯುಗೆ ದಾಖಲು: ಮೊದಲ ಬಾರಿ ಕೇಂದ್ರ ಸರ್ಕಾರ ಮಾರ್ಗಸೂಚಿ

ದೇಶದಲ್ಲಿ ಐಸಿಯು ಪರಿಮಿತ ಸಂಪನ್ಮೂಲವಾಗಿದ್ದು, ಇವು ಅತ್ಯಂತ ಅಗತ್ಯವಿರುವವರಿಗೆ ದೊರೆಯಬೇಕು ಎಂಬುದು ನಮ್ಮ ಮೂಲ ಉದ್ದೇಶವಾಗಿದೆ ಎಂದು ಸಮಿತಿಯ ಸದಸ್ಯರಾದ ಡಾ.ಆರ್‌.ಕೆ.ಮಣಿ ಹೇಳಿದ್ದಾರೆ.

as covid cases rise again centre lays down guidelines for icu admissions ash
Author
First Published Jan 1, 2024, 1:27 PM IST

ನವದೆಹಲಿ (ಜನವರಿ 1, 2024): ರೋಗಿಗಳನ್ನು ತುರ್ತು ನಿಗಾ ಘಟಕ (ಐಸಿಯು) ಕ್ಕೆ ಸೇರ್ಪಡೆ ಮಾಡಿಕೊಳ್ಳಲು ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ನಿಯಮಾವಳಿಗಳನ್ನು ರೂಪಿಸಿದೆ. ದೇಶದ ಪ್ರತಿಷ್ಠಿತ 24 ವೈದ್ಯರ ಸಮಿತಿ ಈ ನಿಯಮಗಳನ್ನು ರೂಪಿಸಿದೆ.

‘ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರೆ, ಉಸಿರಾಟ ಯಂತ್ರ ಅಳವಡಿಸಬೇಕಾದ ಪರಿಸ್ಥಿತಿ ಇದ್ದರೆ, ಹೆಚ್ಚಿನ ನಿಗಾ ವಹಿಸಬೇಕಾದ ಸ್ಥಿತಿಗಳಲ್ಲಿ, ಶಸ್ತ್ರ ಚಿಕಿತ್ಸೆಯ ನಂತರ ಚಿಕಿತ್ಸೆಗಾಗಿ, ತೀವ್ರವಾದ ಶಸ್ತ್ರಚಿಕಿತ್ಸೆ ಅಗತ್ಯವಿದ್ದ ಸಮಯದಲ್ಲಿ ಐಸಿಯುಗಳಲ್ಲಿ ಮಾತ್ರ ಅಡ್ಮಿಟ್‌ ಮಾಡಿಕೊಳ್ಳಬಹುದು ಎಂದು ಈ ಸಮಿತಿ ಹೇಳಿದೆ. ದೇಶದಲ್ಲಿ ಐಸಿಯು ಪರಿಮಿತ ಸಂಪನ್ಮೂಲವಾಗಿದ್ದು, ಇವು ಅತ್ಯಂತ ಅಗತ್ಯವಿರುವವರಿಗೆ ದೊರೆಯಬೇಕು ಎಂಬುದು ನಮ್ಮ ಮೂಲ ಉದ್ದೇಶವಾಗಿದೆ’ ಎಂದು ಸಮಿತಿಯ ಸದಸ್ಯರಾದ ಡಾ.ಆರ್‌.ಕೆ.ಮಣಿ ಹೇಳಿದ್ದಾರೆ.

 

ಇದನ್ನು ಓದಿ: ಹೃದಯಾಘಾತದ ಬಳಿಕ ಗಂಟೆಗೂ ಹೆಚ್ಚು ಕಾಲ ನಿಂತಿದ್ದ ಹೃದಯ ಬಡಿತ: ಆದರೂ ವ್ಯಕ್ತಿ ಬದುಕುಳಿದಿದ್ದು ಹೀಗೆ..

ಭಾರತದಲ್ಲಿ ಸುಮಾರು 1 ಲಕ್ಷ ಐಸಿಯು ಹಾಸಿಗೆಗಳ ಸೌಲಭ್ಯವಿದ್ದು, ಇವುಗಳಲ್ಲಿ ಬಹುಪಾಲು ಖಾಸಗಿ ಹಾಗೂ ಮಹಾನಗರಗಳಲ್ಲಿವೆ. ಬಡ ಜನರು ಖಾಸಗಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯವನ್ನು ಪಡೆದುಕೊಳ್ಳುವುದು ದುಸ್ತರವಾಗಿದೆ. ಹೀಗಾಗಿಯೇ ಎಲ್ಲರಿಗೂ ಈ ಸೌಲಭ್ಯ ದೊರೆಯಬೇಕು ಎಂಬ ಕಾರಣಕ್ಕೆ ನಿಯಮಗಳನ್ನು ರೂಪಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ಇದನ್ನು ಓದಿ: ದೇಶದ ಮೊದಲ ಯಕೃತ್ ಕಸಿಗೆ 25 ವರ್ಷ : ಯಕೃತ್ ಕಸಿಗೊಳಗಾದ ಮೊದಲ ಮಗು ಈಗ ವೈದ್ಯ

Follow Us:
Download App:
  • android
  • ios