Asianet Suvarna News Asianet Suvarna News

Hair Care : ತುಳಸಿ ಬೀಜದಲ್ಲಿದೆ ಕೂದಲ ಸೌಂದರ್ಯದ ಗುಟ್ಟು

ಸುಂದರ ಕೂದಲು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು, ತಲೆ ಹೊಟ್ಟು, ಬಿಳಿ ಕೂದಲಿನ ಸಮಸ್ಯೆ ಹೆಚ್ಚಾಗ್ತಿದೆ. ಇದಕ್ಕೆ ಮನೆಯಲ್ಲಿರುವ ವಸ್ತುಗಳನ್ನೇ ಬಳಸಿಕೊಂಡು ಔಷಧಿ ಮಾಡ್ಬಹುದು. ತುಳಸಿ ಬೀಜದಲ್ಲೂ ಕೂದಲು ರಕ್ಷಿಸುವ ಶಕ್ತಿಯಿದೆ. 
 

Are basil seeds good for hair growth
Author
Bangalore, First Published Apr 2, 2022, 2:05 PM IST

ತುಳಸಿ (Basil) ಗೆ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನವಿದೆ. ತುಳಸಿಯನ್ನು ಲಕ್ಷ್ಮಿ (Laxmi) ಗೆ ಹೋಲಿಕೆ ಮಾಡಲಾಗುತ್ತದೆ. ಭಾರತೀಯ ಆಯುರ್ವೇದ (Ayurveda) ದಲ್ಲಿ ತುಳಸಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಔಷಧೀಯ (Medicine) ಗುಣಗಳಿಂದ ಕೂಡಿರುವ ತುಳಸಿಯ ಬಳಕೆಯು ಹಲವಾರು ಗಂಭೀರ ಕಾಯಿಲೆಗಳಿಗೆ ಪ್ರಯೋಜನಕಾರಿ. ತುಳಸಿಯಲ್ಲಿ ರೋಗ ನಿರೋಧಕ ಶಕ್ತಿಯ ಗುಣವಿದೆ. ಬರೀ ತುಳಸಿ ಎಲೆ ಮಾತ್ರವಲ್ಲ, ತುಳಸಿ ಬೀಜಗಳು ಸಹ  ಸಾಕಷ್ಟು ಪ್ರಯೋಜನವನ್ನು ಹೊಂದಿದೆ. ತುಳಸಿ ಬೀಜಗಳು ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಬಳಕೆಯಾಗುತ್ತದೆ. ತುಳಸಿ ಬೀಜಗಳು ಕೂದಲಿಗೆ ತುಂಬಾ ಪ್ರಯೋಜನಕಾರಿ. ಕೂದಲು ಉದುರುವುದ್ರಿಂದ ಹಿಡಿದು ತಲೆ ಹೊಟ್ಟಿನವರೆಗೆ ಅನೇಕ ಸಮಸ್ಯೆಗಳಿಗೆ ತುಳಸಿ ಬೀಜ ರಾಮಬಾಣ. 

ತುಳಸಿ ಬೀಜದಲ್ಲಿ ಪ್ರೋಟೀನ್, ಕಬ್ಬಿಣ, ಪೊಟ್ಯಾಸಿಯಮ್, ಫೋಲಿಕ್ ಆಮ್ಲ, ಫೈಬರ್, ಒಮೆಗಾ 3, ಕೊಬ್ಬಿನಾಮ್ಲಗಳು, ಫೈಟೊಕೆಮಿಕಲ್ಸ್, ಪಾಲಿಫಿನಾಲಿಕ್ ಮತ್ತು ಲುಟೀನ್ ಮುಂತಾದ ಅಂಶಗಳು   ಕಂಡುಬರುತ್ತವೆ. ತುಳಸಿ ಬೀಜಗಳು ಕೂದಲನ್ನು ಆರೋಗ್ಯಕರವಾಗಿಸಲು ತುಂಬಾ ಸಹಾಯಕವಾಗಿದೆ. ತುಳಸಿ ಬೀಜಗಳನ್ನು ಕೂದಲಿಗೆ ಬಳಸುವ ವಿಧಾನಗಳು ಮತ್ತು ಅದರ ಕೆಲವು ಪ್ರಯೋಜನಗಳ ಬಗ್ಗೆ ಹೇಳುತ್ತೀವಿ.

ತುಳಸಿ ಬೀಜದಿಂದಾಗುವ ಪ್ರಯೋಜನ 

ಕವಲೊಡೆಯುವ ಕೂದಲಿಗೆ ಪರಿಹಾರ : ಅನೇಕರ ಕೂದಲು ತುದಿ ಕವಲೊಡೆದಿರುತ್ತದೆ. ಅದನ್ನು ಎಷ್ಟೇ ಕತ್ತರಿಸಿದ್ರೂ ಮತ್ತೆ ಆ ಸಮಸ್ಯೆ ಕಾಡುತ್ತದೆ. ತುಳಸಿ ಬೀಜಗಳಲ್ಲಿ ಕಬ್ಬಿಣ ಮತ್ತು ಕೊಬ್ಬಿನಾಮ್ಲಗಳು ಹೇರಳವಾಗಿವೆ. ಇದು ಕೂದಲಿನ ತುದಿ ಒಡೆಯುವ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. 

ತಯಾರಿಸುವ ವಿಧಾನ : ತುಳಸಿ ಬೀಜಗಳಿಂದ ತಯಾರಿಸಿದ ಪುಡಿಗೆ ನೆಲ್ಲಿಕಾಯಿ ಮತ್ತು ಅಂಟುವಾಳ ಪುಡಿಯನ್ನು ಬೆರೆಸಿ ಕೂದಲಿಗೆ ಹಚ್ಚಬೇಕು. ಎರಡು ಗಂಟೆಗಳ ನಂತರ ಕೂದಲನ್ನು ಶುದ್ಧ ನೀರಿನಿಂದ ತೊಳೆಯಬೇಕು. ಪದೇ ಪದೇ ಕೂದಲಿಗೆ ಇದನ್ನು ಹಚ್ಚುವುದ್ರಿಂದ ಕೂದಲು ಒಡೆಯುವುದು ಕಡಿಮೆಯಾಗುತ್ತದೆ.

ಈ ಹೋಂ ಮೇಡ್ Hair Mask ಬಳಸಿ ಕೂದಲಿನ ಸಮಸ್ಯೆಗೆ ಬೈ ಬೈ ಹೇಳಿ

ತಲೆಹೊಟ್ಟಿಗೆ ತುಳಸಿ ಬೀಜದಲ್ಲಿದೆ ಪರಿಹಾರ :  ತುಳಸಿ ಬೀಜಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕ ಗುಣಗಳು ಹೇರಳವಾಗಿ ಕಂಡುಬರುತ್ತವೆ. 

ಮಾಡುವ ವಿಧಾನ : ಮೊದಲು ತುಳಸಿ ಬೀಜಗಳನ್ನು ಒಣಗಿಸಿ ಪುಡಿ ಮಾಡಿ. ನಂತರ ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆಯಲ್ಲಿ ತುಳಸಿ ಕಾಳುಗಳ ಪುಡಿಯನ್ನು ಬೆರೆಸಿ ನೆತ್ತಿ ಮೇಲೆ ಹಾಕಿ ಮಸಾಜ್ ಮಾಡಿ. ಇದು ತಲೆಹೊಟ್ಟಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ವಾರದಲ್ಲಿ ಒಮ್ಮೆಯಾದ್ರೂ ಈ ಮಿಶ್ರಣ ಹಚ್ಚಿ ಮಸಾಜ್ ಮಾಡಿದ್ರೆ ಸಮಸ್ಯೆ ನಿಧಾನವಾಗಿ ಕಡಿಮೆಯಾಗುತ್ತದೆ.

Hair Loss : ತಲೆ ಬೋಳಾಗ್ಬಾರದಂದ್ರೆ ಇದರ ಸೇವನೆ ಕಡಿಮೆ ಮಾಡಿ

ಮೃದು ಹಾಗೂ ಹೊಳೆಯುವ ಕೂದಲಿಗೆ ತುಳಸಿ ಬೀಜ : ತುಳಸಿ ಬೀಜದಲ್ಲಿರುವ ವಿಟಮಿನ್ ಎ ಮತ್ತು ವಿಟಮಿನ್ ಸಿ ಕೂದಲನ್ನು ಮೃದುವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ಇದಕ್ಕಾಗಿ ನೀವು ತುಳಸಿ ಬೀಜಗಳಿಂದ ಮಾಡಿದ ಹೇರ್ ಮಾಸ್ಕ್ ಅನ್ನು ಬಳಸಬಹುದು. 

ಹೇರ್ ಮಾಸ್ಕ್ ಮಾಡುವ ವಿಧಾನ : ಹೇರ್ ಮಾಸ್ಕ್ ಮಾಡಲು ತುಳಸಿ ಕಾಳು ಮತ್ತು ದಾಸವಾಳದ ಪುಡಿಯನ್ನು ಸಾಸಿವೆ ಎಣ್ಣೆ ಅಥವಾ ತೆಂಗಿನೆಣ್ಣೆಯಲ್ಲಿ ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಮತ್ತು ಒಣಗಿದ ನಂತರ ಸೌಮ್ಯವಾದ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ. 

ಒತ್ತಡದಿಂದ ಮುಕ್ತಿ :  ತುಳಸಿ ಬೀಜಗಳಲ್ಲಿ ಒತ್ತಡ ನಿವಾರಕ ಮತ್ತು ಉರಿಯೂತ ನಿವಾರಕ ಗುಣಗಳು ಹೇರಳವಾಗಿ ಕಂಡುಬರುತ್ತವೆ. ತಲೆನೋವು ಮತ್ತು ಒತ್ತಡವನ್ನು ನಿವಾರಿಸುವಲ್ಲಿ ಇದು ಪರಿಣಾಮಕಾರಿಯಾಗಿದೆ. ಇದಕ್ಕಾಗಿ ತುಳಸಿ ಕಾಳುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ, ಈ ನೀರಿನಲ್ಲಿ ನಿಂಬೆ ರಸ ಮತ್ತು ಕೆಲವು ಹನಿ ಮಲ್ಲಿಗೆ ಎಣ್ಣೆಯನ್ನು ಬೆರೆಸಿ ಕೂದಲಿಗೆ ಮಸಾಜ್ ಮಾಡಿ. ಇದರಿಂದ  ಒತ್ತಡ ಕಡಿಮೆಯಾಗುತ್ತದೆ. ಮನಸ್ಸು ಶಾಂತವಾಗುತ್ತದೆ.
 

Follow Us:
Download App:
  • android
  • ios