ಏಮ್ಸ್‌ ಮಾದರಿಯ ಸುಸಜ್ಜಿತ ಆಸ್ಪತ್ರೆ ಬಗ್ಗೆ ಠರಾವು ಹೊರಡಿಸಲು ಮನವಿ

ತ್ತರಕನ್ನಡ ಜಿಲ್ಲೆಯಲ್ಲಿ ಏಮ್ಸ್‌ ಮಾದರಿಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ಕುರಿತಾಗಿ ತಾಲೂಕು ವ್ಯಾಪ್ತಿಯ ಗ್ರಾಪಂಗಳಿಂದ ಅಧಿಕೃತ ಬೆಂಬಲ ಸೂಚಿಸಿ ಠರಾವು ಪತ್ರ ನೀಡುವ ಕುರಿತು ಉತ್ತರ ಕನ್ನಡ ಜಿಲ್ಲೆ ಸಂಘಟನೆ ಒಕ್ಕೂಟದ ಸದಸ್ಯರು ಸೋಮವಾರ ಮನವಿ ಮೂಲಕ ವಿನಂತಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ.

A request to issue a decree for a well equipped AIIMS type hospital

ಹೊನ್ನಾವರ (ಆ.31) : ಉತ್ತರಕನ್ನಡ ಜಿಲ್ಲೆಯಲ್ಲಿ ಏಮ್ಸ್‌ ಮಾದರಿಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ಕುರಿತಾಗಿ ತಾಲೂಕು ವ್ಯಾಪ್ತಿಯ ಗ್ರಾಪಂಗಳಿಂದ ಅಧಿಕೃತ ಬೆಂಬಲ ಸೂಚಿಸಿ ಠರಾವು ಪತ್ರ ನೀಡುವ ಕುರಿತು ಉತ್ತರ ಕನ್ನಡ ಜಿಲ್ಲೆ ಸಂಘಟನೆ ಒಕ್ಕೂಟದ ಸದಸ್ಯರು ಸೋಮವಾರ ಮನವಿ ಮೂಲಕ ವಿನಂತಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಹೊನ್ನಾವರದಲ್ಲೂ ಪ್ರತಿಭಟನೆ, ಚುನಾವಣೆ ಬಹಿಷ್ಕಾರದ ಎಚ್ಚರಿಕೆ

ಉತ್ತರ ಕನ್ನಡ ಜಿಲ್ಲಾ ಸಂಘಟನಾ ಒಕ್ಕೂಟದ ಅಧ್ಯಕ್ಷ ರಾಜು ಮಾಸ್ತಿಹಳ್ಳ ಮಾತನಾಡಿ, ಜಿಲ್ಲೆಯ ಜನರ ಬಹುವರ್ಷಗಳ ಬೇಡಿಕೆ ಹಾಗೂ ಮೂಲಭೂತ ಹಕ್ಕಾದ ಸುಸಜ್ಜಿತ ಮಲ್ಟಿಸ್ಟೆಷಾಲಿಟಿ ಆಸ್ಪತ್ರೆಯ ನಿರ್ಮಾಣದ ಜನಪರ ಹೋರಾಟದ ಕೂಗು ಈಗಾಗಲೇ ವಿವಿಧ ರೀತಿಯ ಪ್ರತಿಭಟನಾ ಹೋರಾಟದ ಮೂಲಕ ನಡೆದಿದೆ. ಆದರೆ ಇದುವರೆಗೂ ಜಿಲ್ಲೆಯ ಜನತೆ ಬೇಡಿಕೆ ಈಡೇರದೇ ಇರುವುದರಿಂದ ಸರ್ಕಾರದ ಮೇಲೆ ಒತ್ತಡ ಹಾಕಲು ಕುಮಟಾದಲ್ಲಿ ಜಿಲ್ಲೆಯ ಜನತೆ ಒಂದಾಗಿ ಜಾತ್ಯತೀತ, ಪಕ್ಷಾತೀತವಾಗಿ ಹೋರಾಟ ಮಾಡಲು ಜಿಲ್ಲಾ ಸಂಘಟನೆಗಳ ಒಕ್ಕೂಟದಿಂದ ನಿರ್ಧರಿಸಿದ್ದೇವೆ ಎಂದು ಗ್ರಾಪಂ ಅಧ್ಯಕ್ಷರಿಗೆ ಬೃಹತ್‌ ಪ್ರತಿಭಟನೆಯ ರೂಪುರೇಷೆ ಬಗ್ಗೆ ತಿಳಿಸಿದರು.

ಪಂಚಾಯತದ ಸರ್ವ ಸದಸ್ಯರು, ಅಧ್ಯಕ್ಷರು, ಸಂಪೂರ್ಣ ಸಹಕಾರವನ್ನು ಜನಪರ ಹೋರಾಟಕ್ಕೂ ನೀಡಬೇಕು. ಸದಸ್ಯರ ಸಭೆ ಕರೆದು ಸರ್ವಾನುಮತದ ಬೆಂಬಲದ ಠರಾವು ಪ್ರತಿಯನ್ನು ನೀಡಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ.

ಉತ್ತರ ಕನ್ನಡಕ್ಕೊಂದು ಆಸ್ಪತ್ರೆಗಾಗಿ ಬೆಂಗ್ಳೂರಲ್ಲಿ ಪ್ರತಿಭಟನೆ, ಮನ್ ಕೀ ಬಾತ್‌ಗೆ ಕರೆ ಮಾಡಲು ನಿರ್ಣಯ

ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಬೇಕೇ ಬೇಕು. ಅದು ಇನ್ನು ವಿಳಂಬವಾದರೆ ಜಿಲ್ಲೆಯಲ್ಲಿ ದೊಡ್ಡ ಕ್ರಾಂತಿಯಾಗಲಿದೆ. ಕ್ರಾಂತಿ ಆರಂಭವಾದ ಮೊದಲ ಹೆಜ್ಜೆಯಂತೆ ಈ ಪ್ರಕ್ರಿಯೆಯಾಗಿದೆ. ಪ್ರಾರಂಭಿಕವಾಗಿ ಕೆಳಗಿನೂರು, ಕಾಸರಕೊಡು, ಸಾಲ್ಕೋಡ್‌ ಪಂಚಾಯತಕ್ಕೆ ಭೇಟಿ ನೀಡಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದು ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲ ಗ್ರಾಪಂಗಳಿಗೂ ಭೇಟಿ ನೀಡಲಿದ್ದೇವೆ ಎಂದು ಸಂಘಟಕರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜ್ಞಾನೇಶ್ವರ ಎಂ. ನಾಯ್ಕ ಮೊಳ್ಕೋಡ, ಸಚಿನ ಗಜಾನನ ನಾಯ್ಕ, ರಾಜೇಶ್‌ ನಾಯ್ಕ ನಾಜಗಾರ, ಜಗದೀಶ ನಾಯ್ಕ ಗುಣವಂತೆ ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios