ಕೊರೋನಾ ವೈರಸ್ ಸ್ವಾಬ್‌ ಟೆಸ್ಟ್‌ನಿಂದ ಮಹಿಳೆಯ ಮೆದುಳಿಗೆ ಹಾನಿಯಾದ ಘಟನೆ ಅಮೆರಿಕದಲ್ಲಿ ನಡೆದಿದೆ. ಇದರ ಪರಿಣಾಮವಾಗಿ ಮೆದುಳಿನ ದ್ರವ ಮೂಗಿನಲ್ಲಿ ಸೋರಿಕೆಯಾಗಿದೆ.

ಸ್ವಾಬ್ ಟೆಸ್ಟ್‌ನಿಂದ ಮಹಿಳೆಯ ಬ್ರೈನ್ ಲೈನಿಂಗ್ ಪಂಕ್ಚರ್ ಆಗಿದ್ದು, ಇದೀಗ ಜೀವಕ್ಕೆ ಅಪಾಯ ತಂದಿಟ್ಟಿದೆ. 40 ವರ್ಷದ ಮಹಿಳೆಗೆ ಕೊರೋನಾ ಟೆಸ್ಟ್ ಈಗ ಕಂಟಕವಾಗಿದೆ. ಸ್ವಾಬ್ ಟೆಸ್ಟ್‌ನಲ್ಲಿ ಅಪಾಯವಾದಂತಹ ಘಟನೆ ನಡೆದಿದ್ದು, ಭಾರೀ ಕಡಿಮೆ. ಆದರೆ ಅಪರೂಪವೆಂಬಂತೆ ಈ ಮಹಿಳೆ ಮೆದುಳಿಗೆ ಹಾನಿಯಾಗಿದೆ.

ಆನ್‌ಲೈನ್ ಖರೀದಿಯಲ್ಲಿ ಇರಲಿ ಎಚ್ಚರ: Amazonನ 20 ಸಾವಿರ ಸಿಬ್ಬಂದಿಗೆ ಕೊರೋನಾ

ಈ ಘಟನೆಯಿಂದಾಗಿ ಆರೋಗ್ಯ ಸಿಬ್ಬಂದಿಗಳು ಸ್ವಾಬ್ ಟೆಸ್ಟ್ ಮಾಡುವಾಗ ಇನ್ನಷ್ಟು ಎಚ್ಚರಿಕೆಯಿಂದಿರಬೇಕೆಂದು ಸೂಚನೆ ನೀಡಲಾಗಿದೆ. ವ್ಯಾಪಕ ಸೈನಸ್ ಅಥವಾ ಸ್ಕಲ್ ಬೇಸ್ ಸರ್ಜರಿ ಮಾಡಿದ ಜನರು ಲಭ್ಯವಿದ್ದರೆ ಮೌಖಿಕ ಪರೀಕ್ಷೆಯನ್ನೇ ಆಯ್ಕೆ ಮಾಡಿಕೊಳ್ಳಬೇಕೆಂದು ಸೂಚಿಸಲಾಗಿದೆ.

ಈ ಮೂಲಕ ಕೊರೋನಾ ಸ್ವಾಬ್ ಟೆಸ್ಟ್ ಮಾಡುವವರಿಗೆ ಅಗತ್ಯ ತರಬೇತಿಗಳನ್ನು ನೀಡಿ ಪರಿಣಿತರನ್ನಾಗಿ ಮಾಡುವ ಬಗ್ಗೆಯೂ ಸೂಚನೆ ನೀಡಲಾಗಿದೆ. ತಲೆ ನೋವು, ವಾಂತಿ, ಕುತ್ತಿಗೆ ನೋವು ಕಾಣಿಸಿಕೊಂಡಿತ್ತು. ಮೊದಲ ಸ್ವಾಬ್ ಟೆಸ್ಟ್ ಮಾಡಿದಾಗ ಸಮಸ್ಯೆಯಾಗಿರಲಿಲ್ಲ. ಎರಡನೇ ಸ್ವಾಬ್‌ನಲ್ಲಿ ಸಮಸ್ಯೆಯಾಗಿತ್ತು.