ಕೇರಳದಲ್ಲಿ ವೈದ್ಯರ ಮೇಲಿನ ಹಲ್ಲೆಗೆ 7 ವರ್ಷ ಜೈಲು ಶಿಕ್ಷೆ
ವೈದ್ಯರು ಚಿಕಿತ್ಸೆ ನೀಡುವಾಗ ರೋಗಿಗಳು ರೊಚ್ಚಿಗೆದ್ದು ಅಟ್ಯಾಕ್ ಮಾಡುವ ಘಟನೆ ಈ ಹಿಂದೆ ಹಲವು ಬಾರಿ ನಡೆದಿದೆ. ಹೀಗಾಗಿ ಕೇರಳದಲ್ಲಿ ವೈದ್ಯರ ಮೇಲಿನ ಹಲ್ಲೆಗೆ 7 ವರ್ಷ ಜೈಲು ಶಿಕ್ಷೆ ನೀಡಲು ಮುಂದಾಗಿದೆ. ಈ ಸುಗ್ರೀವಾಜ್ಞೆಗೆ ಸಚಿವ ಸಂಪುಟ ಒಪ್ಪಿಗೆ ಸಿಕ್ಕಿದ್ದು, ರಾಜ್ಯಪಾಲರ ಅನುಮತಿ ಸಿಗಲು ಬಾಕಿಯಿದೆ.
ತಿರುವನಂತಪುರ: ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ವೈದ್ಯಕೀಯ ಸೇವಾವಲಯದಲ್ಲಿ ಕೆಲಸ ಮಾಡುವವರ ಮೇಲೆ ಹಲ್ಲೆ ನಡೆಸಿದವರಿಗೆ 7 ವರ್ಷಗಳವರೆಗೆ ಜೈಲು ಶಿಕ್ಷೆ, 5 ಲಕ್ಷ ರೂ.ವರೆಗೆ ದಂಡ ವಿಧಿಸುವ ಸುಗ್ರೀವಾಜ್ಞೆಗೆ ಕೇರಳ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದಕ್ಕೆ ರಾಜ್ಯಪಾಲರು ಒಪ್ಪಿಗೆ ಬಾಕಿಯಿದೆ. ಇತ್ತೀಚೆಗೆ ಕೊಲ್ಲಂ ಜಿಲ್ಲೆಯಲ್ಲಿ ರೋಗಿಯಿಂದಲೇ ವೈದ್ಯರೊಬ್ಬರ ಕೊಲೆ ನಡೆದ ಬೆನ್ನಲ್ಲೇ ರಾಜ್ಯ ಸಚಿವ ಸಂಪುಟ ಈ ಸುಗ್ರೀವಾಜ್ಞೆಗೆ ಒಪ್ಪಿಗೆ ನೀಡಿದೆ.
ಕೇರಳ ಆರೋಗ್ಯ ಸೇವಾ ಕಾರ್ಯಕರ್ತರು ಮತ್ತು ಆರೋಗ್ಯ (Health) ಸೇವೆ ಸಂಸ್ಥೆಗಳ (ಹಲ್ಲೆ ಮತ್ತು ಆಸ್ತಿ ರಕ್ಷಣೆ) ತಿದ್ದುಪಡಿ ಸುಗ್ರೀವಾಜ್ಞೆಯ ಪ್ರಕಾರ, ವೈದ್ಯರೂ ಸೇರಿದಂತೆ ಆರೋಗ್ಯ ಕಾರ್ಯಕರ್ತರ ಮೇಲೆ ದೈಹಿಕ ಹಲ್ಲೆ ನಡೆಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಇಂತಹವರಿಗೆ 1 ವರ್ಷದಿಂದ 7 ವರ್ಷದವರೆಗೆ ಜೈಲು ಶಿಕ್ಷೆ (Imprisonment) ಮತ್ತು 1 ಲಕ್ಷ ರು.ನಿಂದ 5 ಲಕ್ಷ ರು.ವರಗೆ ದಂಡ ವಿಧಿಸಲಾಗುತ್ತದೆ. ಅಲ್ಲದೇ ವೈದ್ಯಕೀಯ ಸಿಬ್ಬಂದಿ (Medical staff) ಮೇಲೆ ಹಲ್ಲೆಗೆ ಯತ್ನಿಸಿದವರಿಗೂ 6 ತಿಂಗಳಿಗೆ ಕಡಿಮೆ ಇಲ್ಲದಂತೆ ಹಾಗೂ ಗರಿಷ್ಠ 5 ವರ್ಷ ಹಾಗೂ 20 ಸಾವಿರ ರು.ನಿಂದ 2 ಲಕ್ಷ ರು.ವರೆಗೆ ದಂಡ ವಿಧಿಸಲಾಗುತ್ತದೆ ಎಂದು ಸುಗ್ರೀವಾಜ್ಞೆಯಲ್ಲಿ ತಿಳಿಸಲಾಗಿದೆ.
Dengue Vaccine: ಡೆಂಗ್ಯೂ ಜ್ವರಕ್ಕೆ ಸದ್ಯದಲ್ಲೇ ಬರಲಿದೆ ಮೊದಲ ಸ್ವದೇಶಿ ಲಸಿಕೆ
ಈ ಸುಗ್ರೀವಾಜ್ಞೆ ತರುವ ಮೊದಲು ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದವರಿಗೆ ಗರಿಷ್ಠ 3 ವರ್ಷಗಳ ಶಿಕ್ಷೆ ಮತ್ತು 50 ಸಾವಿರ ರು. ದಂಡ ವಿಧಿಸಲಾಗುತ್ತಿತ್ತು. ಇದರೊಂದಿಗೆ ಈ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ್ಯ ಮಾಡಲು, ವಿಶೇಷ ನ್ಯಾಯಾಲಯಗಳನ್ನು ಸಹ ಸ್ಥಾಪಿಸಲು ಈ ಸುಗ್ರೀವಾಜ್ಞೆ ಅನುಮತಿ ನೀಡುತ್ತದೆ. ಇತ್ತೀಚೆಗೆ ಕೊಲ್ಲಂ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ವೈದ್ಯೆಯನ್ನು ರೋಗಿಯೇ ಹತ್ಯೆ ಮಾಡಿದ್ದ ಘಟನೆ ನಡೆದಿದ್ದು, ಇದಾದ ಬಳಿಕ ರಾಜ್ಯದಲ್ಲಿ ವೈದ್ಯರ ಸುರಕ್ಷತೆಗೆ ಸಂಬಂಧಿಸಿದಂತೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು.
ಕೊಲ್ಲಂನಲ್ಲಿ ತನಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯೆಯನ್ನೇ ಇರಿದು ಕೊಂದ ರೋಗಿ
ಗಾಯಕ್ಕೆ ಬ್ಯಾಂಡೇಜ್ ಮಾಡುತ್ತಿದ್ದ ವೈದ್ಯೆಯನ್ನೇ ಗಾಯಾಳುವೋರ್ವ ಕತ್ತರಿಯಿಂದ ಇರಿದು ಕೊಂದ ಆಘಾತಕಾರಿ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿತ್ತು. ಘಟನೆ ಖಂಡಿಸಿ ಕೇರಳದಲ್ಲಿ ವೈದ್ಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಕೊಲೆಯಾದ ವೈದ್ಯೆಯನ್ನು 22 ವರ್ಷದ ವರ್ಧನಾ ದಾಸ್ ಎಂದು ಗುರುತಿಸಲಾಗಿತ್ತು. ಕೊಲೆ ಮಾಡಿದ ವ್ಯಕ್ತಿಯನ್ನು ಸಂದೀಪ್ ಎಂದು ಗುರುತಿಸಲಾಗಿದ್ದು, ಈತ ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ, ಕೊಟ್ಟರಕ್ಕರ ತಾಲೂಕು ಆಸ್ಪತ್ರೆಯಲ್ಲಿ ಈ ದುರಂತ ನಡೆದಿತ್ತು.
23 ವರ್ಷವಾದ್ರೂ ಯೋನಿ ಬೆಳವಣಿಗೆಯಾಗದ ಯುವತಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ ಬೆಂಗಳೂರಿನ ವೈದ್ಯರು
ಘಟನೆ ಹಿನ್ನೆಲೆ
ತನ್ನ ಕುಟುಂಬದವರೊಂದಿಗೆ ಕಿತ್ತಾಡಿಕೊಂಡಿದ್ದ ಸಂದೀಪ್ (Sandeep) ತನ್ನನ್ನು ರಕ್ಷಿಸುವಂತೆ ಪೊಲೀಸರಿಗೆ ಕರೆ ಮಾಡಿ ತಿಳಿಸಿದ ಈ ವೇಲೆ ಘಟನಾ ಸ್ಥಳಕ್ಕೆ ಪೊಲೀಸರು ಹೋಗಿದ್ದು, ಹೊಡೆದಾಟದಲ್ಲಿ ಗಾಯಗೊಂಡಿದ್ದ ಆತನನ್ನು ಕೊಟ್ಟರಕ್ಕರ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಆತನ ಕಾಲಿಗೆ ಆದ ಗಾಯಕ್ಕೆ ವೈದ್ಯೆ ವರ್ಧನಾ ದಾಸ್ (Vardhana Das) ಡ್ರೆಸ್ಸಿಂಗ್ ಮಾಡುತ್ತಿದ್ದರು. ಆದರೆ ಪಾನಮತ್ತನಾಗಿದ್ದ ಸಂದೀಪ್ ಇದ್ದಕ್ಕಿದ್ದಂತೆ ತನಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯೆಯ ಮೇಲೆ ಕತ್ತರಿಯಿಂದ ಹಲ್ಲೆ ಮಾಡಿದ್ದಾನೆ. ಇದರಿಂದ ಗಂಭೀರ ಗಾಯಗೊಂಡ ವೈದ್ಯೆ ವರ್ಧನಾ ಸಾವನ್ನಪ್ಪಿದ್ದಾರೆ.