Asianet Suvarna News Asianet Suvarna News

ರಾಜ್ಯದಲ್ಲಿಂದು ಹೊಸದಾಗಿ 105 ಕೊರೋನಾ ಪ್ರಕರಣ ದೃಢ, 77 ಸೋಂಕಿತರು ಗುಣಮುಖ

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 105 ಹೊಸ ಕೊರೋನಾ ಪ್ರಕರಣ ದೃಢಪಟ್ಟಿದೆ. 77 ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಾವಿನ ಸಂಖ್ಯೆ ಶೂನ್ಯವಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 483 ಆಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

105 new corona cases have been confirmed in the state, 77 patients have recovered rav
Author
First Published Jan 20, 2024, 11:22 PM IST

ಬೆಂಗಳೂರು (ಜ.20): ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 105 ಹೊಸ ಕೊರೋನಾ ಪ್ರಕರಣ ದೃಢಪಟ್ಟಿದೆ. 77 ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಾವಿನ ಸಂಖ್ಯೆ ಶೂನ್ಯವಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 483 ಆಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ರಾಜಧಾನಿ ಬೆಂಗಳೂರಿನಲ್ಲಿ 26 ಪಾಸಿಟಿವ್ ಪ್ರಕರಣ ಕಂಡುಬಂದಿದ್ದು, 27 ಸೋಂಕಿತರು ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 229 ಆಗಿದೆ. ಉಳಿದಂತೆ ರಾಯಚೂರಿನಲ್ಲಿ 10, ಮೈಸೂರು 9, ಬೆಂಗಳೂರು ಗ್ರಾಮಾಂತರ, ಕೊಡಗು, ವಿಜಯನಗರ  ಜಿಲ್ಲೆಯಲ್ಲಿ 7, ಚಿತ್ರದುರ್ಗ 6, ಬಳ್ಳಾರಿ 6, ಧಾರವಾಡ, ಕಲಬುರಗಿ 5, ತುಮಕೂರಿನಲ್ಲಿ 4 ಪ್ರಕರಣಗಳು ವರದಿಯಾಗಿದೆ.

 

ರಾಜ್ಯದಲ್ಲಿ ಇಂದು ಕೊರೋನಾದಿಂದ ಮತ್ತಿಬ್ಬರು ಸಾವು; 138 ಮಂದಿಗೆ ಪಾಸಿಟಿವ್ !

ಕಳೆದ 24 ಗಂಟೆಗಳಲ್ಲಿ 6,133 ಪ್ರಕರಣಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 5,373 ಆರ್ ಟಿಪಿಸಿಆರ್ ಹಾಗೂ 760 RaT ಟೆಸ್ಟ್ ಮಾಡಲಾಗಿದೆಯ ಪಾಸಿಟಿವಿಟಿ ದರ ಶೇ. 1.71 ರಷ್ಟಿದ್ದು, ಮರಣ ಪ್ರಮಾಣ ದರ ಶೇ.0. 00 ಆಗಿದೆ. 

Follow Us:
Download App:
  • android
  • ios