ಮೈಸೂರು [ಅ.21]:  ಅನರ್ಹ ಶಾಸಕ ಎಚ್‌. ವಿಶ್ವನಾಥ್‌ ಅವರು ಜೆಡಿಎಸ್‌ ಪಕ್ಷದಲ್ಲಿದ್ದಾಗ ಸಾ.ರಾ. ಮಹೇಶ್‌ ಅವರಿಗೆ ಕಂಟಕವಾಗಿದ್ದರು. ಈಗ ಬಿಜೆಪಿ ಶಾಸಕ ಎಸ್‌.ಎ. ರಾಮದಾಸ್‌ ಅವರಿಗೆ ಕಂಟಕವಾಗಿದ್ದಾರೆ ಎಂದು ಜೆಡಿಎಸ್‌ ರಾಜ್ಯ ವಕ್ತಾರ, ಕರ್ನಾಟಕ ಅರಣ್ಯ ವಸತಿ ಮತ್ತು ವಿಹಾರಧಾಮ ಸಂಸ್ಥೆಯ ಮಾಜಿ ನಿರ್ದೇಶಕ ಎನ್‌.ಆರ್‌. ರವಿಚಂದ್ರೇಗೌಡ ಆರೋಪಿಸಿದ್ದಾರೆ.

ಮುಂಬೈಗೆ ಹೋದ ನೀವು(ವಿಶ್ವನಾಥ್‌) ಹೇಡಿನೊ, ನೀವು ಕರೆದ ಚಾಮುಂಡಿಬೆಟ್ಟಕ್ಕೆ ಬಂದ ಸಾ.ರಾ. ಮಹೇಶ್‌ ಅವರು ಹೇಡಿನೊ ಎಂದು ನೀವೇ ಜನರ ಬಳಿ ಕೇಳಿ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಲ್ಲದೇ ನಿಮ್ಮ ಪರವಾಗಿ ಸಚಿವ ವಿ. ಸೋಮಣ್ಣ ಅವರು ನೀಡಿರುವ ಹೇಳಿಕೆಯಿಂದ ನೀವು ಆಪರೇಷನ್‌ ಕಮಲಕ್ಕೆ ಬಲಿಯಾಗಿರುವುದು ಹುಣಸೂರು ಮತದಾರರಿಗೆ ತಿಳಿಯುವುದಿಲ್ಲವೆ? ಚುನಾವಣೆಗೆ ನಿಂತಾಗ ಮತದಾರರೆ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ.