HRP Land Scam ಹಾಸನ ಡಿಸಿಯಿಂದ 800 ಎಕರೆ ಭೂ ಮಂಜೂರಾತಿ ರದ್ದು

  • ಹೇಮಾವತಿ ಜಲಾಶಯ ಯೋಜನೆ ಮುಳುಗಡೆ ಸಂತ್ರಸ್ಥರ ಹೆಸರಲ್ಲಿ ಮಹಾಮೋಸ
  • ಅಕ್ರಮ ಮಂಜೂರಾತಿ ಮಾಡಿದ್ದ 4 ಎಸ್​ ಎಲ್​ ಒ ಗಳಿಗೆ ನಡುಕ ಶುರು
  • ಕ್ರಿಮಿನಲ್​ ಕೇಸ್​ ದಾಖಲಿಸುವುದಾಗಿ ಕಂದಾಯ ಸಚಿವ ಆರ್​ ಅಶೋಕ್​ ಹೇಳಿಕೆ  
  • ಒಂದು ಸಾವಿರಕ್ಕೂ ಅಧಿಕ ಅರ್ಜಿಗಳ ವಿಚಾರಣೆ ಮುಂದುವರಿಕೆ
  • 300 ಫೈಲ್​ ಗಳ ಪೈಕಿ 200 ಫೈಲ್​ ಗಳ ಬೋಗಾಸ್​ ಮಂಜೂರಾತಿ
HRP Land Scam 800 acres of land had been allotted to non eligible persons gow

ವರದಿ: ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್.

ಹಾಸನ (ಎ.29):  ಹಾಸನ (Hassan) ಜಿಲ್ಲೆಯ ಬಹುಕೋಟಿ ಭೂ ಮಾಫಿಯಾ ಹೆಚ್​ಆರ್​ ಪಿ ಭೂ ಮಂಜೂರಾತಿ ಹಗರಣದ (HRP Land Scam ) ಪ್ರಥಮ ಹಂತದ ತನಿಖೆ ಪೂರ್ಣಗೊಂಡಿದೆ. ಹೇಮಾವತಿ ಜಲಾಶಯ ಯೋಜನೆ (Hemavati River Project) ಮುಳುಗಡೆ ಸಂತ್ರಸ್ಥರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಂಜೂರಾತಿ ಮಾಡಿಸಿಕೊಂಡಿರುವುದು ತನಿಖೆಯಿಂದ ಬಯಲಾಗಿದೆ.

ಮೊದಲ ಹಂತದಲ್ಲಿ 200 ಅರ್ಜಿದಾರರ ಭೂ ಮಂಜೂರಾತಿಯನ್ನು ರದ್ದುಗೊಳಿಸಿರುವ ಹಾಸನ ಜಿಲ್ಲಾಧಿಕಾರಿ ಗಿರೀಶ್ (Hassan DC Girish), 800 ಎಕ್ಕರೆಯಷ್ಟು ಜಮೀನು ಅಕ್ರಮ ಭೂ ಮಂಜೂರಾತಿ ಮಾಡಿಸಿಕೊಂಡಿದ್ದಾರೆಂದು ಮಂಜೂರಾತಿಯನ್ನು ರದ್ದುಗೊಳಿಸಿದ್ದಾರೆ. ಬೋಗಾಸ್ ದಾಖಲೆ ಸೃಷ್ಟಿಸಿ ಮಂಜೂರಾತಿ ಮಾಡಿದ್ದ ಎಲ್​ಎಒ ಗಳು ಮತ್ತು ಅರ್ಜಿದಾರರ ಮೇಲೆ ಕ್ರಿಮಿನಲ್​ ಕೇಸ್​ ಬೀಳುವ ಸಾಧ್ಯತೆ ಇದ್ದು, ಭ್ರಷ್ಟ ಅಧಿಕಾರಿಗಳಿಗೆ ನಡುಕ ಶುರುವಾಗಿದೆ.

 ಹೇಮಾವತಿ ಜಲಾಶಯ ಯೋಜನೆ ಮುಳುಗಡೆ ಸಂತ್ರಸ್ಥರ ಹೆಸರಿನಲ್ಲಿ ಹಾಸನ ಜಿಲ್ಲೆಯಲ್ಲಿ  ನಡೆದಿದ್ದ  ಭೂ ಮಂಜೂರಾತಿ ಹಗರಣ ಪ್ರಥಮ ಹಂತದ ತನಿಖೆ ಪೂರ್ಣಗೊಂಡಿದೆ. 1300 ಅರ್ಜಿಗಳ ಪೈಕಿ 300 ಅರ್ಜಿಗಳ ವಿಚಾರಣೆ , ತನಿಖೆ ಪೂರ್ಣಗೊಂಡಿದ್ದು, ಈ ಪೈಕಿ 200 ಅರ್ಜಿ ಅಕ್ರಮ ಮಂಜೂರಾತಿ ಎಂಬುದು ತನಿಖೆಯಲ್ಲಿ ಬಯಲಾಗಿದೆ.

Kolara Seeds Preserver Papamma ನೂರಾರು ವರ್ಷಗಳ ಮಡಿಕೆಯಲ್ಲಿ ಬೀಜ ಸಂರಕ್ಷಣೆ

ಎಡಿಸಿ ಕವಿತಾ ರಾಜಾರಾಂ, ಹಿಂದಿನ ಎಸಿ ನಾಗರಾಜ್​ ನೇತೃತ್ವದ ತನಿಖಾ ತಂಡ ಅಕ್ರಮ ಮಂಜೂರಾತಿ ತನಿಖೆ ನಡೆಸಿ ವರದಿ ನೀಡಿತ್ತು. ವರದಿ ಹಿನ್ನೆಲೆ 200 ಅರ್ಜಿ ಅಕ್ರಮ ಭೂ ಮಂಜೂರಾತಿ ಎಂಬುದು ಗೊತ್ತಾಗಿದ್ದು, ಹಾಸನ ಡಿಸಿ ಗಿರೀಶ್​ 200 ಅರ್ಜಿದಾರರ 800 ಎಕ್ಕರೆ ಭೂಮಿ ಮಂಜೂರಾತಿಯನ್ನು ರದ್ದುಗೊಳಿಸಿ ಆದೇಶಿಸಿದ್ದಾರೆ. ಈ 200 ಅರ್ಜಿದಾರರ ವಿರುದ್ದ ಮತ್ತು ಅಕ್ರಮ ಭೂಮಂಜೂರಾತಿ ಮಾಡಿದ್ದ ವಿಶೇಷ ಭೂಸ್ವಾಧಿನಾಧಿಕಾರಿಗಳು, ತಹಸಿಲ್ದಾರ್, ಸಿಬ್ಬಂದಿ ವಿರುದ್ದ ಕ್ರಿಮಿನಲ್​ ಕೇಸ್​ ದಾಖಲಿಸುವುದಾಗಿ ಕಂದಾಯ ಸಚಿವ ಆರ್​.ಅಶೋಕ್​ ತಿಳಿಸಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರ, ಬೇಲೂರು ,ಆಲೂರಿನಲ್ಲಿ ಮುಳುಗಡೆ ಸಂತ್ರಸ್ಥರ ಹೆಸರಲ್ಲಿ 8000 ಎಕ್ಕರೆ ಅಕ್ರಮ ಭೂ ಮಂಜೂರಾತಿ ದಂಧೆ ನಡೆದಿದೆ ಎಂದು ದೂರುಗಳು ಕೇಳಿಬಂದಿದ್ದವು. 2010 ನೇ ಇಸವಿಯಿಂದ 2017 ರವರೆಗೆ ನಕಲಿ ದಾಖಲೆ ಅಂದರೆ ಮುಳುಗಡೆ ಸರ್ಟಿಫಿಕೇಟ್​,ವಂಶವೃಕ್ಷ, ಓಎಂ ಸೃಷ್ಟಿಸಿ ಅಕ್ರಮ ಭೂ ಮಂಜೂರಾತಿ ಮಾಡಿಸಿಕೊಂಡಿದ್ದರು. 1980 ರಲ್ಲಿ ಗೊರೂರು ಹೇಮಾವತಿ ಜಲಾಶಯ ನಿರ್ಮಾಣ ಹಿನ್ನೆಲೆ ಸಕಲೇಶಪುರ ಆಲೂರು ಭಾಗದಲ್ಲಿ ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು.

Chikkamagaluru ಮೇಕೆ ಮರಿ ನುಂಗಿ ಗಡದ್ದಾಗಿ ನಿದ್ದೆ ಮಾಡಿದ್ದ ಹೆಬ್ಬಾವು ಸೆರೆ

ಒಂದು ರೈತರ ಮುಳುಗಡೆ ಸರ್ಟಿಫಿಕೇಟ್​ ಗೆ 4 ಎಕ್ರೆ ಪರಿಹಾರ ಜಮೀನು ಕೊಡಲು ಸರ್ಕಾರ ತೀರ್ಮಾನಿಸಿತ್ತು. ಆಗಲೇ ಕೆಲವರು ಜಮೀನು ಮಂಜೂರು ಮಾಡಿಸಿಕೊಂಡಿದ್ದರು. ಆದ್ರೆ ಹಲವರು ಭೂ ಮಂಜೂರಾತಿ ಮಾಡಿಸಿಕೊಳ್ಳಲು ಓಡಾಡಿ ಸುಮ್ಮನಾಗಿದ್ದರು. 2000 ನೇ ಇಸವಿಯಲ್ಲಿ ನಿಧಾನವಾಗಿ ಮತ್ತೆ ಅರ್ಜಿ ಹಾಕಲು ಆರಂಭಿಸಿದಾಗ, ನಕಲಿ ದಾಖಲೆ ಸೃಷ್ಟಿಸಿ ಭೂ ಮಾಪಿಯಾ ಮಾಡಲು ಉಳ್ಳವರು ಶುರುಮಾಡಿದ್ದರು. ಆಗ ಆರಂಭವಾದ ಹೆಚ್ ಆರ್​ ಪಿ ಅಕ್ರಮ ಭೂ ಮಂಜೂರಾತಿ ಹಗರಣದಲ್ಲಿ ಅಧಿಕಾರಿಗಳೇ ಶಾಮೀಲಾಗಿದ್ದರು. ವಿಶೇಷ ಭೂ ಸ್ವಾಧೀನಾಧಿಕಾರಿಗಳಾಗಿದ್ದ ಶ್ರೀನಿವಾಸ್​ ಗೌಡ, ರವಿಚಂದ್ರನಾಯ್ಕ್​, ವಿಜಯಾ, ಜಗದೀಶ್​ ಅವಧಿಯಲ್ಲ ಅಕ್ರಮ ಭೂ ಮಂಜುರಾತಿ ನಡೆದಿದೆ ಎಂದು ತನಿಖಾ ಸಮಿತಿ ವರದಿ ನೀಡಿದೆ.

ಅಲ್ಲದೇ ಕೆಲ ತಹಸಿಲ್ದಾರ್, ಸಿಬ್ಬಂದಿಗಳು ಭೂ ಮಾಫಿಯಾದಲ್ಲಿ ಭಾಗಿಯಾಗಿದ್ದಾರೆ. ನಿಜವಾದ ಬಹುತೇಕ ಸಂತ್ರಸ್ಥರು ಇನ್ನೂ ಜಮೀನು ಮಂಜೂರಾತಿ ಮಾಡಿಸಿಕೊಳ್ಳಲಾಗದೇ ಹೋರಾಡುತ್ತಿದ್ದಾರೆ. ಈಗ ಬೋಗಾಸ್​ ದಾಖಲೆ ಸೃಷ್ಟಿಸಿ ಜಮೀನು ಮಂಜೂರಾತಿ ಮಾಡಿಸಿಕೊಂಡಿದ್ದವರ ಎದೆಯಲ್ಲಿ ಈಗ ನಡುಕ ಶುರುವಾಗಿದೆ. ಮೊದಲ  ಹಂತದ ತನಿಖೆಯಲ್ಲಿ 300 ಅರ್ಜಿಗಳ ಪರಿಶೀಲನೆ ಮತ್ತು ಅರ್ಜಿದಾರರ ವಿಚಾರಣೆ ನಡೆಸಲಾಗಿದ್ದು, ಈ ಪೈಕಿ 200 ಫೈಲ್  ಅಕ್ರಮ ಭೂ ಮಂಜೂರಾತಿ ಮಾಡಿಸಿಕೊಂಡಿರುವುದು ತನಿಖೆಯಲ್ಲಿ ಗೊತ್ತಾಗಿದೆ. 200 ಅರ್ಜಿದಾರರ 800 ಎಕ್ಕರೆ ಅಕ್ರಮ ಭೂ ಮಂಜೂರಾತಿ ಯನ್ನು ರದ್ದು ಪಡಿಸಲಾಗಿದೆ. ತನಿಖೆ ಮುಂದುವರೆದಿದೆ ಎಂದು ಹಾಸನ ಡಿಸಿ ಆರ್ ಗಿರೀಶ್ ತಿಳಿಸಿದ್ದಾರೆ. 

ಸುಮಾರು 8000 ಕ್ಕೂ ಅಧಿಕ ಎಕ್ಕರೆ ಭೂಮಿ ಅಕ್ರಮ ಮಂಜೂರಾತಿಯಾಗಿದೆ ಎಂಬ ದೂರಿನ ಹಿನ್ನೆಲೆ ತನಿಖಾ ಸಮಿತಿ ವಿಚಾರಣೆ ನಡೆಸುತ್ತಿದೆ. ಪ್ರಥಮ ಹಂತದಲ್ಲಿ 200 ಫೈಲ್​ ರದ್ದುಗೊಳಿಸಿ ಹಾಸನ ಡಿಸಿ ಆದೇಶಿಸಿದ್ದಾರೆ. ಅಕ್ರಮ ಮಂಜೂರಾತಿ ಮಾಡಿದ್ದ ಅಧಿಕಾರಿಗಳ ಮೇಲೂ ಕ್ರಮ ಆದಾಗ ಸರ್ಕಾರಿ ಭೂಮಿ ಲಪಾಟಿಯಿಸುವವರಿಗೆ ತಕ್ಕ ಪಾಠ ಕಲಿಸಿದಂತಾಗುತ್ತದೆ. ಈ ಬಗ್ಗೆ ಹಾಸನ ಡಿಸಿ ಕ್ರಮವಹಿಸಿ ಭೂ ಮಾಫಿಯಾ ಮಾಡುವರರಿಗೆ ಎಚ್ಚರಿಕೆ ಸಂದೇಶ ನೀಡಬೇಕಿದೆ.

Latest Videos
Follow Us:
Download App:
  • android
  • ios