Kolara Seeds Preserver Papamma ನೂರಾರು ವರ್ಷಗಳ ಮಡಿಕೆಯಲ್ಲಿ ಬೀಜ ಸಂರಕ್ಷಣೆ
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಡಿ.ಕುರುಬರಹಳ್ಳಿ ಗ್ರಾಮದ ರೈತ ಮಹಿಳೆ , ಬೀಜ ಮಾತೆ ಪಾಪಮ್ಮ ಅಚ್ಚ ನಾಟಿ ತಳಿಗಳ ಮತ್ತು ಅಪರೂಪದ ವಿವಿಧ ಬೆಳೆಗಳ ಬೀಜಗಳನ್ನ ಸಂರಕ್ಷಣೆ ಮಾಡುತ್ತಿದ್ದಾರೆ.
ವರದಿ: ದೀಪಕ್ ,ಏಷಿಯಾನೆಟ್ ಸುವರ್ಣ ನ್ಯೂಸ್
ಕೋಲಾರ (ಎ.29) : ವೃಕ್ಷ ಮಾತೆ ಎಂದು ಹೆಸರು ಮಾಡಿರುವ ಸಾಲು ಮರದ ತಿಮ್ಮಕ್ಕ (Saalumadra Thimmakka) ಇಡೀ ನಾಡಿಗೆ ಪರಿಚಯ. ಅವರಂತೆಯೆ ಕೋಲಾರದಲ್ಲಿ ಓರ್ವ ಬೀಜ ಮಾತೆ ಇದ್ದಾರೆ. ನಮ್ಮ ಮುಂದಿನ ತಲೆಮಾರಿನ ಮಕ್ಕಳಿಗೆ ಉತ್ತಮವಾದ ಆರೋಗ್ಯಕ್ಕಾಗಿ ನಾವು ಸಾವಯವ ಕೃಷಿಯನ್ನು ಮಾಡಬೇಕಿದೆ ಅನ್ನೋದು ಇವರ ಆಶಯ. ಕಳೆದ 40 ವರ್ಷಗಳಿಂದ ಇದೇ ಕೆಲಸಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಈ ಬೀಜ ಮಾತೆ ಯಾರು, ಇವ್ರು ಕೈಗೊಂಡಿರುವ ಕೆಲಸ ಏನು ಇವ್ರಿಗೆ ಬೀಜ ಮಾತೆ ಎಂಬ ಹೆಸರು ಬರಲು ಕಾರಣವೇನು. ಅನ್ನೋದನ್ನು ಮುಂದೆ ಓದಿ ತಿಳಿಯಿರಿ.
ಇದು ಕೋಲಾರ (Kolar) ಜಿಲ್ಲೆಯ ಮುಳಬಾಗಿಲು (Mulabagilu) ತಾಲೂಕಿನ ಸಣ್ಣ ಗ್ರಾಮ ಡಿ.ಕುರುಬರಹಳ್ಳಿ (Kurubarahalli village ). ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಈ ಗ್ರಾಮದಲ್ಲಿ ಬೀಜ ಮಾತೆ ಪಾಪಮ್ಮರ ಸಮಾಜ ಸೇವೆ ಸದ್ದಿಲ್ಲದೆ ಸಾಗಿದೆ. ಅಷ್ಟಕ್ಕೂ ಇವರು ಮಾಡ್ತಾತ್ತಿರೋ ಸಾಧನೆ ಕೇಳಿದ್ರೆ ಹೆಮ್ಮೆ ಅನಿಸುತ್ತೆ, ಇವರು ಅಚ್ಚ ನಾಟಿ ತಳಿಗಳ ಮತ್ತು ಅಪರೂಪದ ವಿವಿಧ ಬೆಳೆಗಳ ಬೀಜಗಳನ್ನ ಸಂರಕ್ಷಣೆ ಮಾಡುವ ಕಾಯಕದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಇವುಗಳ ಅವಶ್ಯಕತೆ ಕುರಿತು ಅರಿವು ಮೂಡಿಸುವ ಕೆಲಸ ಈ ಬೀಜ ಮಾತೆ ಮಾಡುತ್ತಿದ್ದಾರೆ.
Congress ಪ್ರೈವೇಟ್ ಲಿಮಿಟೆಡ್ ಕಂಪನಿಯಾಗಿದೆ: ಹುಬ್ಬಳ್ಳಿ ಕೈ ಜಿಲ್ಲಾಧ್ಯಾಕ್ಷ!
ತಮ್ಮ ಪತಿಯೊಂದಿಗೆ ಸೇರಿ ನಾಲ್ಕು ದಶಕಗಳಿಂದ ಈ ಕಾಯಕದಲ್ಲಿ ತೊಡಗಿರುವ ಪಾಪಮ್ಮಗೆ ಈ ಕೆಲಸವೇ ಸಾಕಷ್ಟು ಪ್ರಸಿದ್ದಿಯನ್ನ ತಂದು ಕೊಟ್ಟಿದೆ. ಕುರುಬರಹಳ್ಳಿಯ ಪಾಪಮ್ಮ ಬಳಿ ಈಗ 150ಕ್ಕೂ ಹೆಚ್ಚು ತರಹದ ಅಚ್ಚ ನಾಟಿ ತಳಿ ಬೆಳೆಗಳ ಅಪರೂಪದ ಬೀಜಗಳು ಸಂರಕ್ಷಿಸಲ್ಪಟ್ಟಿವೆ. ಇವ್ರ ಮನೆಯಲ್ಲಿ ನಾವೇನಾದ್ರೂ ಒಳ ಹೊಕ್ಕರೆ ಅಲ್ಲಿ ನೂರಾರು ಮಾದರಿಯ ಸಾವಯವ ಕೃಷಿಯ ಬೀಜಗಳ ಕಾಣಬಹುದು.
ಈ ಹಿಂದೆ ಇವರ ಬಳಿ 250ಕ್ಕೂ ಹೆಚ್ಚು ವಿವಿಧ ತಳಿಯ ಬೀಜಗಳ ಇದ್ದವಂತೆ. ಮಧ್ಯೆ ಬಂದ ಬರದಿಂದಾಗಿ ಈಗ ಕೆಲವು ಇಲ್ಲ. ಆದ್ರೆ, ಮತ್ತೆ ಅವುಗಳನ್ನ ಸಂಗ್ರಹ ಮಾಡುವ ಪಣ ತೊಟ್ಟಿದ್ದಾರೆ ಪಾಪಮ್ಮ. ತಮ್ಮ ಅತ್ತೆ ಮತ್ತು ಮಾವನವರಿಂದ ಕಲಿತ ಈ ಕಲೆಯನ್ನು ಪಾಪಮ್ಮ ಈಗಲೂ ಮುಂದುವರೆಸಿಕೊಂಡು, ಉಳಿಸಿಕೊಂಡು ಬಂದಿದ್ದಾರೆ. ನೂರಾರು ವರ್ಷ ಹಳೇಯದಾದ ಮಣ್ಣಿನ ಮಡಿಕೆಗಳಲ್ಲಿ ಈ ಬೀಜ ಸಂರಕ್ಷಣೆಯ ವಿಶೇಷ ಮಾದರಿ ಮುಂದುವರೆದಿದೆ. ಇವ್ರ ಮನೆಯಲ್ಲಿ ಇರುವ ಯಾವುದೇ ಹಳೇ ಡಬ್ಬ ತೆಗೆದರೂ ಕೂಡ ಸಾವಯವ ಮತ್ತು ಅಪರೂಪದ ಬೀಜಗಳು ಸಿಗುತ್ತವೆ.
SBI RECRUITMENT 2022: ಒಟ್ಟು 35 ಸ್ಪೆಷಲಿಸ್ಟ್ ಕೇಡರ್ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ
ಪಾಪಮ್ಮಗೆ ಒಂದು ಎಕರೆ ಭೂಮಿ ಇದೆ. ಇದರಲ್ಲಿ ತಾವೇ ಕೃಷಿ ಮಾಡುತ್ತಾ ಈ ಬೀಜ ಸಂರಕ್ಷಣೆ ಕಾಯಕ ಮುಂದುವರೆಸಿದ್ದಾರೆ. ಭತ್ತ, ಸಜ್ಜೆ, ನವಣೆ ಹಾಗೂ ತರಕಾರಿ ಬೀಜಗಳು ಸೇರಿದಂತೆ ಯಾವುದೇ ತಳಿಯ ಬೀಜವನ್ನು ಕೇಳಿದ್ರು ಪಾಪಮ್ಮ ಇಲ್ಲವೆನ್ನುವುದಿಲ್ಲ. ಹೀಗೆ, ಸಂರಕ್ಷಿಸಲ್ಪಟ್ಟ ಬೀಜಗಳನ್ನ ರೈತರಿಗೆ ಉಚಿತವಾಗಿಯೇ ನೀಡುವ ಪಾಪಮ್ಮ ನಂತರ ಅದರ ಎರಡು ಪಟ್ಟು ವಾಪಸ್ಸು ಕೊಡಬೇಕು ಅನ್ನೋ ಶರತ್ತು ವಿಧಿಸುತ್ತಾರೆ.
ಇವ್ರ ಈ ಸಾಧನೆ ರಾಜ್ಯದಲ್ಲಿಯೇ ಅಲ್ಲ ದೇಶಾದ್ಯಂತ ಕೂಡಾ ಪಸರಿಸಿದೆ. ದೂರದ ಊರಿಗಳಿಂದ ಇವರನ್ನ ಹುಡುಕಿಕೊಂಡು ಅನೇಕ ಬಂದಿ ಬರುತ್ತಾರೆ. ಕೃಷಿಗಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟ ಪಾಪಮ್ಮರನ್ನ ಹಲವು ಸಂಘ ಸಂಸ್ಥೆಗಳು ಗೌರವಿಸಿದೆ. ತುಂಬಾನೇ ಸೂಕ್ಷ್ಮ ಮನಸ್ಸಿನ ಪಾಪಮ್ಮ ಎಲ್ಲರಿಗೂ ಬೆಲೆ ಕೊಟ್ಟು ಕೃಷಿಯಲ್ಲಿ ಸಾವಯವದ ಅವಶ್ಯಕತೆ ಕುರಿತು ಅರಿವು ಮೂಡಿಸುತ್ತಾರೆ.
ಒಟ್ನಲ್ಲಿ, ರಸಾಯನಿಕ ಗೊಬ್ಬರ ಮತ್ತು ಬಯೋಟೆಕ್ ಮಾದರಿಯ ಬೀಜಗಳಿಂದ ಇವತ್ತಿನ ಕೃಷಿ ಕ್ಷೇತ್ರವೂ ಕೂಡ ಹಲವು ಅಪಾಯಗಳನ್ನ ಎದುರಿಸುತ್ತಿದೆ. ಆದ್ರೆ, ಸಾವಯವ ಮಾದರಿಯಿಂದಲೇ ಬೆಳೆಯಲಾದ ಮತ್ತು ಯಾವುದೇ ರಸಾಯನಿಕಗಳನ್ನ ಬಳಸದ ಬೆಳೆಯಿಂದ ಬಂದ ಖಾದ್ಯ ಧಾನ್ಯಗಳ ಸಂರಕ್ಷಣೆಯನ್ನು ಮಾಡ್ತಾಯಿರೋ ಪಾಪಮ್ಮ ನಿಜಕ್ಕೂ ಅನಕ್ಷರಸ್ಥೆ ಅಲ್ಲವೇ ಅಲ್ಲ. ಕೃಷಿಯ ಕುರಿತು ಅವರ ಜ್ಞಾನ ನಿಜಕ್ಕೂ ಹೆಮ್ಮೆ ಪಡುವಂತದ್ದು.