ಹಾಸನ [ನ.14]:  ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಮತ್ತೊಮ್ಮೆ ಕಣ್ಣೀರು ಹಾಕಿದ್ದಾರೆ. 

ಹಾಸನದ ಹರದನಹಳ್ಳಿಯ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ದೇವೇಗೌಡರು, ನಾವು ಸಾಕಷ್ಟು ಪ್ರಮಾಣದಲ್ಲಿ ಕಷ್ಟ ಅನುಭವಿಸಿದ್ದೇವೆ ಎಂದು ಹೇಳುತ್ತಲೇ ಭಾವುಕರಾದರು. 

ಏನೇ ಕಷ್ಟ ಬಂದರೂ ನಾವು ಗುರುಗಳನ್ನು ಬಿಡಲಿಲ್ಲ. ಎಷ್ಟೇ ನೋವು - ನಲಿವು ಬಂದರೂ ನಿಮ್ಮ ಆಶೀರ್ವಾದಿಂದಲೇ ಎಲ್ಲವನ್ನೂ ಶ್ರದ್ಧೆ ಭಕ್ತಿಯಿಂದಲೇ ಸ್ವೀಕಾರ ಮಾಡಿದ್ದೇವೆ ಎಂದು ಹೇಳಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಾವು ಇಲ್ಲಿ ಯಾರನ್ನೂ ಮೆಚ್ಚಿಸಬೇಕಾದ ಅಗತ್ಯವಿಲ್ಲ. ಏನೇ ಕಷ್ಟ ಬಂದರೂ ನಿಮ್ಮನ್ನು ಬಿಟ್ಟು ಎಲ್ಲೂ ಹೋಗಲ್ಲ ಎಂದು ತಮ್ಮ ಕಷ್ಟದ ದಿನಗಳನ್ನು ನೆನೆದು ಕಣ್ಣೀರು ಹಾಕಿದರು. 

ಅಲ್ಲದೇ ಕಾರ್ಯಕ್ರಮಕ್ಕೆ  ಆಗಮಿಸಿದ ವಿಧುಶೇಖರ್ ಭಾರತೀ ತೀರ್ಥರನ್ನುದ್ದೇಶಿಸಿ ಮಾತನಾಡಿದ ಗೌಡರು ನಿಮ್ಮ ಸಂಸ್ಥಾನಕ್ಕೆ ನಮ್ಮ ಕುಟುಂಬ ಆಭಾರಿಯಾಗಿದೆ ಎಂದು ಹೇಳಿದರು.