ಬೆಂಗಳೂರು[ಮೇ. 29]  ಮಹತ್ವದ ಬೆಳವಣಿಗೆಯಲ್ಲಿ ಹಾಸನದ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರನ್ನು ವರ್ಗಾವಣೆ ಮಾಡಲಾಗಿದೆ. ರಾಜ್ಯ ಸರಕಾರ ಹಾಸನದ ಜಿಲ್ಲಾಧಿಕಾರಿ ಎತ್ತಂಗಡಿ ಮಾಡಿದ್ದು ನೂತನ ಜಿಲ್ಲಾಧಿಕಾರಿಯಾಗಿ ಅಕ್ರಂ ಪಾಷಾ ಅವರನ್ನು ನೇಮಿಸಿದೆ. ಪ್ರಿಯಾಂಕಾ ಅವರಿಗೆ ಯಾವುದೆ ಹುದ್ದೆ ಸದ್ಯಕ್ಕೆ ನೀಡಲಾಗಿಲ್ಲ. 

ರೇವಣ್ಣ ಗೋಲಿಬಾರ್ ಹೇಳಿಕೆಗೆ ಪ್ರಿಯಾಂಕಾ ಕೊಟ್ಟ ತಿರುಗೇಟು

ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾಧಿಕಾರಿಯಾಗಿದ್ದ ಪ್ರಿಯಾಂಕಾ ಚುನಾವಣಾಧಿಕಾರಿಯಾಗಿದ್ದರು. ಪ್ರಜ್ವಲ್ ರೇವಣ್ಣ ನಾಮಪತ್ರದಲ್ಲಿ ದೋಷವಿದೆ ಎಂಬ ದೂರುಗಳು ಕೇಳಿ ಬಂದಿದ್ದವು.

ಪ್ರಿಯಾಂಕಾಗೂ ಮುನ್ನ ರೋಹಿಣಿ ಸಿಂಧೂರಿ ಹಾಸನದ ಜಿಲ್ಲಾಧಿಕಾರಿಯಾಗಿದ್ದರು. ರೋಹಿಣಿ ಮತ್ತು ಸಚಿವ ರೇವಣ್ಣ ಬೆಂಬಲಿಗರ ನಡುವೆ ಅನೇಕ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಕೇಳಿಬಂದಿತ್ತು.