ಹಾಸನ [ಅ.25 ]:  ಅಧಿದೇವತೆ ಹಾಸನಾಂಬ ದೇವಿ ಆಶೀರ್ವಾದ ಇರುವುದರಿಂದಲೇ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಬಿಡುಗಡೆಯಾಗಿದ್ದಾರೆ ಎಂದು ಕಾಂಗ್ರೆಸ್‌ ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ ಹೇಳಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಬಂದ ಕೂಡಲೇ ಡಿಕೆಶಿ ಅವರನ್ನು ಶ್ರೀಹಾಸನಾಂಬ ದೇವಸ್ಥಾನಕ್ಕೆ ಕರೆದುಕೊಂಡು ಬರಲಾಗುವುದು ಎಂದರು.

ರಾಜ್ಯ ವಿಧಾನಸಭಾಧ್ಯಕ್ಷರು ವಿರೋಧ ಪಕ್ಷದವರಿಗೆ ಮಾತನಾಡಲು ಅವಕಾಶ ಕೊಡುತ್ತಿಲ್ಲ. ಇದನ್ನು ನೋಡಿದರೆ ಅವರಿಗೆ ಅನುಭವದ ಕೊರತೆ ಎದ್ದು ಕಾಣುತ್ತಿದೆ ಎಂದು ಕಾಣಿಸುತ್ತದೆ. ಕಳೆದ 5 ವರ್ಷ ಅವಧಿಯ ಆಡಳಿತ ಏನಿತ್ತು ಇಂದಿನ ಆಡಳಿತ ಏನಾಗಿದೆ ಎಂಬುದು ಜನರಿಗೆ ಇಂದು ಅರ್ಥವಾಗುತ್ತಿದೆ. ಸೋನಿಯಾಗಾಂಧಿ ಆಶೀರ್ವಾದದಿಂದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ನೇತೃತ್ವದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಎಸಿ ವರ್ಗಾವಣೆ ನೋವಿ ಸಂಗತಿ:  ಹಾಸನ ಎಸಿ ಡಾ.ಎಚ್‌.ಎಲ್‌.ನಾಗರಾಜ್‌ ಅವರನ್ನು ಬೇರೆಡೆ ವರ್ಗಾವಣೆ ಮಾಡಿರುವುದು ನೋವಿನ ಸಂಗತಿ. ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಿರುವುದು ಸರಿಯಲ್ಲ. ಕೂಡಲೇ ಈ ಆದೇಶ ಹಿಂಪಡೆದು ಹಾಸನದಲ್ಲೇ ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಶುಭ ದಿನಗಳ ನಿರೀಕ್ಷೆಯಲ್ಲಿ ಕಾಂಗ್ರೆಸ್‌ : ತುಂಬಿದ ನವಚೈತನ್ಯ...

ತಿಂಗಳ ವೇತನ:  ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ಚನ್ನರಾಯಪಟ್ಟಣ ತಾಲೂಕು ಜಂಬೂರು ಗ್ರಾಮದಲ್ಲಿ ಡೈರಿಗೆ ಹಾಕುವ ಹಾಲಿನಿಂದ ಬರುವ 50 ಸಾವಿರ ರು.ಗಳ ಚೆಕ್‌ ಜಿಲ್ಲಾಧಿಕಾರಿಗಳಿಗೆ ನೀಡಿದ ಅವರು, ನನ್ನ ಒಂದು ತಿಂಗಳ ವೇತನವನ್ನು ಶುಕ್ರವಾರ ಬೆಳಗ್ಗೆ ಕಾಂಗ್ರೆಸ್‌ ಕಚೇರಿಗೆ ತೆರಳಿ ಕೊಡಲಾಗುವುದು ಎಂದರು.