ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದ ಚಿತ್ರೀಕರಣ ಹಾಗೂ ಸಿನಿಮಾ ಕಾರ್ಯಕ್ರಮಗಳು ರದ್ದಾಗಿದ್ದವು. ಅಲ್ಲದೇ ಚಿತ್ರಮಂದಿಗಳನ್ನು ಬಂದ್ ಮಾಡಲಾಗಿತ್ತು. ಈಗಾಗಲೇ ಅನ್ ಲಾಕ್ ಪ್ರಕ್ರಿಯೆ ಆರಂಭವಾಗಿದ್ದರೂ, ಚಿತ್ರಮಂದಿರಗಳಿನ್ನೂ ಓಪನ್ ಆಗಿಲ್ಲ. ಕೋಟಿ ಬಜೆಟ್‌ ವೆಚ್ಚದ ಸಿನಿಮಾಗಳನ್ನು ರಿಲೀಸ್ ಮಾಡಲು ನಿರ್ಮಾಪಕರು ಕಾಯುತ್ತಿದ್ದಾರೆ. ಎಲ್ಲಾ ಸಿನಿ ಪ್ರೇಮಿಗಳಿಗೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಲಾಕ್‌ಡೌನ್‌ ನಂತರ ಮುಚ್ಚಲಿವೆ 150 ಪ್ಲಸ್‌ ಚಿತ್ರಮಂದಿರಗಳು; ಕೊರೋನಾ ತಂದಿಟ್ಟಕೋಟಿ ನಷ್ಟ!

ನಿನ್ನೆ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಜೊತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೂಮ್ ಆ್ಯಪ್ ಮೂಲಕ ಮೀಟಿಂಗ್ ಮಾಡಿ ಚಿತ್ರಮಂದಿರ ರೀ ಓಪನ್ ಮಾಡುವುದು ಹಾಗೂ ಸಂಬಂಧಿಸಿದ ಗೈಡ್‌ಲೈನ್ಸ್ ಬಗ್ಗೆ ಚರ್ಚಿಸಿದ್ದಾರೆ.

ಸೆಪ್ಟೆಂಬರ್ ಕೊನೇ ವಾರದಲ್ಲಿ ಚಿತ್ರಮಂದಿರಗಳು ಕಾರ್ಯ ನಿರ್ವಹಿಸಲು ಗೈಡ್‌‌ಲೈನ್ಸ್ ನೀಡಲಾಗುತ್ತದೆ. ಅಕ್ಟೋಬರ್‌ 1ರಂದು ರೀ ಓಪನ್ ಮಾಡಲು ಸಿದ್ಧತೆ ಮಾಡಿಕೊಳ್ಳಬೇಕಾಗಿದೆ. ಈ ವಿಚಾರದ ಬಗ್ಗೆ ವಾಣಿಜ್ಯ ಮಂಡಳಿ ಹಾಗೂ ಸಿನಿಮಾ ನಟರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. 

ಬೆಂಗಳೂರಿನಲ್ಲಿ ಡ್ರೈವ್‌ ಇನ್‌ ಥೇಟರ್‌;ನಿಮ್ಮ ಕಾರಿನಲ್ಲೇ ಕೂತು, ನೀವು ಬಯಸಿದ ಚಿತ್ರ ನೋಡಿ!

ಕಳೆದ 6 ತಿಂಗಳಿಂದ ಚಿತ್ರಮಂದಿರಗಳು ಬಂದ್ ಆಗಿರುವ ಕಾರಣ ದೊಡ್ಡ ಪರದೆ ಮೇಲೆ ವೀಕ್ಷಕರು ಸಿನಿಮಾ ನೋಡಲು ಕಾಯುತ್ತಿದ್ದಾರೆ. ಚಿತ್ರರಂಗದ ಭರವಸೆಯ ಸಿನಿಮಾಗಳನ್ನು ಮೊದಲು ರಿಲೀಸ್ ಮಾಡಲಾಗುತ್ತದೆ. ದರ್ಶನ್‌ ಅಭಿನಯದ 'ರಾಬರ್ಟ್‌', ಸುದೀಪ್‌ ನಟನೆಯ 'ಕೋಟಿಗೊಬ್ಬ 3' ಹಾಗೂ ಧ್ರುವ ಸರ್ಜಾ 'ಪೊಗರು' ಸೇರಿ ಇನ್ನು ಅನೇಕ ಸಿನಿಮಾಗಳು ರಿಲೀಸ್‌ಗೆ ರೆಡಿಯಾಗುತ್ತಿವೆ.