ಕೋಲಾರ(ಆ.13): ದೇಶದ ಗಡಿಯಲ್ಲಿ ಶತ್ರು ಸೈನ್ಯದ ಗುಂಡಿಗೆ ಎದೆಯೊಡ್ಡಿ ನಿಂತ ವೀರ ಸೈನಿಕ ಆತ. ತನ್ನ ಸುದೀರ್ಘ ಸೇವೆಯಲ್ಲಿ ಯಾವುದೇ ಶತ್ರುವನ್ನ ಗಡಿಯೊಳಕ್ಕೆ ನುಗ್ಗಲು ಅವಕಾಶ ನೀಡದ ವೀರ ಯೋಧ. ದೇಶ ಸೇವೆ ಮಾಡಿ ನಿವೃತ್ತಿಯಾದ ಯೋಧ ತಾಯ್ನಾಡಿನಲ್ಲಿ ರೈಲಿಗೆ ಸಿಲುಕಿ ಸಾವನ್ನಪ್ಪಿದ ದುರಂತ ಘಟನೆ ನಡೆದಿದೆ.

ಬಂಗಾರಪೇಟೆಯ ಕುಪ್ಪಸ್ವಾಮಿ ಬಡಾವಣೆಯ ದೊರೆಸ್ವಾಮಿ(55) ಹಳಿ ದಾಟುವಾಗ ರೈಲಿಗೆ ಸಿಲುಕಿ ಸಾವನ್ನಪ್ಪಿದ ನಿವೃತ್ತ ವೀರ ಯೋಧ. ಪಟ್ಟಣದ ರೈಲು ನಿಲ್ದಾಣದಲ್ಲಿ ರೈಲಿನ ಹಳಿ ದಾಟುವಾಗ ಎದುರಿನಿಂದ ವೇಗವಾಗಿ ಬಂದ ರೈಲು ಡಿಕ್ಕಿಯಾಗಿ ದೊರೆಸ್ವಾಮಿ ಸಾವನ್ನಪ್ಪಿದ್ದಾರೆ.

ಕಾರ್ಯ ನಿಮಿತ್ತ ಸೇಲಂಗೆ ಹೊರಟ್ಟಿದ್ದ ಮಾಜಿ ಸೈನಿಕ ದೊರೆಸ್ವಾಮಿ, ಬಂಗಾರಪೇಟೆ ಪಟ್ಟಣ ರೈಲು ನಿಲ್ದಾಣಕ್ಕೆ ಆಗಮಿಸಿದ್ದಾರೆ.ಈ ವೇಳೆ ಘಟನೆ ನಡೆದಿದೆ. ಬಂಗಾರಪೇಟೆ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.