ಮಕ್ಕಳು ಜನಿಸಿದರೆನೇ ಖುಷಿ, ಅಂತಾದ್ದರಲ್ಲಿ ಅವಳಿ ಮಕ್ಕಳು, ಅದೂ ರೈಲಿನಲ್ಲಿ ಜನಿಸಿದ ಖಷಿ ಮುಂಬೈಯ ಮಹಿಳೆಯೊಬ್ಬರ ಪಾಲಿಗಾಗಿದೆ.
ಮುಂಬೈ : ಮಕ್ಕಳು ಜನಿಸಿದರೆನೇ ಖುಷಿ, ಅಂತಾದ್ದರಲ್ಲಿ ಅವಳಿ ಮಕ್ಕಳು, ಅದೂ ರೈಲಿನಲ್ಲಿ ಜನಿಸಿದ ಖಷಿ ಮುಂಬೈಯ ಮಹಿಳೆಯೊಬ್ಬರ ಪಾಲಿಗಾಗಿದೆ. ಮುಂಬೈ- ವಿಶಾಖಪಟ್ಟಣಂ ಎಕ್ಸ್‌ಪ್ರೆಸ್ ರೈಲಿನಲ್ಲಿ ಕುಟುಂಬ ದೊಂದಿಗೆ ಪ್ರಯಾಣಿಸುತ್ತಿದ್ದ ಘಾಟ್ಕೋಪರ್ ನಿವಾಸಿ ಶೇಖ್ ತಬಸ್ಸಂಗೆ ಕಲ್ಯಾಣ್ ಜಂಕ್ಷನ್ ಬಳಿ ಹೆರಿಗೆ ನೋವು ಕಾಣಿಸಿದೆ.
ವೈದ್ಯಕೀಯ ತುರ್ತನ್ನು ಪರಿಗಣಿಸಿ ರೈಲನ್ನು ಕಲ್ಯಾಣ್‌ನಲ್ಲಿ ನಿಲ್ಲಿಸಲಾಯಿತು. ರೈಲ್ವೆ ವೈದ್ಯಕೀಯ ತಂಡ ಮಹಿಳೆಯನ್ನು ಉಪಚರಿಸಿತು. ರೈಲಿನಲ್ಲೇ ಮಹಿಳೆ ಇಬ್ಬರು ಮಕ್ಕಳಿಗೆ ಜನ್ಮ ನೀಡಿದರು. ಮಗು ಒಂದು ಹೆಣ್ಣು, ಒಂದು ಗಂಡು. ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ, ಮಕ್ಕಳು ಆರೋಗ್ಯ ವಂತರಾಗಿದ್ದಾರೆ.
Scroll to load tweet…
Scroll to load tweet…
Scroll to load tweet…
