ಅತಿಹೆಚ್ಚು ಕೈದಿಗಳಿರುವ ದೇಶ ಯಾವುದು? ಕೈದಿಯೇ ಇಲ್ಲದ ದೇಶವೂ ಇದೆ ಗೊತ್ತಾ?
ಬೆಂಗಳೂರು: ಪ್ರತಿಯೊಂದು ದೇಶವೂ ತನ್ನ ಗಡಿಯೊಳಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ವ್ಯವಸ್ಥೆಯನ್ನು ಹೊಂದಿದೆ. ನಾವಿಂದು ಜಗತ್ತಿನಲ್ಲಿ ಅತಿಹೆಚ್ಚು ಮಂದಿ ಜೈಲಿನಲ್ಲಿರುವ ಟಾಪ್ 10 ದೇಶಗಳಾವುವು ಹಾಗೂ ಕೈದಿಯೇ ಇಲ್ಲದ ದೇಶ ಯಾವುದು ಎನ್ನುವುದನ್ನು ನೋಡೋಣ ಬನ್ನಿ.
ಈ ಅಂಕಿ-ಅಂಶವು ಮಾರ್ಚ್ 31, 2023ರ ವರೆಗಿನದ್ದಾಗಿದೆ.
1. ಅಮೆರಿಕ ಸಂಯುಕ್ತ ಸಂಸ್ಥಾನ:
ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ(ಯುಎಸ್ಎ)ನಲ್ಲಿ ಜೈಲಿನಲ್ಲಿ ಬಂದಿಯಾಗಿರುವ ಕೈದಿಯಲ್ಲೂ ನಂ.1 ಎನಿಸಿದೆ. ಅಮೆರಿಕದಲ್ಲಿ ಬರೋಬ್ಬರಿ 20,68,800 ಮಂದಿ ಜೈಲಿನಲ್ಲಿ ಬಂಧಿಯಾಗಿದ್ದಾರೆ.
2. ಚೀನಾ;
ಜಗತ್ತಿನ ಎರಡನೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ, ಎರಡನೇ ಅತಿಹೆಚ್ಚು ಕೈದಿಗಳನ್ನು ಹೊಂದಿರುವ ದೇಶವಾಗಿದೆ. ಚೀನಾದಲ್ಲಿ ಬರೋಬ್ಬರಿ 16,90,000 ಮಂದಿ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.
3. ಬ್ರೆಜಿಲ್:
ವಿಸ್ತೀರ್ಣದ ಆಧಾರದಲ್ಲಿ 5ನೇ ಅತಿದೊಡ್ಡ ದೇಶ ಎನಿಸಿಕೊಂಡಿರುವ ಬ್ರೆಜಿಲ್ನಲ್ಲಿ ಅಪರಾಧಿಗಳ ಸಂಖ್ಯೆ ಕೂಡಾ ಹೆಚ್ಚೇ ಇದೆ. ಬ್ರೆಜಿಲ್ನಲ್ಲಿ ಒಟ್ಟು 8,11,707 ಮಂದಿ ಜೈಲುವಾಸಿಗಳಾಗಿದ್ದಾರೆ.
4. ಭಾರತ:
ಜಗತ್ತಿನ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎನಿಸಿಕೊಂಡಿರುವ ಭಾರತದಲ್ಲಿ, ಕೈದಿಗಳ ಸಂಖ್ಯೆ ತುಸು ಹೆಚ್ಚೇ ಇದೆ. ಭಾರತದಲ್ಲಿ ಇಲ್ಲಿಯವರೆಗೆ 5,54,034 ಮಂದಿ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.
5. ರಷ್ಯಾ:
ವಿಸ್ತೀರ್ಣದ ಆಧಾರದಲ್ಲಿ ಜಗತ್ತಿನ ಅತಿ ವಿಶಾಲ ದೇಶ ಎನಿಸಿಕೊಂಡಿರುವ ರಷ್ಯಾದಲ್ಲಿ ಕಾನೂನು ಸುವ್ಯವಸ್ಥೆ ಭದ್ರವಾಗಿದೆ. ಈ ಕಾರಣಕ್ಕಾಗಿಯೇ 4,71,490 ರಷ್ಯಾದಲ್ಲಿ ಜೈಲಿನಲ್ಲಿ ಬಂಧಿಗಳಾಗಿದ್ದಾರೆ.
6. ಥಾಯ್ಲೆಂಡ್:
ಸುಂದರ ಬೀಚ್ಗಳು ಹಾಗೂ ಪ್ರವಾಸಿ ತಾಣಗಳಿಗೆ ಹೆಸರಾಗಿರುವ ಥಾಯ್ಲೆಂಡ್ನಲ್ಲಿ ಅಪರಾಧ ಕೃತ್ಯಗಳು ನಡೆಯುವುದು ಸರ್ವೇ ಸಾಮಾನ್ಯ ಎನಿಸಿದೆ. ಹೀಗಾಗಿಯೇ ಥಾಯ್ಲೆಂಡ್ನಲ್ಲಿ 309,282 ಮಂದಿ ಕಂಬಿ ಎಣಿಸುತ್ತಿದ್ದಾರೆ.
7. ಟರ್ಕಿ:
ಮುಸ್ಲಿಂ ಬಾಹುಳ್ಯ ಹೊಂದಿರುವ ಟರ್ಕಿ ಕೂಡಾ ಹೆಚ್ಚು ಅಪರಾಧ ಚಟುವಟಿಕೆಗಳ ಮೂಲಕ ಸುದ್ದಿಯಾಗುತ್ತಲೇ ಇರುತ್ತದೆ. ಸದ್ಯ ಟರ್ಕಿಯಲ್ಲಿ 2,91,198 ಮಂದಿ ಕೈದಿಗಳು ಜೈಲಿನಲ್ಲಿ ಬಂಧಿಯಾಗಿದ್ದಾರೆ.
8. ಇಂಡೋನೇಷ್ಯಾ:
ಜಗತ್ತಿನಲ್ಲಿ ಅತಿಹೆಚ್ಚು ಮುಸ್ಲಿಂರನ್ನು ಹೊಂದಿರುವ ದೇಶ ಎನಿಸಿಕೊಂಡಿರುವ ಸುಂದರ ಬೀಚ್ಗಳು, ಜ್ವಾಲಾಮುಖಿಗಳಿಗೆ ಹೆಸರುವಾಸಿಯಾಗಿವೆ. ಇಲ್ಲಿ ತಪ್ಪು ಮಾಡಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವವರ ಸಂಖ್ಯೆ ಬರೋಬ್ಬರಿ 2,66,259..!
9. ಮೆಕ್ಸಿಕೊ:
ದಕ್ಷಿಣ ಅಮೆರಿಕಾದ ತುದಿಯಲ್ಲಿರುವ ಮೆಕ್ಸಿಕೊ ದೇಶವು, ಜಗತ್ತಿನ ಅಪಾಯಕಾರಿ ದೇಶಗಳಲ್ಲಿ ಒಂದು ಎನಿಸಿದೆ. ಮೆಕ್ಸಿಕೊದಲ್ಲಿ 2,20,866 ಮಂದಿ ಕೈದಿಗಳು ಜೈಲಿನೊಳಗೆ ಜೀವನ ನಡೆಸುತ್ತಿದ್ದಾರೆ.
10. ಇರಾನ್:
ಡ್ರಗ್ಸ್, ಮಾನವ ಕಳ್ಳಸಾಗಾಣಿಕೆ, ಭ್ರಷ್ಟಾಚಾರ ಸೇರಿದಂತೆ ಹಲವು ಕುಕೃತ್ಯಗಳಿಗೆ ಹೆಸರುವಾಸಿಯಾಗಿರುವ ಇರಾನ್ನಲ್ಲಿ 1,89,000 ಮಂದಿ ವಿವಿಧ ಅಪರಾಧ ಕೃತ್ಯಗಳಿಗಾಗಿ ಕಂಬಿ ಎಣಿಸುತ್ತಿದ್ದಾರೆ.
ವ್ಯಾಟಿಕನ್ ಸಿಟಿ
ಜಗತ್ತಿನ ಅತ್ಯಂತ ಚಿಕ್ಕದೇಶಗಳಲ್ಲಿ ಒಂದಾಗಿರುವ ವ್ಯಾಟಿಕನ್ ಸಿಟಿಯಲ್ಲಿ ಒಬ್ಬೇ ಒಬ್ಬ ಮಂದಿ ಜೈಲಿನಲ್ಲಿಲ್ಲ. 121 ಎಕರೆ ಇರುವ ಈ ದೇಶದಲ್ಲಿ 763 ಮಂದಿ ವಾಸವಾಗಿದ್ದು, ಒಬ್ಬರೂ ಕೂಡಾ ಅಪರಾಧದ ತಪ್ಪಿಗೆ ಜೈಲಿನಲ್ಲಿಲ್ಲ ಎನ್ನುವುದು ವಿಶೇಷ.