- Home
- News
- World News
- 24 ಸಾವಿರ ಅಡಿ ಎತ್ತರದಲ್ಲಿದ್ದಾಗಲೇ ವಿಮಾನದ ಮೇಲ್ಛಾವಣಿ ಹಾರಿ ಹೋಗಿತ್ತು! ಆದ್ರೂ ಪ್ರಯಾಣಿಕರು ಸೇಫ್!
24 ಸಾವಿರ ಅಡಿ ಎತ್ತರದಲ್ಲಿದ್ದಾಗಲೇ ವಿಮಾನದ ಮೇಲ್ಛಾವಣಿ ಹಾರಿ ಹೋಗಿತ್ತು! ಆದ್ರೂ ಪ್ರಯಾಣಿಕರು ಸೇಫ್!
24,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ಪ್ರಯಾಣಿಕ ವಿಮಾನದ ಮೇಲ್ಛಾವಣಿ ಹಾರಿ ಹೋಗಿತ್ತು. ಆದ್ರೂ ಪೈಲಟ್‌ನ ಸಮಯಪ್ರಜ್ಞೆಯಿಂದ ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲರೂ ಬದುಕುಳಿದಿದ್ದರು. ಈ ಘಟನೆ 1988 ರಲ್ಲಿ ಅಲೋಹಾ ಏರ್‌ಲೈನ್ಸ್‌ನ ಫ್ಲೈಟ್ 243 ರಲ್ಲಿ ಸಂಭವಿಸಿತ್ತು.

ವಿಮಾನ ಪ್ರಯಾಣ ತುಂಬಾ ರೋಮಾಂಚನಕಾರಿಯಾಗಿರುತ್ತದೆ. ಆದ್ರೆ ಒಂದೇ ಒಂದು ಸಣ್ಣ ತಪ್ಪಾದ್ರೂ ಇಲ್ಲಿ ಬದುಕುಳಿಯುವ ಸಾಧ್ಯತೆಗಳಿಗೆ ತುಂಬಾನೇ ಕಡಿಮೆಯಾಗಿರುತ್ತದೆ. ಇಂದು ಅಹಮದಾಬಾದ್‌ನಲ್ಲಿ ಪ್ರಯಾಣಿಕರ ವಿಮಾನವೊಂದು ಟೇಕಾಫ್ ಆದ ಕೆಲವೇ ಸಮಯದಲ್ಲಿ ಪತನಗೊಂಡಿದೆ.
ಈ ಹಿಂದೆ ಅಂದ್ರೆ 24,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ಪ್ರಯಾಣಿಕ ವಿಮಾನದ ಮೇಲ್ಛಾವಣಿ ಹಾರಿ ಹೋಗಿತ್ತು. ಆದ್ರೂ ಈ ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲರೂ ಬದುಕುಳಿದಿದ್ದರು.
ವಾಷಿಂಗ್ಟನ್ ಪೋಸ್ಟ್ ವರದಿಯ ಪ್ರಕಾರ, ಏಪ್ರಿಲ್ 28, 1988ರಂದು, ಹವಾಯಿಯ ಹಿಲೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊನೊಲುಲುಗೆ ಹೊರಟಿದ್ದ ಅಲೋಹಾ ಏರ್‌ಲೈನ್ಸ್‌ನ ಫ್ಲೈಟ್ 243, ಜಗತ್ತನ್ನೇ ಬೆಚ್ಚಿಬೀಳಿಸುವ ಘಟನೆಗೆ ಸಾಕ್ಷಿಯಾಗಿತ್ತು. 24 ಸಾವಿರ ಅಡಿ ಎತ್ತರದಲ್ಲಿದ್ದಾಗ ವಿಮಾನ ಮೇಲ್ಛಾವಣಿ ಹಾರಿದ್ರೂ ಪೈಲಟ್‌ನ ಸಮಯಪ್ರಜ್ಞೆಯಿಂದ ಎಲ್ಲರೂ ಪ್ರಾಣಾಪಾಯುದಿಂದ ಪಾರಾಗಿದ್ದರು.
24,000 ಅಡಿ ಎತ್ತರದಲ್ಲಿ Aloha Airlines Flight 243 ವಿಮಾನ ಹಾರಾಟ ಮಾಡುತ್ತಿದ್ದಾಗ ಛಾವಣಿಯ ದೊಡ್ಡ ಭಾಗ ಹಾರಿಹೋಗಿತ್ತು. ಈ ಘಟನೆ ತುಂಬಾ ಭಯಾನಕ ಮತ್ತು ನಂಬಲು ಅಸಾಧ್ಯ. ಆದ್ರೆ ಈ ರೀತಿಯ ಘಟನೆಯೊಂದು ನಡೆದಿತ್ತು.
ವಿಮಾನದಲ್ಲಿದ್ದ 89 ಪ್ರಯಾಣಿಕರ ಪ್ರಾಣ ಅಪಾಯದಲ್ಲಿತ್ತು, ಆದರೆ ಪೈಲಟ್ ಮತ್ತು ಸಿಬ್ಬಂದಿಯ ಧೈರ್ಯ ಮತ್ತು ಕ್ಷಿಪ್ರ ನಿರ್ಧಾರ ಈ ದುರಂತದಲ್ಲಿ ಅನೇಕ ಜನರನ್ನು ಬದುಕಿಸಿತು. ಇಷ್ಟು ದೊಡ್ಡ ದುರಂತ ಸಂಭವಿಸಿದರೂ ಪ್ರಯಾಣಿಕರು ಬದುಕುಳಿದಿದ್ದರು. ಇಂದಿಗೂ ಈ ವಿಮಾನದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ.
ವಿಮಾನದ ಮೇಲ್ಛಾವಣಿ ಹಾರು ಹೋಗುತ್ತಿದ್ದಂತೆ ದೊಡ್ಡದಾದ ಸದ್ದು ಕೇಳಿಸಿತ್ತು. ಇದರಿಂದಾಗಿ ಕ್ಯಾಬಿನ್‌ನಲ್ಲಿ ಒತ್ತಡ ಇಳಿಯಿತು ಮತ್ತು ಪ್ರಯಾಣಿಕರು ಮತ್ತು ಸಿಬ್ಬಂದಿ ಗಾಳಿಯಲ್ಲಿ ತೇಲಾಡಲು ಪ್ರಾರಂಭಿಸಿದರು. ಈ ಸಮಯದಲ್ಲಿ ಪೈಲಟ್ ರಾಬರ್ಟ್ ಶೋರ್ನ್‌ಸ್ಟೈಮರ್ ಈ ಕಠಿಣ ಪರಿಸ್ಥಿತಿಯಲ್ಲಿಯೂ ತಮ್ಮ ಸ್ಥಿತಪ್ರಜ್ಞೆ ಕಳೆದುಕೊಳ್ಳಲಿಲ್ಲ. ತಕ್ಷಣ ತುರ್ತು ಲ್ಯಾಂಡಿಂಗ್‌ಗಾಗಿ ವಿಮಾನವನ್ನು ತಿರುಗಿಸಿದರು. ವಿಮಾನ ಸಿಬ್ಬಂದಿಗೆ ಧೈರ್ಯವಾಗಿರುವಂತೆ ಹೇಳಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದರು
ಪೈಲಟ್ ಸೂಚನೆಯಂತೆ ಪ್ರಯಾಣಿಕರೆಲ್ಲರೂ ಶಾಂತವಾಗಿದ್ದರು. ಈ ಕಠಿಣ ಸಮಯದಲ್ಲಿ ಪೈಲಟ್ ಮತ್ತು ಸಿಬ್ಬಂದಿಗೆ ಸಂಪೂರ್ಣ ಬೆಂಬಲ ನೀಡಿದರು. ಅಂತಿಮವಾಗಿ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಯ್ತು. ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಎಲ್ಲರೂ ಪೈಲಟ್‌ಗೆ ಧನ್ಯವಾದ ಹೇಳಿದ್ದರು.