MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • World News
  • Energy Drinks ಕುಡಿಯುವ ಮುನ್ನ...: 17ರ ಬಾಲಕಿಗೆ ಪರಿಸ್ಥಿತಿ ಕಂಡು ವೈದ್ಯರಿಗೇ ಶಾಕ್!

Energy Drinks ಕುಡಿಯುವ ಮುನ್ನ...: 17ರ ಬಾಲಕಿಗೆ ಪರಿಸ್ಥಿತಿ ಕಂಡು ವೈದ್ಯರಿಗೇ ಶಾಕ್!

ಎನರ್ಜಿ ಡ್ರಿಂಕ್ಸ್(Energy Drinks) ಸೇವಿಸಿದರೆ ಶಕ್ತಿ ಬರುತ್ತದೆ ಎಂಬುವುದು ಸಾಮಾನ್ಯ ನಂಬಿಕೆ. ಈ ಕಾರಣಕ್ಕಾಗಿ ಅನೇಕರು ಇದನ್ನು ಕುಡಿಯುತ್ತಾರೆ. ಕೆಲವರು ಇದನ್ನು ವ್ಯಾಯಾಮದ ಸಮಯದಲ್ಲಿ ಅಥವಾ ಬಳಿಕ ತೆಗೆದುಕೊಳ್ಳುತ್ತಾರೆ. ಆದರೆ ಈ ಶಕ್ತಿ ಕೊಡುವ ಎನರ್ಜಿ ಡ್ರಿಂಕ್ಸ್ ಹಾನಿಯುಂಟು ಮಾಡಬಹುದೆಂದು ನಿಮಗೆ ತಿಳಿದಿದೆಯಾ?. ಹೌದು ಸ್ವಿಡ್ಜರ್‌ಲ್ಯಾಂಡ್‌ನ ಬಾಲಕಿಯೊಬ್ಬಳಿಗೆ ಸದ್ಯ ಇಂತಹುದೇ ಪರಿಸ್ಥಿತಿ ಎದುರಾಗಿದೆ. ಎನರ್ಜಿ ಡ್ರಿಂಕ್ಸ್‌ಗೆ(Energy Drinks) ಅದೆಷ್ಟು ಅಡಿಕ್ಟ್ ಆಗಿದ್ದಳೆಂದರೆ, ಆಕೆಯನ್ನು ಆಸ್ಪತ್ರೆಗೆ ದಾಖಲಿಸಬೇಕಾದ ಅನಿವಾರ್ಯತೆ ಬಂದಿದೆ. ತನ್ನ ದಿನದಾರಂಭವನ್ನು ಎನರ್ಜಿ ಡ್ರಿಂಕ್ಸ್ ಸೇವಿಸಿ ಆರಂಭಿಸುತ್ತಿದ್ದ ಬಾಲಕಿ, ದಿನವೊಂದಕ್ಕೆ ಅನೇಕ ಬಾಟಲ್‌ಗಳನ್ನು ಮುಗಿಸುತ್ತಿದ್ದಳು. ಹಾಗಾದ್ರೆ ಆಕೆಗೇನಾಯ್ತು ಎಂಬ ಪ್ರಶ್ನೆ ಕಾಡುವುದು ಸಹಜ. ಇಲ್ಲಿದೆ ನೋಡಿ ವಿವರ. 

1 Min read
Author : Suvarna News
| Updated : Sep 29 2021, 04:28 PM IST
Share this Photo Gallery
  • FB
  • TW
  • Linkdin
  • Whatsapp
16
ಎನರ್ಜಿ ಡ್ರಿಂಕ್ಸ್‌ಗೆ ಅಡಿಕ್ಟ್ ಆಗಿದ್ದ ಮಾಷಾ

ಎನರ್ಜಿ ಡ್ರಿಂಕ್ಸ್‌ಗೆ ಅಡಿಕ್ಟ್ ಆಗಿದ್ದ ಮಾಷಾ

ಸ್ವಿಟ್ಜರ್‌ಲ್ಯಾಂಡ್‌ನ ಜ್ಯೂರಿಚ್‌ನ ಮಾಷಾ(Mascha from Zurich) ಕೆಫಿನ್‌ಯುಕ್ತ ಪಾನೀಯದೊಂದಿಗೆ ತನ್ನ ದಿನವನ್ನು ಆರಂಭಿಸುತ್ತಿದ್ದಳು. ಅಲ್ಲದೇ ಆಕೆ ಈ ಎನರ್ಜಿ ಡ್ರಿಂಕ್ಸ್(Energy Drinks) ಗೆ ಒಂದು ರೀತಿ ಅಡಿಕ್ಟ್ ಆಗಿದ್ದಳು.

26
ಮಾಷಾಳನ್ನು ಆಸ್ಪತ್ರೆಗೆ ದಾಖಲಿಸಬೇಕಾಯ್ತು

ಮಾಷಾಳನ್ನು ಆಸ್ಪತ್ರೆಗೆ ದಾಖಲಿಸಬೇಕಾಯ್ತು

ಮಾಷಾ ಈ ಬಗ್ಗೆ ಮಾಹಿತಿ ನೀಡಿದ್ದು, ಒಂದು ಎನರ್ಜಿ ಡ್ರಿಂಕ್(Energy Drinks) ಮತ್ತು ಸಿಗರೇಟ್ ಜೊತೆಗೆ ನನ್ನ ದಿನ ಆರಂಭವಾಗುತ್ತಿತ್ತು. ನಂತರ ಪ್ರತಿ ವಿರಾಮದ ಸಮಯದಲ್ಲಿ, ಕೆಲಸದ ನಂತರ ಮತ್ತು ಸಂಜೆ, ತನ್ನ ಸ್ನೇಹಿತರೊಂದಿಗೆ ಎನರ್ಜಿ ಡ್ರಿಂಕ್(Energy Drinks) ಸೇವಿಸುತ್ತಿದ್ದೆ ಎಂದಿದ್ದಾರೆ. ಮಾಷಾ ಪ್ರತಿದಿನ ಎರಡು ಡಜನ್ ಗಿಂತ ಹೆಚ್ಚು ಕಬ್ಬಿನ ರನರ್ಜಿ ಡ್ರಿಂಕ್‌ ಸೇವಿಸುತ್ತಿದ್ದೆ ಎಂದು ವೈದ್ಯರಿಗೆ ತಿಳಿಸಿದ್ದಾರೆ. ಇದನ್ನು ಕೇಳಿದ ವೈದ್ಯರೇ ಆಶ್ಚರ್ಯಚಕಿತರಾಗಿದ್ದಾರೆ. 
 

36

17 ವರ್ಷದ ಮಾಷಾಗೆ ತರಬೇತಿ ಶಾಲೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಾಗ ಈ ಪಾನೀಯದಿಂದಾಗುವ ಅಪಾಯದ ಬಗ್ಗೆ ಅರಿವಾಗಿದೆ. ಬೀಳುವ ಮುನ್ನ ಆಕೆಗೆ ಎದೆಯಲ್ಲಿ ಭಾರೀ ನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಯ ಹಾಸಿಗೆಯಲ್ಲಿ ಮೇಲೆ ಮಲಗಿರುವ ತನ್ನ ಚಿತ್ರವನ್ನು ಪೋಸ್ಟ್ ಮಾಡಿರುವ ಮಾಷಾ, ಎನರ್ಜಿ ಡ್ರಿಂಕ್ಸ್ ಚಟ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಜನರಿಗೆ ಎಚ್ಚರಿಕೆ ನೀಡಿದ್ದಾರೆ.

46

ಮಾಷಾ ಸ್ವತಃ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾಳೆ, ಹೀಗಿರುವಾಗ ಒಂದು ದಿನ ಆಕೆ ಇದ್ದಕ್ಕಿದ್ದಂತೆ ಪ್ರಜ್ಞಾಹೀನಳಾಗಿದ್ದಾಳೆ. ಆಕೆಯ ಸ್ನೇಹಿತ ಟ್ಯಾಕ್ಸ್ಇ ಕರೆಸಿ, ಆಕೆಯನ್ನು ವಿಂಟರ್ತೂರ್ ಕ್ಯಾಂಟೋನಲ್ ಆಸ್ಪತ್ರೆಗೆ(Winterthur Cantonal Hospital) ದಾಖಲಿಸಿದ್ದಾನೆ.

56

ಮಾಧ್ಯಮ ವರದಿಗಳ ಪ್ರಕಾರ, ಆಕೆಗೆ ಎನರ್ಜಿ ಡ್ರಿಂಕ್ಸ್ ಚಟವಿತ್ತು ಎನ್ನಲಾಗಿದೆ. ಇನ್ನು ಆಕೆಯನ್ನು ಪರಿಶೀಲಿಸಿ ಚಿಕಿತ್ಸೆ ನಿಡಿರುವ ವೈದ್ಯರು ಎನರ್ಜಿ ಡ್ರಿಂಕ್ಸ್ ಸೇವಿಸುವುದನ್ನು ನಿಲ್ಲಿಸದಿದ್ದರೆ ಕೆಲ ದಿನಗಳ ಬಳಿಕ ಮತ್ತೆ ಆಸ್ಪತ್ರೆಗೆ ಬರಬೇಕಾಗಬಹುದು ವೈದ್ಯರು ಎಚ್ಚರಿಸಿದ್ದಾರೆ.

66

ಇನ್ನು ಮಾಷಾ ತನ್ನ ಆರೋಗ್ಯ ಹದಗೆಟ್ಟಿದ್ದರಿಂದ ಎನರ್ಜಿ ಡ್ರಿಂಕ್ಸ್ ಕುಡಿಯುವುದನ್ನು ನಿಲ್ಲಿಸಿದ್ದೇನೆ, ಇದರಿಂದ ಆರೋಗ್ಯವೂ ಸುಧಾರಿಸಿದೆ ಎಂದಿದ್ದಾರೆ. ಎನರ್ಜಿ ಡ್ರಿಂಕ್ಸ್‌ಗಳಲ್ಲಿ ಕೆಫೀನ್ ಅಧಿಕವಾಗಿರುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಹೆಚ್ಚಿನ ಪ್ರಮಾಣದ ಕೆಫೀನ್ ಅನಾರೋಗ್ಯ ಸೃಷ್ಟಿಸುತ್ತದೆ, ನಿದ್ದೆಗೆ ಸಂಬಮಧಿಸಿದ ಸಮಸ್ಯೆಗಳಿಗೆ ಹಾದಿ ಮಾಡಿಕೊಡುತ್ತದೆ ಎಂದಿದ್ದಾರೆ. 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Suvarna News
ಶಕ್ತಿ ಪಾನೀಯಗಳು
ಆರೋಗ್ಯ

Latest Videos
Recommended Stories
Recommended image1
ಪುಟ್ಟ ಮಕ್ಕಳಂತೆ ವೆಡ್ಡಿಂಗ್ ಕೇಕ್ ರುಚಿ ನೋಡಿದ ವರ: ಆಕ್ಷೇಪಿಸಿದ ವಧು: ಆಮೇಲಾಗಿದ್ದು ದುರಂತ: ವೀಡಿಯೋ
Recommended image2
ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಸಮಾರಂಭದಲ್ಲಿ ಪ್ರಿಯಾಂಕಾ ಚೋಪ್ರಾ-ನಿಕ್ ಜೋನಾಸ್ ಜೋಡಿಯ ಮಿಂಚಿನ ಸಂಚಾರ!
Recommended image3
2 ದಿನ, 2000 ಬಲಿ? ಇರಾನ್‌ನಲ್ಲಿ ತುಂಬಿದ ಶವಾಗರಗಳು, ಶವವಿಡಲು ಜಾಗವೇ ಇಲ್ಲ; ಸೂಕ್ತ ವೈದ್ಯರೂ ಇಲ್ಲ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved