‘ಜಾಗತಿಕ ಶೇ.40ರಷ್ಟು ಉದ್ಯೋಗ ಅದರಲ್ಲೂ ವಿಶೇಷವಾಗಿ ಪ್ರಾರಂಭಿಕ ಹಂತದ ಉದ್ಯೋಗಳ ಮೇಲೆ ಎಐ ಮತ್ತು ಎಐ ಆಧರಿತಿ ತಂತ್ರಜ್ಞಾನದ ಬದಲಾವಣೆಗಳು ಆಪತ್ತು ತರಲಿದೆ. ಕಾರ್ಮಿಕ ಮಾರುಕಟ್ಟೆಯ ಮೇಲೆ ಅಪ್ಪಳಿಸುವ ಈ ಬೆಳವಣಿಗೆ ಹೊಸ ಯುಗನಿರ್ಣಯದ ಸುನಾಮಿ ರೀತಿ ಇರಲಿದೆ

ನವದೆಹಲಿ: ‘ಜಾಗತಿಕ ಶೇ.40ರಷ್ಟು ಉದ್ಯೋಗ ಅದರಲ್ಲೂ ವಿಶೇಷವಾಗಿ ಪ್ರಾರಂಭಿಕ ಹಂತದ ಉದ್ಯೋಗಳ ಮೇಲೆ ಎಐ ಮತ್ತು ಎಐ ಆಧರಿತಿ ತಂತ್ರಜ್ಞಾನದ ಬದಲಾವಣೆಗಳು ಆಪತ್ತು ತರಲಿದೆ. ಕಾರ್ಮಿಕ ಮಾರುಕಟ್ಟೆಯ ಮೇಲೆ ಅಪ್ಪಳಿಸುವ ಈ ಬೆಳವಣಿಗೆ ಹೊಸ ಯುಗನಿರ್ಣಯದ ಸುನಾಮಿ ರೀತಿ ಇರಲಿದೆ’ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜಿಯೇವಾ ಶುಕ್ರವಾರ ಎಚ್ಚರಿಸಿದ್ದಾರೆ.

Add Asianetnews Kannada as a Preferred SourcegooglePreferred

ಎಐ ಶೃಂಗಸಭೆಯಲ್ಲಿ ಮಾತನಾಡಿದ ಐಎಂಎಫ್‌ ಮುಖ್ಯಸ್ಥೆ

ಇಲ್ಲಿ ನಡೆಯುತ್ತಿರುವ ಎಐ ಶೃಂಗಸಭೆಯಲ್ಲಿ ಮಾತನಾಡಿದ ಐಎಂಎಫ್‌ ಮುಖ್ಯಸ್ಥೆ, ‘ಐಎಂಎಫ್‌ ನಡೆಸಿರುವ ಅಧ್ಯಯನ ವರದಿಗಳ ಅನ್ವಯ, ಮುಂದುವರೆದ ಆರ್ಥಿಕತೆಯ ದೇಶಗಳಲ್ಲಿ ಕಾರ್ಮಿಕ ವಲಯದ ಮೇಲಿನ ಎಐ ಪರಿಣಾಮ ಶೇ.60ರವರೆಗೂ ಇರಲಿದೆ. ಆದರೆ ಭಾರತದಲ್ಲಿ ಈ ಪಮಾಣ ಶೇ.26ರಷ್ಟು ಇರಲಿದೆ ಎಂಬ ಅಂದಾಜಿದೆ’ ಎಂದು ಹೇಳಿದ್ದಾರೆ.

ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾದ ಭಾರತ

ಜೊತೆಗೆ, ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾದ ಭಾರತದಲ್ಲಿ ಪ್ರತಿ ವರ್ಷ ಲಕ್ಷಾಂತರ ಜನರು ಉದ್ಯೋಗಕ್ಕೆ ಸೇರುತ್ತಾರೆ. ಉದಾಹರಣೆಗೆ, 2023-2024ರ ನಡುವೆ 1.90 ಕೋಟಿ ಜನ ಕೆಲಸಕ್ಕೆ ಸೇರಿದ್ದಾರೆ. ಆದರೆ ಎಐನ ಬೇಡಿಕೆಗೆ ತಕ್ಕಂತೆ ಜನರನ್ನು ಸಿದ್ಧಪಡಿಸುವಲ್ಲಿ ನಾವು ಹಿಂದುಳಿದಿದ್ದೇವೆ. ಇದು ಉದ್ಯೋಗಗಳನ್ನು ಸೃಷ್ಟಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರುತ್ತದೆ. ಎಐ ಮತ್ತು ಎಐ ಆಧರಿತ ತಂತ್ರಜ್ಞಾನದ ಸುನಾಮಿಯಿಂದ ಈ ಒತ್ತಡ ಇನ್ನಷ್ಟು ಉಲ್ಬಣಗೊಳ್ಳುತ್ತದೆ. ಆದರೆ ಸರಿಯಾಗಿ ನಿರ್ವಹಿಸಿದರೆ, ಎಐನಿಂದ ಭಾರತದ ಜಿಡಿಪಿ ವಾರ್ಷಿಕವಾಗಿ ಶೇ.0.7ರಷ್ಟು ಹೆಚ್ಚಾಗಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.