ಕೊರೋನಾಕ್ಕೆ ಸ್ವೀಡನ್ ಬಳಿ ದಿವ್ಯೌಷಧ 'ಕೋಲ್ಡ್ ಜೈಮ್' ಇದೊಂದು ಸ್ಪ್ರೇ!
ಕೊರೋನಾಕ್ಕೆ ಲಸಿಕೆ ಹುಡುಕಲು ವಿಶ್ವದ ಎಲ್ಲ ದೇಶಗಳು ಯತ್ನ ಮಾಡುತ್ತಲೇ ಇವೆ. ರಷ್ಯಾ ತಾನು ಲಸಿಕೆ ಕಂಡುಹಿಡಿದಿದ್ದು ಫೈನಲ್ ಹಂತದಲ್ಲಿದೆ ಎಂದು ಹೇಳಿದೆ. ಅದೆಲ್ಲದರ ನಡುವೆ ಮತ್ತೊಂದು ಸುದ್ದಿ ಹೊರಗೆ ಬಂದಿದೆ.
ಇದೀಗ ಸ್ವೀಡನ್ ವಿಜ್ಞಾನಿಗಳು ಲಸಿಕೆ ಬಗ್ಗೆ ಒಂದು ಸುದ್ದಿ ಹೊರಗೆ ಹಾಕಿದ್ದಾರೆ.
ಸಾಮಾನ್ಯ ಜ್ವರಕ್ಕೆ ಬಳಕೆ ಮಾಡುತ್ತಿದ್ದ ಔಷಧವೊಂದು ಕೊರೋನಾ ಮೇಲೆ ಶೇ. 98. 3 ಪರಿಣಾಮ ಬೀರಿದೆ ಎಂದಿದ್ದಾರೆ.
Enzymaticaದಲ್ಲಿರುವ ಸ್ವೇಡಿಶ್ ಲೈಫ್ ಸೈನ್ಸ್ ಇಂಥದ್ದೊಂದು ಸಂಗತಿಯನ್ನು ಜಗತ್ತಿಗೆ ತಿಳಿಸಿದೆ.
ಕಂಪನಿ ತಯಾರು ಮಾಡುವ ಮೌತ್ ಸ್ಪ್ರೇ ಕೊರೋನಾದ ಮೇಲೆ ಪರಿಣಾಮ ಉಂಟುಮಾಡಿದ್ದು ವೈರಸ್ ಹಂತಕನಾಗಿದೆ ಎಂದು ಹೇಳಿದೆ.
ಜಗತ್ತಿನಲ್ಲಿ 14. 8 ಮಿಲಿಯನ್ ಜನ ಕೊರೋನಾದಿಂದ ಬಳಲುತ್ತಿದ್ದಾರೆ. ಸಾವಿನ ಸಂಖ್ಯೆಯೂ ಆರು ಲಕ್ಷ ಮೀರಿದೆ.
ಇನ್ನು ಸ್ವೀಡನ್ ನಲ್ಲಿ 78,000 ಕೊರೋನಾ ಆಕ್ಟೀವ್ ಕೇಸು ಇದ್ದರೆ 5000 ಜನ ಬಲಿಯಾಗಿದ್ದಾರೆ.
ಸಾಮಾನ್ಯ ಜ್ವರಕ್ಕೆ ಬಳಕೆ ಮಾಡುವ ಔಷಧ ಕೋಲ್ಡ್ ಜೈಮ್ ನ್ನು ಕೊರೋನಾ ರೋಗಿಗಳ ಮೇಲೆಯೂ ಪ್ರಯೋಗ ಮಾಡಲಾಗಿದೆ.
ಕೊರೋನಾ ಮಾತ್ರವಲ್ಲ ಇದು ಬೇರೆ ವೈರಸ್ ಗಳು ದೇಹ ಸೇರುವುದನ್ನು ತಡೆಯುತ್ತದೆ ಎಂದು ಕಂಪನಿ ಹೇಳಿದೆ.
ಬ್ಯಾಕ್ಟೀರಿಯಾ ಮತ್ತು ವೈರಸ್ ವಿರೋಧಿ ಹೋರಾಟಕ್ಕೆ ಈ ಸ್ಪ್ರೆ ಸಿದ್ಧಮಾಡಲಾಗಿದೆ.
ಮೌತ್ ಇಂಜೆಕ್ಷನ್ ಸಹ ಕೊರೋನಾ ವಿರುದ್ಧದ ಹೋರಾಟಕ್ಕೆ ಅಸ್ತ್ರವಾಗಬಲ್ಲದು ಎಂದು ಕಂಪನಿ ಹೇಳಿದೆ.
ಈ ಔಷಧಿ ಯಾವ ಬಗೆಯಲ್ಲಿಯೂ ಸೈಡ್ ಎಫೆಕ್ಟ್ ಉಂಟುಮಾಡುವುದಿಲ್ಲ. ಅಮಲು ಏರಿಸುವ ರೀತಿಯಲ್ಲಿಯೂ ಇಲ್ಲ ಎಂದು ಕಂಪನಿ ತಿಳಿಸಿದೆ.
ಹಾಗಾದರೆ ಕೊರೋನಾ ವಿರುದ್ಧದ ಹೋರಾಟಕ್ಕೆ ಇದು ಬಳಕೆಯಾಗುತ್ತದೆಯಾ? ಎಂಬ ಪ್ರಶ್ನೆ ಕೇಳಿಕೊಂಡರೆ ಸದ್ಯಕ್ಕೆ ಉತ್ತರ ಇಲ್ಲ.
ಇನ್ನು ಹೆಚ್ಚಿನ ಕ್ಲಿನಿಕಲ್ ಸ್ಡಡಿ ನಡೆದು ವಿಶ್ವ ಆರೋಗ್ಯ ಸಂಸ್ಥೆಯ ಒಪ್ಪಿಗೆಯೂ ಬಳಕೆಗೆ ಬೇಕಾಗುತ್ತದೆ. ಏನೇ ಇರಲಿ ಸ್ವೀಡನ್ ಮಾತ್ರ ಕೊರೋನಾಕ್ಕೆ ನಮ್ಮ ಬಳಿ ಮದ್ದಿದೆ ಎಂದು ಹೇಳಿಕೊಂಡಿದೆ.