ಪ್ರೇಯಸಿಗಾಗಿ ಗ್ರಾಹಕರ 31 ಕೋಟಿ ರೂ ಉಡಾಯಿಸಿದ ಬ್ಯಾಂಕ್ ಮ್ಯಾನೇಜರ್!
ಪ್ರೀತಿಯಲ್ಲಿ ಬಿದ್ದವರಿಗೆ ಯಾವುದು ಸರಿ? ಯಾವುದು ತಪ್ಪು ಎಂದು ತಿಳಿಯುವುದಿಲ್ಲ. ಆಗ ಕೇವಲ ತನ್ನ ಪ್ರೀತಿಯನ್ನು ಪಡೆಯಬೇಕೆಂಬ ಹುಚ್ಚು ಆಸೆ ತಲೆಯಲ್ಲಿರುತ್ತದೆ. ಆದರೆ ಯಾವಾಗ ತಮ್ಮ ತಪ್ಪಿನ ಅರಿವಾಗುತ್ತದೋ, ಆಗ ಬಹಳ ತಡವಾಗಿರುತ್ತದೆ. ಸದ್ಯ ಇಂತಹುದೇ ಹುಚ್ಚು ಮನಸ್ಸಿನ ವ್ಯಕ್ತಿಯೊಬ್ಬ ಮೆಲ್ಬರ್ನ್‌ನಲ್ಲಿ ಅರೆಸ್ಟ್ ಆಗಿದ್ದಾನೆ. ಈತ ದೇಶದ ಪ್ರತಿಷ್ಠಿತ ಬ್ಯಾಂಕ್‌ನ ಮ್ಯಾನೇಜರ್ ಆಗಿದ್ದ. ಉತ್ತಮ ಸಂಪಾದನೆ ಇದ್ದ ಆತನ ದಿನಗಳ ಆರಾಮಾಗಿ ಕಳೆಯುತ್ತಿದ್ದವು. ಆದರೆ ಅಷ್ಟರಲ್ಲೇ ಆತನ ಜೀವನಕ್ಕೆ ಓರ್ವ ಹೆಣ್ಣು ಎಂಟ್ರಿ ಕೊಡುತ್ತಾಳೆ. ಇದಾದ ಬಳಿಕ ಆಕೆಯನ್ನು ಇಂಪ್ರೆಸ್ ಮಾಡುವ ಹುಚ್ಚು ಅದೆಷ್ಟು ಹಿಡಿದಿದೆ ಎಂದರೆ ಆತ ತನ್ನ ಬ್ಯಾಂಕ್ ಗ್ರಾಹಕರ ಖಾತೆಯಲ್ಲಿದ್ದ ಲಕ್ಷಾಂತರವಲ್ಲ, ಕೋಟ್ಯಾಂತರ ರೂಪಾಯಿ ಆಕೆಯ ಮೇಲೆ ವ್ಯಯಿಸಿದ್ದಾನೆ. ಆತ ಈ ಹಣದಲ್ಲಿ ಆಕೆಗೆ ದುಬಾರಿ ಗಿಫ್ಟ್ ಹಾಗೂ ಐಷಾರಾಮಿತನಕ್ಕೆ ಖರ್ಚು ಮಾಡತೊಡಗಿದ್ದ. ಇಷ್ಟೇ ಅಲ್ಲದೇ ಆತ ಅದೇ ಹಣದಿಂದ ಅದ್ಧೂರಿಯಾಗಿ ವಿವಾಹವಾಗಿದ್ದಾನೆ. ಆದರೆ ಸತ್ಯ ಎಷ್ಟು ದಿನ ಮುಚ್ಚಿರಲು ಸಾಧ್ಯ? ಕೊನೆಗೂ ಆತನ ಬಂಡವಾಳ ಬಯಲಾಗಿದೆ. ಒಂದೆಡೆ ಜೈಲು ಶಿಕ್ಷೆಯಾದರೆ, ಮತ್ತೊಂದೆಡೆ ಹುಡುಗಿಯೂ ಟೋಪಿ ಹಾಕಿ ಪರಾರಿಯಾಗಿದ್ದಾಳೆ. ಇಲ್ಲಿದೆ ಸಂಪೂರ್ಣ ವಿವರ
ಮೆಲ್ಬರ್ನ್‌ನ ವೆಸ್ಟ್‌ಪ್ಯಾಕ್‌ನ ಬ್ಯಾಂಕ್ ಒಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮ್ಯಾನೇಜರ್ ವಿರುದ್ಧ ಒಟ್ಟು 31 ಕೋಟಿ 47 ಲಕ್ಷ ಲಪಟಾಯಿಸಿದ ಆರೋಪ ಕೇಳಿ ಬಂದಿದೆ. ಈತ ಈ ಅಕ್ರಮವನ್ನು 2015 ನಿಂದ ಏಪ್ರಿಲ್ 2019ರವರೆಗೆ ನಡೆಸಿದ್ದಾನೆ.
ಈ ವ್ಯಕ್ತಿಯನ್ನು 39 ವರ್ಷದ ಆಂಡಿ ಲೀ ಎಂದು ಗುರುತಿಸಲಾಗಿದೆ. ಆತ ಮೆಲ್ಬರ್ನ್‌ನ ಬ್ಯಾಂಕ್ ಒಂದರಲ್ಲಿ ಮ್ಯಾನೇಜರ್ ಆಗಿದ್ದ. ಆತನಿಗೆ 67 ಲಕ್ಷ ವೇತನವಾಗಿ ಸಿಗುತ್ತಿತ್ತು. ಆದರೆ ಅಚಾನಕ್ಕಾಗಿ ಆತನ ಜೀವನಕ್ಕೆ ಯುವತಿಯೊಬ್ಬಳು ಎಂಟ್ರಿ ಕೊಟ್ಟಿದ್ದು, ನೊಡ ನೋಡುತ್ತಿದ್ದಂತೆಯೇ ಎಲ್ಲವೂ ಬದಲಾಗಿದೆ.
ದ ಹೆರಾಲ್ಡ್‌ನಲ್ಲಿ ಪ್ರಕಟವಾದ ವರದಿಯನ್ವಯ ಯುವತಿಯನ್ನು ಇಂಪ್ರೆಸ್ ಮಾಡಲು ಆತ ಮ್ಯಾನೇಜರ್ ತನ್ನ ಗ್ರಾಹಕರ ಖಾತೆಯಿಂದ ಹಣ ಲಪಟಾಯಿಸತೊಡಗಿದ್ದ. ಆತ ಅನೇಕ ಗ್ರಾಹಕರನ್ನು ನಕಲಿ ಟರ್ಮ್ ಡೆಪಾಸಿಟ್ ಮಾಡಿಸಿದ್ದ. ಆತ ಈ ಹಣವನ್ನು ತಪ್ಪು ಖಾತೆಗೆ ವರ್ಗಾಯಿಸಿ ಕಳ್ಳತನ ಮಾಡುತ್ತಿದ್ದ.
ಆಗಸ್ಟ್ 2015 ನಿಂದ ಏಪ್ರಿಲ್ 2019ರವರೆಗೆ ಆತ ಅನೇಕ ಗ್ರಾಹಕರ ಖಾತೆಯಿಂದ 2015 ನಿಂದ ಏಪ್ರಿಲ್ 2019 ಕದ್ದಿದ್ದಾನೆ. ಈ ಹಣದಿಂದ ಆತ ತನ್ನ ಪ್ರೇಯಸಿಗೆ ದುಬಾರಿ ಗಿಫ್ಟ್ ಕೊಡಿಸುತ್ತಿದ್ದ. ಜೊತೆಗೆ ಈ ಹಣವನ್ನು ಜೂಜಾಟ ಹಾಗೂ ಪ್ರವಾಸಗಳಿಗೆ ಖರ್ಚು ಮಾಡುತ್ತಿದ್ದ.
ಆತ ಈ ಹಣದಿಂದ ಅದ್ಧೂರಿಯಾಗಿ ಮದುವೆಯೂ ಆದ. ಬಂದಿದ್ದ ಅತಿಥಿಗಳಿಗೆ ಪಾರ್ಟಿಯನ್ನೂ ಆಯೋಜಿಸಿದ್ದ. ಲೀ ತನಗಾಗಿ ಐಷಾರಾಮಿ ಕಾರು ಹಾಗೂ ಸಹೋದರಿಗಾಗಿ ಮನೆಯನ್ನೂ ಖರೀದಿಸಿದ್ದಾನೆ. ಆದರೆ 2019 ರ ಡಿಸೆಂಬರ್‌ನಲ್ಲಿ ಆತ ಸಿಕ್ಕಿಕೊಂಡಿದ್ದಾನೆ.
ಇನ್ನು ಪ್ರಕರಣ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆಯೇ ಲೀಯಿಂದ ಭಾರೀ ಶಾಪಿಂಗ್ ಮಾಡಿಸಿಕೊಂಡಿದ್ದ ಬಳಿಕ ಮದುವೆಯಾಗಿದ್ದ ಯುವತಿಯೂ ವಿಚ್ಛೇದನ ನೀಡಿದ್ದಾಳೆ. ಲೀ ಮಾಡಿದ ಈ ಅಕ್ರಮದ ಬಗ್ಗೆ ಮಾಹಿತಿಯೇ ಇರಲಿಲ್ಲ ಎಂಬುವುದು ಆಕೆಯ ಮಾತಾಗಿದೆ. ಸದ್ಯ ಲೀ ಸಂಬಂಧ ವಿಚಾರಣೆ ನಡೆಯುತ್ತಿದೆ.
ಇನ್ನು ನೌಕರಿ ಕಳೆದುಕೊಂಡ ಲೀ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದ. ಜೊತೆಗೆ ಜೀವನ ನಿರ್ವಹಣೆಗೆ ಆತ ಚಾಲಕನ ವೃತ್ತಿ ಮಾಡಿಕೊಂಡಿದ್ದ. ಇನ್ನು ಕೋರ್ಟ್ ಶೀಘ್ರದಲ್ಲೇ ಈ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಲಿದೆ.