ಪೋಪ್ ಭೇಟಿ ಮಾಡಿ ಭಾರತಕ್ಕೆ ಆಹ್ವಾನ ಕೊಟ್ಟ ಮೋದಿ
ಇಟಲಿ(ಅ. 30) ಪ್ರಧಾನಿ ನರೇಂದ್ರ ಮೋದಿ(Narendra Modi) ಇಟಲಿ ಪ್ರವಾಸಲ್ಲಿ ಇದ್ದಾರೆ. ವ್ಯಾಟಿಕನ್ ಸಿಟಿಯಲ್ಲಿ(Vatican City) ಪೋಪ್ ಫ್ರಾನ್ಸಿಸ್ ರನ್ನು(Pope Francis) ಭೇಟಿ ಮಾಡಿದ್ದಾರೆ. ಪ್ರಧಾನಿ ಮೋದಿ ಅವರೊಂದಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್ (Ajit Doval)ಮತ್ತು ವಿದೇಶಾಂಗ ವ್ಯವಹಾರ ಸಚಿವ ಡಾ. ಎಸ್. ಜೈಶಂಕರ್(S. Jaishankar) ಇದ್ದಾರೆ.
ಪೋಪ್ ಅವರನ್ನು ಭೇಟಿ ಮಾಡಿದ ನರೇಂದ್ರ ಮೋದಿ ಭಾರತಕ್ಕೆ ಬರಲು ಆಹ್ವಾನ ನೀಡಿದರು. ಒಂಧು ಗಂಟೆಗೂ ಅಧಿಕ ಕಾಲ ಮಾತನಾಡಿದರು. ಹವಾಮಾನ ವೈಪರೀತ್ಯಗಳ ಬಗ್ಗೆಯೂ ಚರ್ಚೆ ನಡೆಯಿತು. ಬಡತನ ನಿರ್ಮೂಲನೆ ಮತ್ತು ಪ್ರಪಂಚ ಎದುರಿಸುತ್ತಿರುವ ಸವಾಲುಗಳ ಬಗ್ಗೆಯೂ ಇಬ್ಬರ ನಡುವೆ ಮಾತಿಕತೆ ನಡೆಯಿತು.
ಅಟಲ್ ಬಿಹಾರಿ ವಾಜಪೇಯಿ ಪ್ರಧಾನ ಮಂತ್ರಿಯಾಗಿದ್ದ ಸಂದರ್ಭ ಅಂದಿನ ಪೋಪ್ ಜಾನ್ ಪಾಲ್ II ಅವರನ್ನು ಭೇಟಿ ಮಾಡಿದ್ದರು. ಟ್ವೀಟ್ ಮಾಡಿರುವ ಪ್ರಧಾನಿ ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಜನವರಿಯಲ್ಲಿ ಬಾಂಬೆ ಆರ್ಚ್‌ಬಿಷಪ್ ಕಾರ್ಡಿನಲ್ಸ್ ಓಸ್ವಾಲ್ಡ್ ಗ್ರೇಸಿಯಾಸ್, ಸೈರೋ-ಮಲಬಾರ್ ಚರ್ಚ್‌ನ ಮೇಜರ್ ಆರ್ಚ್‌ಬಿಷಪ್ ಜಾರ್ಜ್ ಅಲೆಂಚೇರಿ ಮತ್ತು ಸಿರೋ-ಮಲಂಕಾರ ಚರ್ಚ್‌ನ ಮೇಜರ್ ಆರ್ಚ್‌ಬಿಷಪ್ ಬಸೆಲಿಯೋಸ್ ಕ್ಲೀಮಿಸ್ ಅವರು ಮೋದಿ ಅವರನ್ನು ಭೇಟಿ ಮಾಡಿದ್ದರು. ಭಾರತದಲ್ಲಿ ಕ್ರಿಶ್ಚಿಯನ್ ಸಮುದಾಯದ ಸ್ಥಿತಿಗಲಿತಿಗಳ ಬಗ್ಗೆಯೂ ಚರ್ಚೆಯಾಯಿತು. ಭಯೋತ್ಪಾದನೆ ವಿರುದ್ಧದ ಸಮರ, ಎದುರಿಸುತ್ತಿರುವ ಸಮಸ್ಯೆ ಬಗ್ಗೆಯೂ ಇಬ್ಬರ ನಡುವೆ ಮಾತುಕತೆಯಾಯಿತು.
ಸಂತ ಪೋಪ್ ಪಾಲ್ VI ಅವರು ಡಿಸೆಂಬರ್ 1964 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಸಂತ ಪೋಪ್ ಜಾನ್ ಪಾಲ್ II ಭಾರತಕ್ಕೆ ಎರಡು ಬಾರಿ ಬಂದಿದ್ದರು. ಫೆಬ್ರವರಿ 1986 ಮತ್ತು ನವೆಂಬರ್ 1999 ರಲ್ಲಿ ಭೇಟಿ ನೀಡಿದ್ದರು.