ಕೊರೋನಾ ಮಧ್ಯೆ ಗುಡ್ ನ್ಯೂಸ್: ಇನ್ಮುಂದೆ ಒಂದೇ ವಾರದಲ್ಲಿ ಗುಣವಾಗುತ್ತೆ ಮಾರಕ ಕ್ಯಾನ್ಸರ್!
ವಿಶ್ವಾದ್ಯಂತ ವ್ಯಾಪಿಸಿರುವ ಕೊರೋನಾ ನಡುವೆ ಜನರ ಚಿತ್ತ ಬೇರೆ ಯಾವ ವಿಚಾರದ ಮೇಲೂ ಹರಿಯುತ್ತಿಲ್ಲ. ಈ ವೈರಸ್ ವಿಶ್ವದ ಸರಿ ಸುಮಾರು ಎಲ್ಲಾ ದೇಶಗಳಲ್ಲಿ ಆತಂಕ ಸೃಷ್ಟಿಸಿದೆ. ಒಂದೆಡೆ ಈ ಮಹಾಮಾರಿ ಓಡಿಸಲು ಔಷಧಿ ಹುಡುಕುವ ಯತ್ನದಲ್ಲಿದ್ದರೆ, ಇತ್ತ ಯುಕೆ ವೈದ್ಯರು ಕ್ಯಾನ್ಸರ್ ಚಿಕಿತ್ಸೆ ಸಂಬಂಧ ಗುಡ್ ನ್ಯೂಸ್ ನೀಡಿದ್ದಾರೆ. ಸದ್ಯ ಸ್ತನ, ಶ್ವಾಸಕೋಶ, ಹೊಟ್ಟೆಯಂತಹ ಕ್ಯಾನ್ಸರ್‌ಗೆ ಕೇವಲ ಒಂದೇ ವಾರದಲ್ಲಿ ಚಿಕಿತ್ಸೆ ನೀಡಿ ಗುಣಪಡಿಸಬಹುದಾಗಿದೆ. ಜೊತೆಗೆ ರೇಡಿಯೋಥೆರಪಿ ಸಮಯವೂ ಕಡಿಮೆ ಮಾಡಬಹುದಾಗಿದೆ. ಈ ಸುದ್ದಿ ವಿಶ್ವಾದ್ಯಂತ ಜನರನ್ನು ನಿಟ್ಟುಸಿರು ಬಿಡುವಂತೆ ಮಾಡಿದೆ. ಈ ಹಿಂದೆ ಕ್ಯಾನ್ಸರ್ ಚಿಕಿತ್ಸೆ ದೀರ್ಘ ಕಾಲ ನಡೆಯುತ್ತಿತ್ತು.
ಹೌದು ಕ್ಯಾನ್ಸರ್ ರೋಗಿಗಳು ನಿಟ್ಟುಸಿರು ಬಿಡುವಂತಾಗಿದೆ. ಇನ್ಮುಂದೆ ರೋಗಿಗಳು ತಿಂಗಳಾನುಗಟ್ಟಲೇ ಆಸ್ಪತ್ರೆಗಳಿಗೆ ಅಲೆಯಬೇಕಂತಿಲ್ಲ. ಹೊಸ ವಾದದ ಅನುಸಾರ ಕ್ಯಾನ್ಸರ್‌ಗೆ ಔಷಧಿ ಕಂಡು ಹಿಡಿಯಲಾಗಿದ್ದು, ಕೇವಲ ಐದು ದಿನದೊಳಗೆ ಕ್ಯಾನ್ಸರ್ ಗುಣಪಡಿಸಬಹುದೆ.
ಸದ್ಯ ಕ್ಯಾನ್ಸರ್ ರೋಗಿಗಳು ಕನಿಷ್ಟವೆಂದರೂ ಆರು ವಾರದವರೆಗೆ ನಿರಂತರ ಆಸ್ಪತ್ರೆಗೆ ಅಲೆಯಬೇಕಿತ್ತು. ಇದರಿಂದ ಅವರ ಜೀವನ ಹಾಗೂ ಅವರ ಕೆಲಸ ಕ್ಯಾನ್ಸರ್‌ನಿಂದ ಭಾರೀ ಪ್ರಭಾವಕ್ಕೊಳಗಾಗುತ್ತಿತ್ತು.
ರೇಡಿಯೋಥೆರಪಿಯಿಂದಾಗಿ ಕ್ಯಾನ್ಸರ್ ರೋಗಿಗಳ ಜೀವನ ಸಂಪೂರ್ಣವಾಗಿ ಬದಲಾಗುತ್ತಿತ್ತು. ಅವರು ಸಾಮಾನ್ಯ ಜೀವನ ಬಾಳಲು ಸಾಧ್ಯವಿರಲಿಲ್ಲ. ಆದರೆ ಇನ್ನು ಹೀಗಾಗುವುದಿಲ್ಲ.
ಎಡ್ವಾನ್ಸ್ ಟೆಕ್ನಾಲಜೀಸ್ ಹಾಗೂ ಉನ್ನತ ತಂತ್ರಜ್ಞಾನದ ಮೂಲಕ ಇನ್ನು ಕ್ಯಾನ್ಸರ್ ಕೇವಲ ಐದು ದಿನದಲ್ಲಿ ಹೊಡೆದೋಡಿಸಬಹುದು. ಕಳೆದ ಇಪ್ಪತ್ತು ವರ್ಷಗಳಿಂದ ಯುಕೆ ವಿಜ್ಞಾನಿಗಳು ಈ ಚಿಕಿತ್ಸೆ ಸಂಬಂಧ ಸಂಶೋಧನೆ ನಡೆಸುತ್ತಿದ್ದಾರೆ. ಪ್ರಯೋಗದ ವೇಳೆ ಇದು ಯಶಸ್ಸು ಕಂಡಿದೆ.
ಈ ಚಿಕಿತ್ಸೆಯಿಂದ ಸ್ತನ, ಶ್ವಾಸಕೋಶ, ಕರುಳು, ಹೊಟ್ಟೆಯಂತಹ ಕ್ಯಾನ್ಸರ್ ಗುಣಮುಖವಾಗುತ್ತದೆ. ಈ ಔಷಧಿ ನೇರ ಕ್ಯಾನ್ಸರ್ ಕೋಶಗಳನ್ನು ಕೇಂದ್ರೀಕರಿಸುತ್ತವೆ.
ಕಳೆದ ವರ್ಷ ಡಿಸೆಂಬರ್‌ನಲ್ಲೇ ಸ್ತನ ಕ್ಯಾನ್ಸರ್‌ಗೆ ಕೇವಲ ಒಂದೇ ವಾರದಲ್ಲಿ ಗುಣಪಡಿಸಬಹುದೆಂಬ ಸುದ್ದಿ ಬಂದಿತ್ತು. ಆದದರೀಗ ಇದನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಇನ್ನು ಕೆಲ ಕ್ಯಾನ್ಸರ್‌ಗಳನ್ನೂ ನಿಯಂತ್ರಿಸಬಹುದಾಗಿದೆ.
ಇನ್ನು ಯುಕೆಯಲ್ಲಿ ಪ್ರತಿ ವರ್ಷ ಬ್ರೆಸ್ಟ್ ಕ್ಯಾನ್ಸರ್ 55 ಸಾವಿರದ ಇನ್ನೂರು ಪ್ರಕರಣಗಳು ವರದಿಯಾಗುತ್ತಿವೆ. ಇವರಲ್ಲಿ ಶೇ. 63 ರೋಗಿಗಳಿಗೆ ರೇಡಿಯೋ ಥೆರಪಿ ನಿಡಲಾಗುತ್ತಿದೆ. ಇನ್ನು ಈವರೆಗೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಹಿಳೆಯರ ಟ್ಯೂಮರ್ ಕಡಿಮೆ ಮಾಡಲು ಹದಿನೈದು ರೇಡಿಯೇಷನ್ ನೀಡಲಾಗುತ್ತಿತ್ತು. ಆದರೆ ಇನ್ಮುಂದೆ ಹೀಗಾಗುವುದಿಲ್ಲ.
ಇನ್ಮುಂದೆ ನೀಡಲಾಗುವ ರೇಡಿಯೇಷನ್ ಪರಿಣಾಮಕಾರಿಯಾಗಿರುತ್ತದೆ. ಇದು ಕೇವಲ ಐದು ದಿನದಲ್ಲೇ ಕ್ಯಾನ್ಸರ್ ಹೊಡೆದೋಡಿಸುತ್ತದೆ.
ಕೊರೋನಾ ಅಟ್ಟಹಾಸದ ನಡುವೆ ಬಂದ ಈ ಸುದ್ದಿ ಜನರಿಗೆ ಭರವಸೆಯನ್ನು ಕೊಟ್ಟಿದೆ. ಕ್ಯಾನ್ಸರ್‌ನಂತಹ ರೋಗವೇ ಶಮನವಾಗುವ ಔಷಧಿ ಕಂಡು ಹಿಡಿದಿದ್ದಾರೆಂದರೆ ಕೊರೋನಾಗೆ ಔಷಧಿ ಸಿಗುವ ನಿರೀಕ್ಷೆಯೂ ಬಲವಾಗಿದೆ.