- Home
- News
- World News
- ರಾಷ್ಟ್ರೀಯ ಸ್ಕಾಚ್ ಡೇ, ಮಳೆಯಿಂದ ಬೇಸಿಗೆವರೆಗೆ 500 ವರ್ಷ ಇತಿಹಾಸದ ಮದ್ಯ ಜೊತೆಗಾರನಾಗಿದ್ದು ಹೇಗೆ?
ರಾಷ್ಟ್ರೀಯ ಸ್ಕಾಚ್ ಡೇ, ಮಳೆಯಿಂದ ಬೇಸಿಗೆವರೆಗೆ 500 ವರ್ಷ ಇತಿಹಾಸದ ಮದ್ಯ ಜೊತೆಗಾರನಾಗಿದ್ದು ಹೇಗೆ?
ಜುಲೈ 27 ರಾಷ್ಟ್ರೀಯ ಸ್ಕಾಚ್ ಡೇ. ಕಾಲ ಯಾವುದೇ ಇರಲಿ, ಕೈಯಲ್ಲೊಂದು ಗ್ಲಾಸ್, ಒಂದೊಂದು ಗುಟುಕು ಹೀರುತ್ತಾ ಸ್ಕಾಚ್ ಸವಿ ಅನುಭವಿಸುವ ಮಂದಿ ಕಡಿಮೆಯೇನಿಲ್ಲ. ಅಷ್ಟಕ್ಕೂ ವಿಸ್ಕಿ ಸ್ಕಾಚ್ ಆಗಲ್ಲ ಯಾಕೆ? ಸ್ಕಾಚ್ ಇತಿಹಾಸವೇನು?

ದೇಶದ ಹಲೆವೆಡೆ ಭಾರಿ ಮಳೆಯಾಗುತ್ತಿದೆ. ಇದರ ನಡುವೆ ಸ್ಕಾಚ್ ಡೇ ಆಗಮಿಸಿದೆ. ಮದ್ಯ ಪ್ರಿಯರಿಗೆ ಇನ್ನೇನು ಬೇಕು. ಸಿನಿಮಾ ಡೈಲಾಗ್ ರೀತಿಯಲ್ಲೇ ಆಲ್ಕೋಹಾಲಿಕ್ ವೆದರ್ ಮದ್ಯಪ್ರಿಯರ ತನು ಮನ ತಣಿಸಲಿದೆ. ಜುಲೈ 27ರಂದು ಪ್ರತಿ ವರ್ಷ ನ್ಯಾಷನಲ್ ಸ್ಕಾಚ್ ಡೇ ಎಂದು ಆಚರಿಸಲಾಗುತ್ತದೆ. ಸ್ಕಾಚ್ ಮದ್ಯಕ್ಕೆ ಬರೋಬ್ಬರಿ 500 ವರ್ಷಗಳ ಇತಿಹಾಸವಿದೆ. ವಿಶೇಷ ಅಂದರೆ ಮದ್ಯ ಟೇಸ್ಟ್, ಕಿಕ್, ಡಿಸ್ಟಿಲ್ ಪ್ರಕ್ರಿಯೆಗಳನ್ನು ನೋಡಿದರೆ ವಿಸ್ಕಿ ಹಾಗೂ ಸ್ಕಾಚ್‌ನಲ್ಲಿ ಹಚ್ಚಿನ ವ್ಯತ್ಯಾಸವಿಲ್ಲ. ಆದರೂ ಎಲ್ಲಾ ವಿಸ್ಕಿ ಸ್ಕಾಚ್ ಆಗಲ್ಲ. ಇದರ ಹಿಂದೆ ಕಾರಣವೂ ಇದೆ.
ಸ್ಕಾಟ್ ಆರಂಭಗೊಂಡಿದ್ದು ಯಾವಾಗ?
ಸ್ಕಾಚ್ ಮದ್ಯ ಶುರುವಾಗಿದ್ದ ಸ್ಕಾಟ್‌ಲೆಂಡ್‌ನಲ್ಲಿ. ಸ್ಕಾಟ್‌ಲೆಂಡ್ ಹೆಸರಿನ ಆರಂಭಿಕ ನಾಲ್ಕು ಅಕ್ಷರಗಳನ್ನೇ ಈ ಮದ್ಯಕ್ಕಿಟ್ಟಿದ್ದಾರೆ. 15ನೇ ಶತಮಾನ ಅಂದರೆ 1494ರಲ್ಲಿ ಮೊದಲ ಸ್ಕಾಚ್ ತಯಾರಾಗಿ ಮಾರುಕಟ್ಟೆ ಪ್ರವೇಶಿಸಿತ್ತು. ಸ್ಕಾಟ್‌ಲೆಂಡ್‌ನಲ್ಲಿ ತಯಾರಾದ ಈ ಸ್ಕಾಚ್ ವಿಸ್ಕಿ ಭಾರತ ಸೇರಿದಂತೆ ಬಹುತೇಕ ದೇಶಗಳಲ್ಲಿನ ಮದ್ಯಪ್ರಿಯರ ಜೊತೆಗಾರನಾಗಿದ್ದಾನೆ.
ವಿಸ್ಕಿ ಸ್ಕಾಚ್ ಆಗಲ್ಲ ಯಾಕೆ?
ಸ್ಕಾಚ್ ಅತ್ಯಂತ ಬ್ಲೆಡ್ಲೆಂಡ್ ವಿಸ್ಕಿ. ಆದರೆ ಇತರ ಯಾವುದೇ ದೇಶದಲ್ಲಿ ಇದೇ ಪ್ರಕ್ರಿಯೆಯಲ್ಲಿ ಸ್ಕಾಚ್ ತಯಾರಿಸಿದರೂ ಅದು ವಿಸ್ಕಿಯಾಗುತ್ತದೇ ಹೊರತು ಸ್ಕಾಚ್ ಆಗಲು ಸಾಧ್ಯವಿಲ್ಲ. ಇದಕ್ಕೆ ಕೆಲ ಕಾರಣಗಳಿವೆ. 1933ರ ಸ್ಕಾಚ್ ಕಾನೂನು, 1988ರ ಸ್ಕಾಚ್ ವಿಸ್ಕಿ ಕಾಯ್ದೆ ಕೂಡ ಈ ಕುರಿತು ಸ್ಪಷ್ಟವಾಗಿ ಹೇಳುತ್ತದೆ. ಸ್ಕಾಚ್ ತಯಾರಿಕೆ ಕೆಲ ವಿಶೇಷ ಪ್ರಕ್ರಿಯೆ ಒಳಗೊಂಡಿದೆ. ಇದಕ್ಕೆ ಕೇವಲ ಮಾಲ್ಟೆಡ್ ಬಾರ್ಲಿ ಬಳಕೆ ಮಾಡುತ್ತಾರೆ. ಜೊತೆಗೆ ಹಂತ ಹಂತ ಪ್ರಕ್ರಿಯೆಗಳನ್ನು ಅಷ್ಟೇ ಸೂಕ್ಷ್ಮವಾಗಿ ಪಾಲಿಸಬೇಕು. ಬ್ಲೆಂಡೆಡ್, ಸ್ಮೂತ್ ಸ್ಕಾಚ್ ಪ್ರಕ್ರಿಯೆ ದುಬಾರಿ. ಹೀಗಾಗಿ ಇದರ ಬೆಲೆ ಕೂಡ ದುಬಾರಿ. ಇದೇ ಪ್ರಕ್ರಿಯೆಗಳನ್ನು ಇತರ ಯಾವುದೇ ದೇಶದ ಮದ್ಯ ಕಂಪನಿಗಳು ಪಾಲಿಸಿ ಸ್ಕಾಚ್ ತಯಾರಿಸಿದರೂ ಅದು ಅಧಿಕೃತ ಸ್ಕಾಚ್ ಆಗಲು ಸಾಧ್ಯವಿಲ್ಲ. ಕಾರಣ ಅಧಿಕೃತ ಸ್ಕಾಚ್ ಸ್ಕಾಟ್‌ಲೆಂಟ್‌ನಲ್ಲೇ ಬಾಟಲಿಗೆ ತುಂಬಿ ಸೀಲ್ ಮಾಡಬೇಕು.
ಸ್ಕಾಚ್‌ನಲ್ಲಿದೆ ಹಲವು ವಿಧ
ಸ್ಕಾಚ್ ಮದ್ಯದಲ್ಲಿ ಹಲವು ವಿಧಗಳಿವೆ. ಸಿಂಗಲ್ ಮಾಲ್ಟ್ ಸ್ಕಾಚ್, ಸಿಂಗಲ್ ಗ್ರೈನ್ ಸ್ಕಾಚ್, ಬ್ಲೆಂಡೆಡ್ ಮಾಲ್ಟ್ ಸ್ಕಾಚ್, ಬ್ಲೆಂಡೆಡ್ ಗ್ರೈನ್ ಸ್ಕಾಚ್, ಬ್ಲೆಂಡೆಡ್ ಸ್ಕಾಚ್ ಸೇರಿದಂತೆ ಕೆಲ ವಿಧಗಳಿವೆ. ಮದ್ಯ ಪ್ರಿಯರು ತಮಗಿಷ್ಟವಾದ ಸ್ಕಾಚ್ ಖರೀದಿಸಿ ಅನುಭವಿಸುತ್ತಾರೆ. ಸ್ಕಾಚ್ ಬೆಲೆಯೂ ದುಬಾರಿಯಾಗಿದೆ.ಭಾರತದಲ್ಲಿ ಅಧಿಕೃತ ಸ್ಕಾಚ್‌ಗಳು ಲಭ್ಯವಿದೆ.
1494ರಲ್ಲಿ ಸ್ಕಾಚ್ ಮಾರುಕಟ್ಟೆಗೆ ಲಗ್ಗೆ ಇಟ್ಟಿತು. ಸ್ಕಾಟ್‌ಲೆಂಡ್‌ನಲ್ಲಿ ಈ ಮದ್ಯ ಅತ್ಯಂತ ಜನಪ್ರಿಯವಾಗಿತ್ತು. ಜೊತಗೆ ವಿದೇಶಗಳಿಗೆ ರಫ್ತು ಆರಂಭಗೊಂಡಿತ್ತು. ಆದರೆ ಕೆಲವೇ ವರ್ಷಗಳಲ್ಲಿ ಅಕ್ರಮವಾಗಿ, ಕಳ್ಳಸಾಗಾಣಿಕೆ ಮೂಲಕ ಸ್ಕಾಚ್ ವಿದೇಶಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಪ್ರಕರಣಗಳು ಹೆಚ್ಚಾಗಿತ್ತು. ಹೀಗಾಗಿ ಸ್ಕಾಟ್‌ಲೆಂಡ್ ಸಂಸತ್ತು ಸರ್ಕಾರಕ್ಕೂ, ಉದ್ಯಮಿಗಳು ಲಾಭದಾಯಕವಾಗಿ ಮಾಡಲು 1644ರಲ್ಲಿ ತೆರಿಗೆ ಸೇರಿದಂತೆ ಇತರ ಕ್ರಮಗಳನ್ನು ಜಾರಿಗೊಳಿಸಿತ್ತು.