ಈ 11 ಹೆಸರುಗಳಿಗೆ ಇದೆ ನಿಷೇಧ: ನೀವು ಅಮೆರಿಕಾದಲ್ಲಿ ಮಕ್ಕಳಿಗೆ ಈ ಹೆಸರು ಇಡುವಂತೇ ಇಲ್ಲ
ಹೆಸರಲ್ಲೇನಿದೆ ಎಂಬುದು ಅನೇಕರ ಮಾತು ಆದರೆ ಸಂಖ್ಯಾಶಾಸ್ತ್ರ ಹಿಂದೆ ಹೋದರೆ ಹೆಸರಲ್ಲೇ ಎಲ್ಲಾ ಇದೆ ಎಂಬುದನ್ನು ಹೇಳುತ್ತದೆ. ಅಮೆರಿಕದಲ್ಲಿ ಕೆಲವು ಹೆಸರುಗಳನ್ನು ಮಕ್ಕಳಿಗೆ ಇಡುವುದನ್ನು ನಿಷೇಧಿಸಲಾಗಿದೆ. ಈ ಹೆಸರುಗಳು ಯಾವುದು ಅಂ ನೋಡೋಣ
- FB
- TW
- Linkdin
Follow Us
)
ಅಮೆರಿಕಾದಲ್ಲಿ ನೀವು ಮಕ್ಕಳಿಗೆ ಈ ಹೆಸರು ಇಡುವಂತಿಲ್ಲ.
ಹೆಸರಲ್ಲೇನಿದೆ ಎಂಬುದು ಅನೇಕರ ಮಾತು ಆದರೆ ಸಂಖ್ಯಾಶಾಸ್ತ್ರ ಹಿಂದೆ ಹೋದರೆ ಹೆಸರಲ್ಲೇ ಎಲ್ಲಾ ಇದೆ ಎಂಬುದನ್ನು ಹೇಳುತ್ತದೆ. ಅದೇನೆ ಇರಲಿ ಒಂದೊಂದು ದೇಶದಲ್ಲಿ ಒಂದೊಂದು ಸಂಸ್ಕೃತಿ ಇದೆ. ಕೆಲವು ದೇಶಗಳಲ್ಲಿ ಕೆಲವನ್ನು ನಿಷೇಧಿಸಿದರೆ ಮತ್ತೆ ಕೆಲವು ದೇಶಗಳಲ್ಲಿ ರಾಜ ಮರ್ಯಾದೆ ಹೀಗಿರುವಾಗ ಅಮೆರಿಕಾದಲ್ಲಿ ಕೆಲವು ಹೆಸರುಗಳಿಗೆ ನಿಷೇಧವಿದೆ. ಅಲ್ಲಿ ನಿಮ್ಮ ಮಕ್ಕಳು ಜನಿಸಿದ್ದರೆ ನೀವು ಈ ಹೆಸರುಗಳನ್ನು ಇಡುವಂತಿಲ್ಲ. ಹಾಗಿದ್ರೆ ಆ ಹೆಸರುಗಳು ಯಾವುದು ಮತ್ತು ಏಕೆ ಅನ್ನೋದನ್ನು ನೊಡೋಣ ಬನ್ನಿ.
King
ರಾಜ ಅಥವಾ ಕಿಂಗ್(King):ಕಿಂಗ್ ಎಂದರೆ ರಾಜ ಎಂದರ್ಥ ಇವುಗಳು ಬಿರುದುಗಳಾಗಿದ್ದು, ಅಧಿಕಾರವನ್ನು ಸೂಚಿಸುತ್ತದೆ ಮತ್ತು ಆದ್ದರಿಂದ ನ್ಯೂಜೆರ್ಸಿ ಮತ್ತು ಟೆಕ್ಸಾಸ್‌ನಂತಹ ರಾಜ್ಯಗಳಲ್ಲಿ ಈ ಹೆಸರನ್ನು ತಿರಸ್ಕರಿಸಲಾಗಿದೆ.
Queen
ರಾಣಿ(Queen): ಕಿಂಗ್‌ನಂತೆಯೇ, ಕ್ವೀನ್ ಅಥವಾ ರಾಣಿ ಎಂಬ ಹೆಸರು ಕೂಡ ಯಾರನ್ನಾದರೂ ಗೌರವಯುತವಾಗಿ ಕರೆಯುವುದನ್ನು ಸೂಚಿಸುತ್ತದೆ. ಹೀಗಾಗಿ ಯಾವುದೇ ಗೊಂದಲವನ್ನು ತಪ್ಪಿಸಲು, ಅಂತಹ ಹೆಸರುಗಳನ್ನು ನಿಷೇಧಿಸಲಾಗಿದೆ.
Jesus Christ
ಯೇಸುಕ್ರಿಸ್ತ ಅಥವಾ ಜೀಸಸ್ ಕ್ರೈಸ್ಟ್(Jesus Christ): ಇದು ಕ್ರಿಶ್ಚಿಯನ್ನರ ಪವಿತ್ರ ದೇವರ ಹೆಸರು. ವಿಶ್ವಾದ್ಯಂತ ಸಮುದಾಯವು ಈ ಹೆಸರು ಮತ್ತು ಗುರುತನ್ನು ಪೂಜಿಸುತ್ತದೆ ಮತ್ತು ಆದ್ದರಿಂದ ಧಾರ್ಮಿಕ ಅಪರಾಧವನ್ನು ತಪ್ಪಿಸಲು ನಿಮ್ಮ ಮಗುವಿಗೆ ಯೇಸುಕ್ರಿಸ್ತ ಎಂದು ಹೆಸರಿಸುವುದನ್ನು ನಿಷೇಧಿಸಲಾಗಿದೆ.
III
III
ನಿಮ್ಮ ಮಗುವಿಗೆ III ಎಂದು ಹೆಸರಿಡುವುದರಿಂದ ಅವರ ಜೀವನದುದ್ದಕ್ಕೂ ತೊಂದರೆಯಾಗುತ್ತದೆ. ಆ ಸಂಖ್ಯೆ ರೋಮನ್ ಸಂಖ್ಯಾವಾಚಕವಾಗಿದ್ದು, ಕೇವಲ ಸಂಖ್ಯಾಶಾಸ್ತ್ರೀಯವಾಗಿ ಅವುಗಳನ್ನು ಹೆಸರುಗಳಾಗಿ ಅನುಮತಿಸಲಾಗುವುದಿಲ್ಲ ಏಕೆಂದರೆ ಅವು ಕಾನೂನುಬದ್ಧ ಹೆಸರನ್ನು ರೂಪಿಸುವುದಿಲ್ಲ.
Santa Claus
ಸಾಂತಾಕ್ಲಾಸ್(Santa Claus):ಕ್ರಿಶ್ಚಿಯನ್ನರ ನಂಬಿಕೆಯಂತೆ ಸಾಂತಾಕ್ಲಾಸ್ ಒಬ್ಬ ಪೌರಾಣಿಕ ವ್ಯಕ್ತಿ ಹೀಗಾಗಿ ಈ ಹೆಸರು ಕಾನೂನು ದಾಖಲೆಗಳಲ್ಲಿ ಗೊಂದಲವನ್ನು ಉಂಟುಮಾಡಬಹುದು ಮತ್ತು ನಿಮ್ಮ ಮಗುವಿನ ಜೀವನವನ್ನು ಅಪಹಾಸ್ಯಕ್ಕೆ ಒಳಪಡಿಸಬಹುದು ಎಂಬ ಕಾರಣಕ್ಕೆ ಫ್ಲೋರಿಡಾ, ಕ್ಯಾಲಿಫೋರ್ನಿಯಾ, ನ್ಯೂಜೆರ್ಸಿ ಮತ್ತು ಇತರ ರಾಜ್ಯಗಳಲ್ಲಿ ಈ ಹೆಸರನ್ನು ನಿಷೇಧಿಸಲಾಗಿದೆ.
Majesty
ಮೆಜೆಸ್ಟಿ(Majesty):ಮೆಜೆಸ್ಟಿ ಎಂದು ರಾಜ ರಾಣಿಯರ ಮುಂದೆ ಅಥವಾ ಅಧಿಕಾರದಲ್ಲಿರುವವರನ್ನು ಕರೆಯಲು ಉದ್ದೇಶಿಸಲಾಗುತ್ತದೆ. ಹೀಗಾಗಿ ಅನೇಕ ಅಮೆರಿಕನ್ ರಾಜ್ಯಗಳಲ್ಲಿ ಇದಕ್ಕೆ ಅನುಮತಿ ಇಲ್ಲ.
Adolf Hitler
ಅಡಾಲ್ಫ್ ಹಿಟ್ಲರ್(Adolf Hitler) ಈ ಹೆಸರಿನ ಬಗ್ಗೆ ಹೆಚ್ಚೇನು ಹೇಳಬೇಕಾಗಿಲ್ಲ, ಜರ್ಮನಿಯಲ್ಲಿ ನಾಝಿಗಳ ಹತ್ಯಾಕಾಂಡಕ್ಕೆ ಅಡಾಲ್ಫ್ ಹಿಟ್ಲರ್ ಕಾರಣನಾಗಿರುವುದರಿಂದ ದ್ವೇಷ ಮತ್ತು ದೌರ್ಜನ್ಯಗಳನ್ನು ತಡೆಗಟ್ಟಲು ಅಮೆರಿಕದಲ್ಲಿ ಆತನ ಹೆಸರನ್ನು ಮಕ್ಕಳಿಗೆ ಇಡುವುದನ್ನು ನಿಷೇಧಿಸಲಾಗಿದೆ.
@ ಅಂದರೆ ಅಡ್ದ್ರೇಟ್
@ ಅಂದರೆ ಅಡ್ದ್ರೇಟ್ ಎನ್ನುವ ಹೆಸರನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಇಡುವಂತಿಲ್ಲ, ಆಡಳಿತಾತ್ಮಕ ತೊಂದರೆಗಳು ಮತ್ತು ಸಂಭಾವ್ಯ ಗೊಂದಲಗಳನ್ನು ಉಂಟುಮಾಡುವುದರಿಂದ, ಚಿಹ್ನೆಗಳನ್ನು ಹೊಂದಿರುವ ಹೆಸರುಗಳನ್ನು ಅಮೆರಿಕಾ ನಿಷೇಧಿಸಿದೆ.
Nutella
ನುಟೆಲ್ಲಾ(Nutella) ಈ ಹೆಸರಿನ ಮಗುವನ್ನು ಅಪಹಾಸ್ಯ ಮಾಡುವ ಸಾಧ್ಯತೆ ಇರುವುದರಿಂದ ಫ್ರಾನ್ಸ್‌ನಲ್ಲಿ ನ್ಯಾಯಾಲಯವು ನುಟೆಲ್ಲಾ ಎಂಬ ಹೆಸರನ್ನು ನಿಷೇಧಿಸಿತು. ಹಾಗೆಯೇ ಅಮೆರಿಕದಲ್ಲಿಯೂ ಸಹ ನಿಮ್ಮ ಮಗುವಿಗೆ ನೀವು ನುಟೆಲ್ಲಾ ಎಂದು ಹೆಸರಿಡುವಂತಿಲ್ಲ.
Messiah
ಮೆಸ್ಸಿಹ್(Messiah): ಮೆಸ್ಸಿಹ್ ಎಂಬ ಹೆಸರು ಕಾನೂನು ಆಧಾರದ ಮೇಲೆ ಕಾನೂನು ಸವಾಲುಗಳನ್ನು ಎದುರಿಸಿದೆ. 2013 ರಲ್ಲಿ, ಟೆನ್ನೆಸ್ಸೀ ಪ್ರದೇಶಧ ನ್ಯಾಯಾಧೀಶರು ಧಾರ್ಮಿಕ ಕಾರಣಗಳಿಂದಾಗಿ ಮಗುವಿನ ಹೆಸರನ್ನು 'ಮೆಸ್ಸಿಹ್' ನಿಂದ 'ಮಾರ್ಟಿನ್' ಎಂದು ಬದಲಾಯಿಸಲು ಆದೇಶಿಸಿದರು.
1069 #1
1069 #1
ಹೆಚ್ಚಿನ ಅಮೆರಿಕಾದ ರಾಜ್ಯಗಳ ಡೇಟಾಬೇಸ್‌ಗಳು ಅಕ್ಷರಗಳನ್ನು ಮಾತ್ರ ನಿರ್ವಹಿಸಲು ನಿರ್ಮಿಸಲ್ಪಟ್ಟಿವೆ. ಹೀಗಾಗಿ ಅಲ್ಲಿ ಅವರು ಕೇವಲ ಅಂಕೆಗಳಿಂದ ಮಾಡಿದ ಹೆಸರುಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ. ಹೀಗಾಗಿ, ಉತ್ತರ ಕೆರೊಲಿನಾ, ಓಹಿಯೋ, ಟೆಕ್ಸಾಸ್, ವರ್ಜೀನಿಯಾ ಮತ್ತು ಇತರ ರಾಜ್ಯಗಳಲ್ಲಿ ಮಗುವಿನ ಹೆಸರುಗಳನ್ನು ಅಂಕೆಗಳಲ್ಲಿ ನೀಡುವುದನ್ನು ನಿಷೇಧಿಸಲಾಗಿದೆ. ಉತ್ತರ ಡಕೋಟಾ ಮತ್ತು ಮಿನ್ನೇಸೋಟದ ಕೆಲ ಪ್ರಕರಣಗಳಲ್ಲಿ ಈ ಹೆಸರನ್ನು ತಿರಸ್ಕರಿಸಲಾಗಿದೆ.