ಮೂವರನ್ನು ಪ್ರೆಗ್ನೆಂಟ್ ಮಾಡಿದ್ಲು ಈ ಮಹಿಳೆ: ಹೇಗೆ? ಅಚ್ಚರಿಯ ವಿಚಾರ ಬಯಲು

First Published Jun 1, 2020, 6:31 PM IST

ಮಾನವ ಇಂದು ಬಹಳಷ್ಟು ಪ್ರಗತಿ ಸಾಧಿಸಿದ್ದಾನೆ. ಈಗ ಇಲ್ಲಿ ಬಹುತೇಕ ಎಲ್ಲವೂ ಸಾಧ್ಯ. ಹೀಗಿರುವಾಗ ಮಹಿಳೆಯೊಬ್ಬಳಿಂದ ಇತರ ಮೂವರು ಮಹಿಳೆಯರು ಪ್ರೆಗ್ನೆಂಟ್ ಆಗಿದ್ದಾರೆಂದರೆ ನಂಬಲೇಬೇಕಾದ ವಿಚಾರ. ಹೌದು 38 ವರ್ಷದ ಲೀನ್ ಹ್ಯಾನ್‌ಕಾಕ್ ಮೂವರು ಮಹಿಳೆಯರ ಬದುಕನ್ನೇ ಬದಲಾಯಿಸಿದ್ದಾಳೆ. ಇನ್ನು ಗರ್ಭಿಣಿಯರಾದ ಮೂವರು ಮಹಿಳೆಯರು ದೀರ್ಘ ಕಾಲದಿಂದ ತಾಯಿಯಾಗಲು ಯತ್ನಿಸುತ್ತಿದ್ದರು. ಹೀಗಿದ್ದರೂ ಅವರ ಇಚ್ಛೆ ಫಲಿಸಿರಲಿಲ್ಲ. ಹೀಗಿರುವಾಗ ಲೀನ್ ಎಗ್ ಡೋನರ್ ಆಗಿದ್ದಾರೆ. ತಮ್ಮ ಮೊಟ್ಟೆಯನ್ನು ಈ ಮಹಿಳೆಯರಿಗೆ ದಾನ ಮಾಡಿದ್ದಾರೆ. ಬಳಿಕವೇ ಈ ಮೂವರು ಮಹಿಳೆಯರು ಪ್ರೆಗ್ನೆಮಟ್ ಆಗಿದ್ದಾರೆ. ಇತರ ಮಹಿಳೆರು ತಾಯಿಯಾಗುವಾಗ ಅವರ ಕಣ್ಣಿನಲ್ಲಿ ಕಾಣಿಸುವ ಆ ಖುಷಿಯಿಂದ ನನಗೆ ಆನಂದವಾಗುತ್ತದೆ ಎಂಬುವುದು ಲೀನ್ ಮಾತು.