2024ರಲ್ಲಿ ಅತೀ ಹೆಚ್ಚು ಚಾಕೋಲೇಟ್ ತಿಂದ ದೇಶ ಯಾವುದು?
ಬಹುತೇಕ ಎಲ್ಲರೂ ಚಾಕೋಲೇಟನ್ನು ತುಂಬಾ ಇಷ್ಟಪಡುತ್ತಾರೆ. ಪ್ರೇಮ ನಿವೇದನೆಯಿಂದ ಹಿಡಿದು ಗಿಫ್ಟ್ ಕೊಡುವವರೆಗೆ ಚಾಕೋಲೇಟ್‌ಗೆ ವಿಶೇಷ ಸ್ಥಾನಮಾನವಿದೆ. ಹೀಗಿರುವಾಗ 2024ರಲ್ಲಿ ಅತೀ ಹೆಚ್ಚು ಚಾಕೋಲೇಟ್ ಬಳಕೆ ಯಾವ ದೇಶದಲ್ಲಾಗಿದೆ ಎಂಬ ಮಾಹಿತಿ ಇಲ್ಲಿದೆ.
ಬಹುತೇಕ ಎಲ್ಲರೂ ಚಾಕೋಲೇಟನ್ನು ತುಂಬಾ ಇಷ್ಟಪಡುತ್ತಾರೆ. ಪ್ರೇಮ ನಿವೇದನೆಯಿಂದ ಹಿಡಿದು ಗಿಫ್ಟ್ ಕೊಡುವವರೆಗೆ ಚಾಕೋಲೇಟ್‌ಗೆ ವಿಶೇಷ ಸ್ಥಾನಮಾನವಿದೆ. ಹೀಗಿರುವಾಗ 2024ರಲ್ಲಿ ಅತೀ ಹೆಚ್ಚು ಚಾಕೋಲೇಟ್ ಬಳಕೆ ಯಾವ ದೇಶದಲ್ಲಾಗಿದೆ ಎಂಬುದನ್ನು ತಿಳಿದುಕೊಳ್ಳೋಣ. ಪಾಶ್ಚಿಮಾತ್ಯ ದೇಶ ಸ್ವಿಜರ್ಲೆಂಡ್‌ನ ಜನ 2024ರಲ್ಲಿ ಅತೀ ಹೆಚ್ಚು ಚಾಕೋಲೇಟ್ ತಿನ್ನುವ ಮೂಲಕ ತಮ್ಮ ದೇಶವನ್ನು ಅತೀ ಹೆಚ್ಚು ಚಾಕೋಲೇಟ್ ತಿನ್ನುವ ಪ್ರಪಂಚದ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇರಿಸಿದ್ದಾರೆ.
ಅಂದರೆ ಇಲ್ಲಿ ಪ್ರತಿ ವ್ಯಕ್ತಿಯೂ ಹೆಚ್ಚು ಚಾಕೋಲೇಟ್ ಸೇವಿಸಿದ್ದು, ಸ್ವಿಟ್ಜರ್ಲೆಂಡ್‌ಗಿಂತ ಹೆಚ್ಚು ಚಾಕೋಲೇಟ್ ತಿನ್ನುವ ದೇಶಗಳು ಪ್ರಪಂಚದಲ್ಲಿ ಇದ್ದರೂ ಇಲ್ಲಿ ಜನಸಂಖ್ಯೆಯ ತಲಾವಾರು ಹೋಲಿಕೆ ಮಾಡಿದಾಗ ಸ್ವಿಟ್ಜರ್ಲೆಂಡ್‌ನ ಜನ ಮೊದಲ ಸ್ಥಾನದಲ್ಲಿದ್ದಾರೆ. ಇಲ್ಲಿ ಪ್ರತಿ ವ್ಯಕ್ತಿಯೂ ಹೆಚ್ಚು ಚಾಕೋಲೇಟ್ ಸೇವನೆ ಮಾಡಿದ್ದಾರೆ.
ಇಲ್ಲಿನ ಸರಾಸರಿ ವ್ಯಕ್ತಿಗಳು ಅಂದಾಜು 8.8 ಕೇಜಿ ಚಾಕೋಲೇಟನ್ನು ಪ್ರತಿ ವರ್ಷ ಸೇವನೆ ಮಾಡುತ್ತಾರೆ. ಇದು ಸರಿ ಸುಮಾರು 22 ಎಲ್‌ಬಿಯಷ್ಟಾಗುತ್ತದೆ. ಅಲ್ಲದೇ ಸ್ವಿಟ್ಜರ್ಲೆಂಡ್ ತಾನು ಹೊಂದಿರುವ ಅಸಾಧಾರಣವೆನಿಸು ಚಾಕೋಲೇಟ್ ಇಂಡಸ್ಟ್ರಿಯ ಕಾರಣಕ್ಕೆ ಜಗತ್ತಿನ್ನೆಲೆಡೆ ಹೆಚ್ಚಾಗಿ ಗುರುತಿಸಿಕೊಂಡಿದೆ.
chocolate
ಹಾಗೆಯೇ ಅತೀ ಹೆಚ್ಚು ಚಾಕೋಲೇಟ್ ತಿನ್ನುವ ದೇಶಗಳ ಪಟ್ಟಿಯಲ್ಲಿ ಸ್ವಿಟ್ಜರ್ಲೆಂಡ್‌ನ ನಂತರದ ಸ್ಥಾನ ಆಸ್ಟ್ರಿಯಾಗಿದೆ. ಆಸ್ಟ್ರಿಯಾದಲ್ಲಿ ಸ್ವಿಟ್ಜರ್ಲೆಂಡ್‌ನಂತೆ ಸಾಕಷ್ಟು ಚಾಕೋಲೇಟ್ ಇಂಡಸ್ಟ್ರಿಗಳು ಇಲ್ಲದೇ ಹೋದರೂ ಕೂಡ ಇಲ್ಲಿನ ಪ್ರತಿ ವ್ಯಕ್ತಿ ಪ್ರತಿ ವರ್ಷ ಸುಮಾರು 20 ಪೌಂಡ್‌ನಷ್ಟು ಚಾಕೋಲೇಟನ್ನು ಸೇವನೆ ಮಾಡುತ್ತಾರೆ.
ಅಲ್ಲದೇ ಚಾಕೋಲೇಟನ್ನು ಅತಿಯಾಗಿ ಇಷ್ಟಪಡುವ ದೇಶ ಇದಾಗಿದೆ. ಇದೇ ಕಾರಣಕ್ಕೆ ಆಸ್ಟ್ರಿಯಾ ಜೊತೆ ಆತ್ಮೀಯವಾದ ಸಂಬಂಧವನ್ನು ಆಸ್ಟ್ರಿಯಾ ಹೊಂದಿದೆ. ಹಾಗೆಯೇ ಅಮೆರಿಕಾದ ಜನ ಕೂಡ ಅತೀ ಹೆಚ್ಚು ಚಾಕೋಲೇಟ್ ಸೇವನೆ ಮಾಡ್ತಾರೆ. ಜಗತ್ತಿನಲ್ಲಿ ಅತೀ ಹೆಚ್ಚು ಚಾಕೋಲೇಟ್ ತಿನ್ನುವ 10 ದೇಶಗಳ ಪಟ್ಟಿಯಲ್ಲಿ ಅಮೆರಿಕಾವೂ ಸೇರಿದೆ.
ಇಲ್ಲಿನ ಸರಾಸರಿ ವ್ಯಕ್ತಿಗಳು ಪ್ರತಿ ವರ್ಷ 4.5 ಕೇಜಿ ಚಾಕೋಲೇಟನ್ನು ಪ್ರತಿ ವರ್ಷ ಸೇವನೆ ಮಾಡುತ್ತಾರೆ. ಆದರೆ ಅಮೆರಿಕಾವೂ ಇತರ ಐರೋಪ್ಯ ದೇಶಗಳು ಹೊಂದಿರುವಂತಹ ಗುಣಮಟ್ಟದ ಚಾಕೋಲೇಟನ್ನು ಹೊಂದಿಲ್ಲ ಅಮೆರಿಕಾವೂ ಪ್ರಮುಖವಾಗಿ ಹೆರ್ಸಿ ಚಾಕೋಲೇಟ್‌ಗೆ ಫೇಮಸ್ ಆಗಿದೆ. ಇದು ಪ್ರಪಂಚದಲ್ಲೇ ಅತ್ಯಂತ ಜನಪ್ರಿಯವಾಗಿರುವ ಚಾಕೋಲೇಟ್ ಬ್ರಾಂಡ್ ಆಗಿದೆ. ಅಲ್ಲದೇ ಈ ಚಾಕೋಲೇಟ್‌ನ ಹೆಸರಲ್ಲಿ ಥೀಮ್ ಪಾರ್ಕೊಂದನ್ನು ಮಾಡಲಾಗಿದ್ದು, ಪ್ರತಿವರ್ಷ ಇಲ್ಲಿಗೆ ಪ್ರವಾಸಿಗರು ಭೇಟಿ ನೀಡುತ್ತಾರೆ. ಅಲ್ಲದೇ ಅಮೆರಿಕಾವೂ ಜಾಸ್ತಿ ಪ್ರಮಾಣದ ಚಾಕೋಲೇಟ್‌ಗಳನ್ನು ಯುರೋಪ್‌ನ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ.
ತುಂಬಾ ಜನಪ್ರಿಯವಾದ ಚಾಕೋಲೇಟ್‌ಗಳನ್ನು ಹೊಂದಿರುವ ದೇಶ ಯಾವುದು?: ಪ್ರತಿ ವರ್ಷವೂ ಜಗತ್ತಿನ ವಿವಿಧ ದೇಶಗಳು ಭಾರಿ ಪ್ರಮಾಣದ ಚಾಕೋಲೇಟನ್ನು ಉತ್ಪಾದನೆ ಮಾಡುತ್ತವೆ. ಹಾಗೂ ಬಹುತೇಕ ಚಾಕೋಲೇಟ್‌ಗೆ ಹೆಸರಾಗಿರುವ ಎಲ್ಲಾ ದೇಶಗಳು ಉತ್ತಮ ಚಾಕೋಲೇಟ್‌ಗಳ ಕಾರಣಕ್ಕೆ ಜನಪ್ರಿಯವಾಗಿವೆ. ಜರ್ಮನಿ, ಬೆಲ್ಜಿಯಂ, ಮುಂತಾದ ದೇಶಗಳು ಅದ್ಭುತ ಚಾಕೋಲೇಟ್‌ನ ಕಾರಣಕ್ಕೆ ಫೇಮಸ್ ಆಗಿವೆ. ಜರ್ಮನಿಯ ಟಾರ್ಚೆನ್ ಮತ್ತು ಲಿಯೊನಿಡಾಸ್ ಚಾಕೋಲೇಟ್ ಬ್ರಾಂಡ್‌ಗಳು ಸಖತ್ ಜನಪ್ರಿಯವಾಗಿವೆ. ಹಾಗೆಯೇ ಬೆಲ್ಜಿಯಂನ ಗೊಡಿವಾ ಕೂಡ ಚಾಕೋಲೇಟ್‌ನ ಜನಪರಿಯ ಬ್ರಾಂಡ್‌ಗಳಲ್ಲಿ ಒಂದಾಗಿದೆ.