ಕಂದನ ಬೈದ ಅಮ್ಮ: ಪುಟ್ಟ ಯಜಮಾನನ ಕಣ್ಣೀರಿಗೆ ಕರಗಿದ ನಾಯಿ!

First Published 17, Oct 2020, 6:11 PM

ಕಂದನ ಕಿತಾಪತಿ ಕಂಡ ತಾಯಿಯೊಬ್ಬಳು ಕೋಪಗೊಂಡು ಆ ಮಗುವನ್ನು ಬೈಯ್ಯಲಾರಂಭಿಸಿದ್ದಾರೆ. ಈ ವೇಳೆ ಭಯಗೊಂಡ ಕಂದ ಅಳಲಾರಂಭಿಸಿದ್ದಾನೆ. ಹೀಗಿರುವಾಗಲೇ ಪುಟ್ಟ ಕಂದನ ಸಂತೈಸಿ, ಆತನನ್ನು ಅಮ್ಮನ ಬೈಗುಳದಿಂದ ಕಾಪಾಡಲು ಧಾವಿಸಿದ್ದು, ಆ ಮನೆಯ ಸಾಕು ನಾಯಿ. ಹೌದು ಸದ್ಯ ಈ ವಿಡಿಯೋ ಒಂದು ವೈರಲ್ ಆಗಿದ್ದು, ನಾಯಿಯ ಪ್ರೀತಿ ಎಲ್ಲರನ್ನೂ ಮೂಕ ವಿಸ್ಮಿತರನ್ನಾಗಿಸಿದೆ. ಅಷ್ಟಕ್ಕೂ ಈ ಘಟನೆ ನಡೆದಿದ್ದೆಲ್ಲಿ? ಇಲ್ಲಿದೆ ವಿವರ

ಕಿತಾಪತಿ ಮಾಡಿದ ಎರಡು ವರ್ಷದ ಕಂದನನ್ನು ತಾಯಿ ಬೈಯ್ಯುತ್ತಿರುವುದನ್ನು ನೋಡಲಾಗದೆ ಐದು ವರ್ಷದ ಸಾಕು ನಾಯಿಯೊಂದು ಅದರ ರಕ್ಷಣೆಗಿಳಿದಿರುವ ಹೃದಯಸ್ಪರ್ಶಿ ವಿಡಿಯೋ ಸದ್ಯ ಸಖತ್ ಸೌಂಡ್ ಮಾಡ್ತಿದೆ.

ಚೀನಾದಲ್ಲಿ ನಡೆದ ಘಟನೆ ಇದಾಗಿದ್ದು, ಪುಟ್ಟ ಮಗು ಹೊಸದಾಗಿ ತಂದ ದುಬಾರಿ ಫೇಶಿಯಲ್ ಕ್ರೀಂ ಹಾಳು ಮಾಡಿರುವುದು ಹೆತ್ತವರ ಗಮನಕ್ಕೆ ಬಂದಿದೆ.

ಕೋಪಗೊಂಡ ತಾಯಿ ಮಗುವನ್ನು ಬೈಯ್ಯಲಾರಂಭಿಸಿದ್ದಾಳೆ. ತಾಯಿಯ ಕೋಪಕ್ಕೆ ಮಗು ಕೂಡಾ ಭಯ ಬಿದ್ದು, ಅಳಲಾರಂಭಿಸಿದೆ.

ಚಿಕ್ಕ ಯಜಮಾನರು ಅಳುತ್ತಿರುವುದನ್ನು ನೋಡಲಾಗದ ನಾಯಿ ಹ್ಯಾರಿ ಕೂಡಲೇ ಕಂದನನ್ನು ಅಪ್ಪಿಕೊಂಡಿದೆ, ಅಲ್ಲದೇ ಯಜಮಾನಿಗೆ ಸುಮ್ಮನಿರುವಂತೆ ತನ್ನದೇ ಭಾಷೆಯಲ್ಲೇ ಹೇಳಿದೆ.

ಮಗುವಿನ ಕಿತಾಪತಿ ತಾಯಿಯ ಕೋಪ ನೆತ್ತಿಗೇರಿಸಿದ್ದರೂ ಹ್ಯಾರಿ ಆ ಕಂದನ ರಕ್ಷಣೆ ಮಾಡುತ್ತಿರುವ ದೃಶ್ಯ ಅವರನ್ನು ಕರಗಿಸಿದೆ.

ನಾಯಿಯ ಪ್ರೀತಿ ತಾಯಿಯ ಕೋಪವನ್ನು ಕ್ಷಣಾರ್ಧದಲ್ಲಿ ಇಳಿಸಿದೆ. ಮಗುವನ್ನು ಸಂತೈಸಿ ಯಜಮಾನಿಯನ್ನು ಸುಮ್ಮನಿರುವಂತೆ ಸನ್ನೆ ಮಾಡಿದ ನಾಯಿ

loader