ಸಾರ್ವಜನಿಕವಾಗಿ ಕಾಣಿಸ್ಕೊಂಡಿದ್ದು ಕಿಮ್ ಅಲ್ಲ, ಆತನ ಹೋಲುವ ವ್ಯಕ್ತಿ!

First Published 7, May 2020, 6:07 PM

ಕಿಮ್ ಜಾಂಗ್ ಉನ್ ಬದುಕಿಲ್ಲ ಎಂಬ ಸುದ್ದಿ ಕೆಲ ದಿನಗಳ ಹಿಂದಷ್ಟೇ ವೈರಲ್ ಆಗಿತ್ತು. ಅನೇಕ ಅಂತಾರಾಷ್ಟ್ರೀಯ ಮಾಧ್ಯಮಗಳು ಈ ಸಂಬಂದ ಸುದ್ದಿ ಪ್ರಕಟಿಸಿದ್ದವು. ಆದರೆ ಇದರ ಬೆನ್ನಲ್ಲೇ ಅಚ್ಚರಿಯುಂಟು ಮಾಡುವಂತೆ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರತ್ಯಕ್ಷರಾಗಿದ್ದರು. ಹೀಗಾಗಿ ಅವರ ಸಾವಿನ ಸುದ್ದಿ ಮೂಲೆ ಸೇರಿತ್ತು. ಆದರೀಗ ಈ ಶಂಕೆ ಮತ್ತೆ ಎದುರಾಗಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಇದೇ ವಿಚಾರ ಸದ್ದು ಮಾಡಿದ್ದು, ಅಂದು ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ಕಿಮ್ ಅಲ್ಲ, ಆತನ ಹೋಲುವ ವ್ಯಕ್ತಿ ಎಂಬ ಧ್ವನಿ ಜೋರಾಗಿದೆ.

ಕೊರೋನಾ ಆತಂಕದ ನಡುವೆ ಇಡೀ ವಿಶ್ವದ ಗಮನಸೆಳೆದ ವಿಚಾರವೆಂದರೆ ಕಿಮ್ ಜಾಂಗ್ ಉನ್ ಆರೋಗ್ಯ. ಈ ಬಗ್ಗೆ ಕಳೆದೊಂದು ತಿಂಗಳಿನಿಂದ ಚಿತ್ರ ವಿಚಿತ್ರ ಸುದ್ದಿಗಳು ಕೇಳಿ ಬಂದಿವೆ.

ಕೆಲ ಮಾಧ್ಯಮಗಳು ಕಿಮ್ ಸತ್ತಿದ್ದಾನೆ ಎಂದರೆ, ಇನ್ನು ಕೆಲವು ಅವರಿಎ ಹೃದಯ ಸಂಬಂಧಿ ಸರ್ಜರಿ ವಿಫಲವಾಗಿ ಮೆದುಳು ನಿಷ್ಕ್ರಿಯವಾಗಿದೆ ಎಂದಿದ್ದವು. ಇತ್ತ ಚೀನಾದ ಮಾಧ್ಯಮಗಳು ಕಿಮ್‌ಗೆ ಕೊರೋನಾ ಸೋಂಕು ತಗುಲಿದೆ ಎಂದಿದ್ದವು. ಇದಕ್ಕೆ ತಕ್ಕಂತೆ ಚೀನಾದ ವೈದ್ಯರ ಒಂದು ತಮಡ ಉತ್ತರ ಕೊರಿಯಾಗೆ ತೆರಳಿತ್ತು.

ಆದರೆ ಅಷ್ಟರಲ್ಲೇ ಶತ್ರು ರಾಷ್ಟ್ರ ದಕ್ಷಿಣ ಕೊರಿಯಾ ಕಿಮ್‌ಗೇನೂ ಆಗಿಲ್ಲ, ಚೆನ್ನಾಗೇ ಇದ್ದಾರೆ. ಕೊರೋನಾ ಭಯದಿಂದ ತನ್ನ ಕೋಟೆಯೊಳಗೆ ಸೇರಿದ್ದಾರೆ ಎಂದು ತನ್ನ ಗುಪ್ತಚರ ವರದಿ ಆಧಾರದ ಮೇರೆಗೆ ಹೇಳಿತ್ತು.

ಅಚ್ಚರಿ ಎಂಬಂತೆ ದಕ್ಷಿಣ ಕೊರಿಯಾದ ಈ ವರದಿ ಬೆನ್ನಲ್ಲೇ ಇಪ್ಪತ್ತು ದಿನ ಮಾಧ್ಯಮ ಹಾಗೂ ಹೊರ ಜಗತ್ತಿನಿಂದ ದೂರವಿದ್ದ ಉತ್ತರ ಕೊರಿಯಾದ ಸರ್ವಾಧಿಕಾರಿ ಇದ್ದಕ್ಕಿದ್ದಂತೆ ರಸಗೊಬ್ಬರ ಕಾರ್ಖಾನೆಯ ಉದ್ಘಾಟನೆ ನಡೆಸಿ ಎಲ್ಲರನ್ನೂ ಅಚ್ಚರಿಗೀಡು ಮಾಡಿದ್ದರು. ಈ ಮೂಲಕ ಕಿಮ್ ಸಾವಿನ ಸುದ್ದಿಗೆ ತೆರೆ ಬಿದ್ದಿತ್ತು.

ಆದರೀಗ ಮತ್ತೆ ಕಿಮ್ ನಿಧನದ ಸುದ್ದಿ ಮತ್ತೆ ಸದ್ದು ಮಾಡಿದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಬಂದಿದ್ದು ಕಿಮ್ ಅಲ್ಲ, ಅವರಂತೆ ಕಾಣುವ ವ್ಯಕ್ತಿಯಷ್ಟೇ ಎಂಬ ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ.

ಹೌದು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಿಮ್ ಎಂದಿನಂತೆ ತಮ್ಮ ಬ್ಯಾಡ್ಜ್ ಹಾಗೂ ಸೂಪರ್ ವಾಚ್ ಧರಿಸಿರಲಿಲ್ಲ. ಈ ವಿಚಾರ ಆರಂಭದಲ್ಲೇ ಸದ್ದು  ಮಾಡಿ ಜನರಲ್ಲಿ ಅನುಮಾನ ಹುಟ್ಟಿಸಿತ್ತು.

ಆದರೀಗ ನೆಟ್ಟಿಗರು ಒಂದು ಹೆಜ್ಜೆ ಮುಂದೆ ಹೋಗಿ, ಸೂಕ್ಷ್ಮವಾಗಿ ಗಮನಹರಿಸಿ ಆಘಾತಕಾರಿ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

ಹೌದು ಇಪ್ಪತ್ತು ದಿನಗಳಿಂದ ಮಾಧ್ಯಮಗಳಿಂದ ದೂರವಿದ್ದ ಕಿಮ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದ ಫೋಟೋ ಸರ್ಕಾರಿ ನ್ಯೂಸ್ ಏಜೆನ್ಸಿ ಬಿಡುಗಡೆ ಮಾಡಿತ್ತು.

ಆದರೀಗ ಈ ಫೋಟೋದಲ್ಲಿರುವ ವ್ಯಕ್ತಿ  ಕಿಮ್ ಅಲ್ಲ, ಕಿಮ್ ಜಾಂಗ್‌ ಉನ್‌ರವರ ಡ್ಯೂಪಪ್ ಅಂದರೆ ಅವರನ್ನು ಹೋಲುವ ವ್ಯಕ್ತಿ ಎಂದು ಮಾಧ್ಯಮಗಳು ತಿಳಿಸಿವೆ.

ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದ ವ್ಯಕ್ತಿ ಕಿಮ್‌ ಜಾಂಗ್‌ ಉನ್‌ರವರ ಹಳೆ ಫೋಟೋದಲ್ಲಿರುವ ಮುಖವನ್ನು ಗಮನಿಸಿದರೆ ಹಲ್ಲಿನ ರಚನೆ ಬೇರೆ ಇದೆ.

ಇವೆರಡೂ ಫೋಟೋಗಳಲ್ಲಿ ಗಲ್ಲವೂ ಬೇರೆಯೇ ರೀತಿ ಇದೆ.

ಇಷ್ಟೇ ಅಲ್ಲದೇ ಕಿಮ್ ದೇಹದ ಮೇಲ್ಭಾಗದ ಉದ್ದದಷ್ಟು ಫೋಟೋದಲ್ಲಿರುವ ವ್ಯಕ್ತಿಯ ದೇಹದ ಮೇಲ್ಭಾಗ ಇಲ್ಲ ಎಂದೂ ವಾದಿಸಲಾಗಿದೆ.

ಇನ್ನು ಸೋಶಿಯಲ್ ಮೀಡಿಯಾದಲ್ಲೂ ಈ ಬಗ್ಗೆ ಚರ್ಚೆಯಾಗಿದ್ದು, ಕಿಮ್ ಕೈಯ್ಯಲ್ಲಿ ಒಂದು ಮಚ್ಛೆ ಇತ್ತು, ಆದರೆ ಉದ್ಘಾಟನೆ ವೇಳೆ ಭಾಗಿಯಾದಾಗ ಆ ಮಚ್ಛೆ ಹೇಗೆ ಮರೆಯಾಗಲು ಸಾಧ್ಯ ಎಂದು ವಾದಿಸಲಾಗಿದೆ.

loader