MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • World News
  • ಕಸದ ಜೊತೆ 12 ಲಕ್ಷ ರೂ ಮೌಲ್ಯದ ಚಿನ್ನ ಎಸೆದ ಮಹಿಳೆ, ಪೌರ ಕಾರ್ಮಿಕರಿಗೆ ಸಿಕ್ಕ ಬಂಗಾರ ಕತೆ ಏನಾಯಿತು?

ಕಸದ ಜೊತೆ 12 ಲಕ್ಷ ರೂ ಮೌಲ್ಯದ ಚಿನ್ನ ಎಸೆದ ಮಹಿಳೆ, ಪೌರ ಕಾರ್ಮಿಕರಿಗೆ ಸಿಕ್ಕ ಬಂಗಾರ ಕತೆ ಏನಾಯಿತು?

ಕಸದ ಜೊತೆ 12 ಲಕ್ಷ ರೂ ಮೌಲ್ಯದ ಚಿನ್ನ ಎಸೆದ ಮಹಿಳೆ, ದುಬೈನಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳಿದ ಭಾರತೀಯ ಮಹಿಳೆ ತನ್ನಲ್ಲಿದ್ದ 12 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಕಸದ ಜೊತೆ ಎಸೆದಿದ್ದಾರೆ. ಮುಂದೇನಾಯಿತು?

2 Min read
Author : Chethan Kumar
Published : Feb 07 2026, 05:44 PM IST
Share this Photo Gallery
  • FB
  • TW
  • Linkdin
  • Whatsapp
16
12 ಲಕ್ಷ ರೂ ಮೌಲ್ಯದ ಚಿನ್ನ ಎಸೆದ ಮಹಿಳೆ
Image Credit : stockPhoto

12 ಲಕ್ಷ ರೂ ಮೌಲ್ಯದ ಚಿನ್ನ ಎಸೆದ ಮಹಿಳೆ

ಭಾರತೀಯ ಮಹಿಳೆ ಕಾಮಿನಿ ಕಣ್ಣನ್ ಮದುವೆ ಕಾರ್ಯಕ್ರಮಕ್ಕಾಗಿ ದುಬೈಗೆ ತೆರಳಿದ್ದಾರೆ. ಯಎಇನಲ್ಲಿ 23 ವರ್ಷ ಕೆಲಸ ಮಾಡಿ ಬಳಿಕ 2021ರಲ್ಲಿ ನಿವೃತ್ತಿ ಪಡೆದು ಕಾಮಿನಿ ಕಣ್ಮನ್ ಭಾರತಕ್ಕೆ ಮರಳಿದ್ದರು. ಮದುವೆಗಾಗಿ ದುಬೈಗೆ ತೆರಳಿದ ಕಾಮಿನಿ ಕಣ್ಣನ್ ತಮ್ಮ ಕೆಲಸದ ವೇಳೆ ಹೂಡಿಕೆಯ ಚಿನ್ನದ ನಾಣ್ಯಗಳನ್ನು ಪೌಚ್‌ನಲ್ಲಿ ಹಾಕಿ ಇಟ್ಟಿದ್ದರು. ಅಚನಕ್ಕಾಗಿ ಈ ಪೌಚ್ ಕಸದ ಬುಟ್ಟಿ ಸೇರಿದೆ. ಮರುದಿನ ಬೆಳಗ್ಗೆ ಕಸದ ಕಾರ್ಮಿಕರು ಬಂದು ಕಸ ತೆಗೆದುಕೊಂಡು ಹೋಗಿದ್ದಾರೆ. ಮೂಲಕ ಬರೋಬ್ಬರಿ 12 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಕಸದ ಜೊತೆ ಬಿಸಾಡಿದ ಘಟನೆ ನಡೆದಿದೆ.

26
ಪೌಚ್‌ಗೆ ಬದಲಾಯಿಸಿ ಟೇಬಲ್ ಮೇಲಿಟ್ಟಿದ್ದ ಮಹಿಳೆ
Image Credit : Getty

ಪೌಚ್‌ಗೆ ಬದಲಾಯಿಸಿ ಟೇಬಲ್ ಮೇಲಿಟ್ಟಿದ್ದ ಮಹಿಳೆ

ಕಾಮಿನಿ ಕಣ್ಣನ್ ತಾವಿಟ್ಟಿದ್ದ ಚಿನ್ನದ ನಾಣ್ಯಗಳ ಪೌಚ್ ಕೊಂಚ ಹರಿದಿತ್ತು. ಹೀಗಾಗಿ ಸುರಕ್ಷಿತವಾಗಿ ಚಿನ್ನ ಇಡಲು ಮತ್ತೊಂದು ಪೌಚ್‌ಗೆ ಚಿನ್ನದ ನಾಣ್ಯಗಳನ್ನು ವರ್ಗಾಯಿಸಿದ್ದರು. ಬಳಿಕ ಈ ಪೌಚ್‌ನ್ನು ಡೈನಿಂಗ್ ಟೇಬಲ್ ಮೇಲೆ ಇಟ್ಟಿದ್ದಾರೆ. ಈ ಪೌಚ್‌ನಲ್ಲಿ 50 ಗ್ರಾಂ ತೂಕದ ಚಿನ್ನದ ಬಿಸ್ಕೆಟ್, 32 ಗ್ರಾಂ ತೂಕದ ನಾಲ್ಕು ಚಿನ್ನದ ನಾಣ್ಯಗಳು ಇತ್ತು.

Related Articles

Related image1
Gold Silver Rate Today: ಬಂಗಾರದ ಬೆಲೆಯಲ್ಲಿ ದಾಖಲೆಯ ಕುಸಿತ; ಆಕಾಶದಿಂದ ಧರೆಗೆ ಉರುಳಿತು! ಇಂದಿನ ಬೆಲೆ ಎಷ್ಟು?
Related image2
ಜ್ಯೋತಿಷ್ಯ ಶಾಸ್ತ್ರ ಹೇಳುವಂತೆ 2026ರಲ್ಲಿ Gold Rate ಕಡಿಮೆ ಆಗೋದು ಯಾವಾಗ? ಯಾವಾಗ ಏರಿಕೆ ಆಗುತ್ತೆ?
36
ಮನೆ ಸ್ವಚ್ಚಗೊಳಿಸುವಾಗ ಚಿನ್ನದ ಪೌಚ್ ಕಸದ ಬುಟ್ಟಿಗೆ
Image Credit : stockPhoto

ಮನೆ ಸ್ವಚ್ಚಗೊಳಿಸುವಾಗ ಚಿನ್ನದ ಪೌಚ್ ಕಸದ ಬುಟ್ಟಿಗೆ

ಮನೆ ಸ್ವಚ್ಚಗೊಳಿಸುವಾಗ ಈ ಚಿನ್ನದ ಪೌಚ್‌ನ್ನು ಕಾಮಿನಿ ಕಣ್ಣನ್ ಕಸದ ಬುಟ್ಟಿಗೆ ಎಸೆದಿದ್ದಾನೆ. ತಾಯಿ ಆಭರಣ ಇಟ್ಟಿರುವ ಹಳೇ ಪೌಚ್ ಬಗ್ಗೆ ಮಗನಿಗೆ ಸ್ಪಷ್ಟತೆ ಇತ್ತು. ಹೀಗಾಗಿ ಟೇಬಲ್ ಮೇಲಿಟ್ಟಿದ್ದ ಪೌಚ್ ಕಸದ ಬುಟ್ಟಿಗೆ ಎಸೆದಿದ್ದಾನೆ. ಇತ್ತ ಕಸದ ಕಾರ್ಮಿಕರು ಬಂದು ಕಸ ಸಂಗ್ರಹ ಮಾಡಿ ತೆರಳಿದ್ದಾರೆ. ಈ ಚಿನ್ನದ ನಾಣ್ಯ ಹಾಗೂ ಬಿಸ್ಕಟ್ ಕಸದ ಬುಟ್ಟಿ ಸೇರಿದೆ.

46
ನಾಣ್ಯ ಮಿಸ್ಸಿಂಗ್‌ನಿಂದ ಆತಂಕ
Image Credit : google

ನಾಣ್ಯ ಮಿಸ್ಸಿಂಗ್‌ನಿಂದ ಆತಂಕ

ಕಾಮಿನಿ ಕಣ್ಣನ್ ಭಾರತಕ್ಕೆ ಮರಳಲು ಎಲ್ಲಾ ತಯಾರಿ ಮಾಡಿಕೊಂಡಿದ್ದರು. ಬೆಳಗ್ಗೆ ವಿಮಾನ ನಿಲ್ದಾಣಕ್ಕೆ ಪ್ರಯಾಣಕ್ಕೂ ಮೊದಲು ಪ್ಯಾಕಿಂಗ್ ಮಾಡುವಾಗ ಚಿನ್ನ ಇಟ್ಟಿದ್ದ ಪೌಚ್ ಕಾಣೆಯಾಗಿತ್ತು. ವಿಚಾರಿಸಿದಾಗ ಇದು ಕಸದ ಬುಟ್ಟಿ ಸೇರಿದೆ ಅನ್ನೋ ಉತ್ತರ ಬಂದಿತ್ತು. 12 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಕಸದ ಬುಟ್ಟಿ ಸೇರಿದೆ ಅನ್ನೋ ಖಚಿತವಾಗಿತ್ತು.

56
ಪೊಲೀಸರಿಂದ ಕರೆ
Image Credit : our own

ಪೊಲೀಸರಿಂದ ಕರೆ

ತಾವೇ ಕಸದ ಬುಟ್ಟಿಗೆ ಹಾಕಿದ್ದ ಕಾರಣ ದೂರು ನೀಡಬೇಕೋ ಬೇಡವೇ ಅನ್ನೋ ಗೊಂದಲ ಮುಂದುವರಿದಿತ್ತು. ಇದರ ನಡುವೆ ಪೊಲೀಸರಿಂದ ಕರೆಯೊಂದು ಬಂದಿದೆ. ಠಾಣೆಗೆ ಬರಬೇಕು ಎಂದು ಸೂಚಿಸಿದ್ದರು. ಪೊಲೀಸ್ ಠಾಣೆಗೆ ತೆರಳಿದಾಗ ಚಿನ್ನದ ನಾಣ್ಯ, ಬಿಸ್ಕೆಟ್ ಪೌಚ್ ಮುಂದಿಟ್ಟಿದ್ದರೆ. ಸಿಗುವುದೇ ಇಲ್ಲ ಎಂದುಕೊಂಡಿದ್ದ ಚಿನ್ನ ಮರಳಿ ಸಿಕ್ಕಿದೆ. ಕಾಮಿನಿ ಕಣ್ಣನ್ ಸಂತಸಕ್ಕೆ ಪಾರವೇ ಇರಲಿಲಿಲ್ಲ.

66
ಚಿನ್ನ ಸಿಕ್ಕಿದ್ದು ಹೇಗೆ
Image Credit : Freepik

ಚಿನ್ನ ಸಿಕ್ಕಿದ್ದು ಹೇಗೆ

ಕಸ ಸಂಗ್ರಹಿಸುವ ಪೌರ ಕಾರ್ಮಿಕನಿಗೆ ಈ ಚಿನ್ನದ ಪೌಚ್ ಸಿಕ್ಕಿದೆ.ಈ ಪೌಚ್ ಹಿಡಿದು ದುಬೈ ಗೋಲ್ಡ್ ಮಾರ್ಕೆಟ್ ತೆರಳಿದದ ಕಾರ್ಮಿಕ, ಪೌಚ್ ಹಿಂದಿರುಗಿಸಲು ಮುಂದಾಗಿದ್ದಾನೆ. ಪೊಲೀಸರ ಬಳಿಕ ತನಗೆ ಈ ಪೌಚ್ ಕಸದ ಬುಟ್ಟಿಯಿಂದ ಸಿಕ್ಕಿರುವುದಾಗಿ ಹೇಳಿದ್ದಾನೆ. ಇತ್ತ ಪೊಲೀಸರು, ಯಾವ ಕಸದ ಬುಟ್ಟಿ ಎಂದು ಪರಿಶೀಲಿಸಿದ್ದಾರೆ. ದುಬೈನಲ್ಲಿ ಯಾವ ಮನೆಯಿಂದ ಯಾವ ಕಸ ಬಂದಿದೆ ಅನ್ನೋದು ಸ್ಪಷ್ಟವಾಗಿ ಹೇಳುವ ವ್ಯವಸ್ಥೆ ಇದೆ. ಇದರಂತೆ ಮನೆ ಸದಸ್ಯರ ನಂಬರ್ ಪಡೆದು ಕರೆ ಮಾಡಿದ್ದಾರೆ. ಸಂಬಂಧ ಪಟ್ಟ ದಾಖಲೆ ಪಡೆದು ಚಿನ್ನ ಮರಳಿಸಿದ್ದಾರೆ.

ಚಿನ್ನ ಸಿಕ್ಕಿದ್ದು ಹೇಗೆ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಚಿನ್ನ
ಚಿನ್ನದ ಬೆಲೆ
ದುಬೈ

Latest Videos
Recommended Stories
Recommended image1
Epstein Filesನಲ್ಲಿ ರಾಹುಲ್​ ಗಾಂಧಿ ಹೆಸರು, ವಿಡಿಯೋ: ಹಲ್​ಚಲ್​ ಸೃಷ್ಟಿಸ್ತಿರೋ ಇದರ ಅಸಲಿಯತ್ತೇನು?
Recommended image2
ಸ್ಲಮ್ ಮಕ್ಕಳ ಬಾಳಲ್ಲಿ ಬಣ್ಣ ತುಂಬಿದ ಟೀಚರ್: 1 ಮಿಲಿಯನ್ ಡಾಲರ್ ಮೊತ್ತದ ಜಾಗತಿಕ ಶಿಕ್ಷಕಿ ಪ್ರಶಸ್ತಿ ಗೆದ್ದ ರೂಬೆಲ್ ನಾಗಿ
Recommended image3
ಕುತೂಹಲಕ್ಕೆ ಅಶ್ಲೀಲ ವಿಡಿಯೋ ಹುಡುಕಿದವನಿಗೆ ಶಾಕ್, ಗೆಳತಿ ಜೊತೆಗಿನ ತನ್ನದೇ ಕ್ಲಿಪ್ ನೋಡಿ ಕಂಗಾಲು
Related Stories
Recommended image1
Gold Silver Rate Today: ಬಂಗಾರದ ಬೆಲೆಯಲ್ಲಿ ದಾಖಲೆಯ ಕುಸಿತ; ಆಕಾಶದಿಂದ ಧರೆಗೆ ಉರುಳಿತು! ಇಂದಿನ ಬೆಲೆ ಎಷ್ಟು?
Recommended image2
ಜ್ಯೋತಿಷ್ಯ ಶಾಸ್ತ್ರ ಹೇಳುವಂತೆ 2026ರಲ್ಲಿ Gold Rate ಕಡಿಮೆ ಆಗೋದು ಯಾವಾಗ? ಯಾವಾಗ ಏರಿಕೆ ಆಗುತ್ತೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved