ಇಸ್ರೇಲ್ ದಾಳಿಗೆ ನುಚ್ಚು ನೂರಾದ ಮನೆ: ಬದುಕುಳಿದ 6 ವರ್ಷದ ಮಗು!

First Published May 18, 2021, 6:26 PM IST

ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ನಡುವಿನ ಸಂಘರ್ಷ ಮುಂದುವರೆದಿದೆ. ಎರಡು ದೇಶಗಳ ನಡುವಿನ ಈ ಹೋರಾಟದಲ್ಲಿ ಸಾವಿರಾರು ಮಂದಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅನೇಕ ಮಂದಿಯ ಮನೆ, ಕುಟಂಬ ಸರ್ವನಾಶವಾಗಿದೆ. ಆರು ವರ್ಷದ ಒಂದು ಮಗು ಕೂಡಾ ತನ್ನ ಇಡೀ ಮನೆ, ಕುಟುಂಬವನ್ನು ಈ ದಾಳಿಯಲ್ಲಿ ಕಳೆದುಕೊಂಡು ಅನಾಥವಾಗಿದೆ. ಸೂಜೀ ಎಶ್‌ಕುಂಟಾನಾ ಹೆಸರಿನ ಈ ಬಾಲಕಿ ಗಾಜಾ ದಾಳಿಯಲ್ಲಿ ಬದುಕುಳಿದಿದೆ, ಆದರೆ ಈ ಮುಗ್ಧ ಮಗು ತನ್ನ ತಾಯಿ ಸೇರಿ ನಾಲ್ವರು ಒಡ ಹುಟ್ಟಿದವರನ್ನು ಕಳೆದುಕೊಂಡಿದೆ. ಸದ್ಯ ಈ ಮಗುವಿನ ತಂದೆ ಈ ದಾಳಿಯಿಂದ ಪಾರಾಗಿದ್ದಾರೆ. ಇನ್ನು ಈ ಮಗು ಬರೋಬ್ಬರಿ ಏಳು ತಾಸು ಕುಸಿದು ಬಿದ್ದ ಕಟ್ಟಡದ ಅವಶೇಷಡಿ ಒದ್ದಾಡಿಕೊಂಡಿದ್ದಳೆನ್ನಲಾಗಿದೆ. ಸದ್ಯ ಸೂಜಿ ಹಾಗೂ ಆಕೆಯ ತಂದೆಯ ಚಿಕಿತ್ಸೆ ನಡೆಯುತ್ತಿದೆ.