ನಿವೃತ್ತಿಯಿಂದ ಮತ್ತೆ ಗೂಗಲ್‌ಗೆ ಮರಳಿದ ಸಹ-ಸಂಸ್ಥಾಪಕ ಸೆರ್ಗೆ ಬ್ರಿನ್, ಕಾರಣ AI
ಗೂಗಲ್ ಸಹ-ಸ್ಥಾಪಕ ಸೆರ್ಗೆ ಬ್ರಿನ್ ತಮ್ಮ ನಿವೃತ್ತಿಯಿಂದ ಮರಳಿ ಗೂಗಲ್‌ನ AI ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ. OpenAI ನ ChatGPT ಯಶಸ್ಸಿನಿಂದ ಪ್ರೇರಿತರಾಗಿ, ಅವರು Google ನ ಹೊಸ AI ಮಾದರಿ ಜೆಮಿನಿ ಅಭಿವೃದ್ಧಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಗೂಗಲ್ ಸಹ-ಸ್ಥಾಪಕ ಸೆರ್ಗೆ ಬ್ರಿನ್ 6 ವರ್ಷಗಳ ಬಳಿಕ ಇದೀಗ ತಮ್ಮ ನಿವೃತ್ತಿ ಜೀವನದಿಂದ ಮರಳಿ ಗೂಗಲ್‌ನಲ್ಲಿ ತೀವ್ರವಾಗಿ ಕೆಲಸ ಮಾಡುತ್ತಿದ್ದಾರೆ. 2019 ರಲ್ಲಿ ಅವರು ಕಂಪನಿಯ ತಂತ್ರಜ್ಞಾನದ ಮುಖ್ಯಸ್ಥ ಸ್ಥಾನದಿಂದ ನಿವೃತ್ತರಾಗಿದ್ದರು. ಇದೀಗ ಅವರು ಮತ್ತೆ ದೈನಂದಿನ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದು ಕೂಡ ಗೂಗಲ್‌ನ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (AI) ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವುದು ಕುತೂಹಲ ಮೂಡಿಸಿದೆ.
ಏಕೆ ಮರಳಿ ಬಂದರು ಬ್ರಿನ್?
2022 ರಲ್ಲಿ ಓಪನ್‌ಎಐ (OpenAI) ತನ್ನ ಚಾಟ್‌ಜಿಪಿಟಿ (ChatGPT) ಎಂಬ AI ಚಾಟ್‌ಬಾಟ್ ಅನ್ನು ಬಿಡುಗಡೆ ಮಾಡಿದಾಗ, ತಂತ್ರಜ್ಞಾನ ಲೋಕವೇ ಆಘಾತಕ್ಕೆ ಒಳಗಾಯಿತು. ಈ ಆವಿಷ್ಕಾರದಿಂದ ಪ್ರೇರಿತನಾಗಿ, ಬ್ರಿನ್ ಕೂಡ ಗೂಗಲ್‌ಗೆ ಮರಳಿದರು. "ಇತ್ತೀಚಿನ AI ಅಭಿವೃದ್ಧಿಗಳು ಅಷ್ಟೊಂದು ದೊಡ್ಡದಾಗಿದೆ, ಈಗ ಯಾವುದೇ ಕಂಪ್ಯೂಟರ್ ವಿಜ್ಞಾನಿ ನಿವೃತ್ತರಾಗಬಾರದು!" ಎಂದು ಬ್ರಿನ್ ಹೇಳಿದರು.
AI ನ ಭವಿಷ್ಯ – ಜೆಮಿನಿ ಮತ್ತು AGI
ಬ್ರಿನ್ ಈಗ ಗೂಗಲ್‌ನ ಹೊಸ AI ಮಾದರಿ ಜೆಮಿನಿ (Gemini) ಅಭಿವೃದ್ಧಿಯಲ್ಲಿ ನೇರವಾಗಿ ತೊಡಗಿಸಿಕೊಂಡಿದ್ದಾರೆ. ಅವರ ಹಂಬಲ ಜೆಮಿನಿ ಒಂದು ದಿನ AGI (Artificial General Intelligence) ಆಗಲಿ ಎಂಬುದು. AGI ಎಂದರೆ ಮಾನವನಂತೆ ಎಲ್ಲ ಕ್ಷೇತ್ರಗಳಲ್ಲಿ ಯೋಚಿಸಬಲ್ಲ ಮತ್ತು ಕೆಲಸ ಮಾಡಬಲ್ಲ ಯಂತ್ರ ಬುದ್ಧಿಮತ್ತೆ. ಇದು ತಂತ್ರಜ್ಞಾನದ ದಿಗ್ಗಜರ ಕನಸಾಗಿದೆ.
ಬ್ರಿನ್ ನಿವೃತ್ತಿಲ್ಲಿ ಏನು ಮಾಡುತ್ತಿದ್ದರು?
ನಿವೃತ್ತಿಯಲ್ಲಿರುವಾಗ ಬ್ರಿನ್ ಗಾಳಿಯಲ್ಲಿ ಹಾರುವ ವಿಮಾನಗಳ ಸ್ಟಾರ್ಟ್ಅಪ್ (LTA Research) ನಲ್ಲಿ ತೊಡಗಿಸಿಕೊಂಡಿದ್ದರು. ಪಾರ್ಕಿನ್ಸನ್ ಕಾಯಿಲೆ ಸಂಶೋಧನೆಗೆ ಹಣ ಒದಗಿಸುತ್ತಿದ್ದರು. ರಿಯಲ್ ಎಸ್ಟೇಟ್‌ಗೆ ಹೂಡಿಕೆ ಮಾಡುತ್ತಿದ್ದರು. ಆದರೆ, AI ಕ್ಷೇತ್ರದ ಸ್ಪರ್ಧೆ ಮತ್ತು ಅವಕಾಶಗಳು ಅವರನ್ನು ಮತ್ತೆ "ಫುಲ್ ಟೈಮ್" ಕೆಲಸಕ್ಕೆ ಹಿಂದಿರುಗಿಸಿವೆ.
ಗೂಗಲ್ ಮುಂದೆ ಯಾವ ಸವಾಲುಗಳು?
AI ಕ್ಷೇತ್ರದಲ್ಲಿ ಮುನ್ನಡೆಸಲು, ಗೂಗಲ್‌ಗೆ ದೊಡ್ಡ ಮಟ್ಟದ ಕಂಪ್ಯೂಟಿಂಗ್ ಶಕ್ತಿ ಬೇಕಾಗಿದೆ. “ನಾವು ಅಷ್ಟು ವೇಗವಾಗಿ ಕಂಪ್ಯೂಟ್ ಶಕ್ತಿ ಕಟ್ಟುತ್ತೇವೆ, ಆದರೂ ಸಾಕಾಗುವುದಿಲ್ಲ” ಎಂದು ಬ್ರಿನ್ ಹೇಳುತ್ತಾರೆ. ಈ ಕಾರಣದಿಂದಾಗಿ ಕೆಲವೊಮ್ಮೆ ಗೂಗಲ್ ಕ್ಲೌಡ್ ಗ್ರಾಹಕರಿಗೆ ‘ಇಲ್ಲ’ ಎಂದು ಹೇಳಬೇಕಾದ ಪರಿಸ್ಥಿತಿ ಕೂಡ ಎದುರಿಸಿದೆ ಎಂದಿದ್ದಾರೆ. ನಾನು ನನ್ನ ವೃತ್ತಿಜೀವನದಲ್ಲಿ ಅನೇಕ ತಂತ್ರಜ್ಞಾನ ಬದಲಾವಣೆಗಳನ್ನು ನೋಡಿದ್ದೇನೆ – ವೆಬ್ 1.0 ರಿಂದ ಇಂದಿನ ಕಾಲದವರೆಗೆ. ಆದರೆ, AI ಕ್ರಾಂತಿಗೆ ಜಗತ್ತಿನಲ್ಲಿ ಎಲ್ಲಕ್ಕಿಂತ ಹೆಚ್ಚಿನ ಶಕ್ತಿಯಿದೆ ಎಂದು ನಂಬುತ್ತೇನೆ ಎಂದು ಅವರು ಹೇಳಿದರು.
ಸೆರ್ಗೆ ಬ್ರಿನ್‌ನಂತಹ ತಂತ್ರಜ್ಞಾನ ನಿಪುಣರು ಮತ್ತೆ ಗೂಗಲ್‌ಗೆ ಮರಳಿರುವುದು, ಈಗಿನ AI ಯುಗದ ಮಹತ್ವವನ್ನು ತೋರಿಸುತ್ತದೆ. ಅವರು ತಮ್ಮ ಪರಿಪಕ್ವತೆ, ವಿಜ್ಞಾನ ತಿಳಿವಳಿಕೆ, ಮತ್ತು ದೃಷ್ಟಿಕೋನದೊಂದಿಗೆ – ಗೂಗಲ್‌ನ AI ಭವಿಷ್ಯವನ್ನು ಆಕಾರಗೊಳಿಸುತ್ತಿದ್ದಾರೆ.