MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • World News
  • ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮುಚ್ಚಲು ನಿರ್ಧಾರ! ಕಾರಣವೇನು?

ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮುಚ್ಚಲು ನಿರ್ಧಾರ! ಕಾರಣವೇನು?

ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (DXB) ಮುಂದಿನ 10 ವರ್ಷಗಳಲ್ಲಿ ಮುಚ್ಚಲಾಗುತ್ತಿದೆ. ಎಲ್ಲಾ ವಿಮಾನಗಳನ್ನು ಅಲ್ ಮಕ್ತೌಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (DWC)ಗೆ ವರ್ಗಾಯಿಸಲಾಗುತ್ತದೆ. DXB ಸುತ್ತಮುತ್ತಲಿನ ಜಾಗದ ಕೊರತೆ ಮತ್ತು ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆ ಇದಕ್ಕೆ ಪ್ರಮುಖ ಕಾರಣ.

2 Min read
Gowthami K
Published : May 08 2025, 06:18 PM IST
Share this Photo Gallery
  • FB
  • TW
  • Linkdin
  • Whatsapp
16

ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (DXB) ಇತ್ತೀಚೆಗೆ  ಅತ್ಯಂತ ಹೆಚ್ಚು ಬ್ಯುಸಿಯಾಗಿರುವ, ಜಗತ್ತಿನ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಒಂದಾಗಿತ್ತು. ಆದರೆ ಇದನ್ನು ಮುಚ್ಚಲಾಗುತ್ತಿದೆ. ಮುಂದಿನ 10 ವರ್ಷಗಳಲ್ಲಿ ಇದನ್ನು ಸಂಫೂರ್ಣವಾಗಿ ಮುಚ್ಚಲಾಗುತ್ತಿದೆ ಎಂಬುದು ಈಗ ದೊಡ್ಡ ಸುದ್ದಿಯಾಗಿದೆ. ಅದಕ್ಕೆ ಕಾರಣ 2034ರೊಳಗಾಗಿ ಎಲ್ಲಾ ಪ್ರಯಾಣಿಕ ಹಾಗೂ ಸರಕು ವಿಮಾನಗಳನ್ನು ದುಬೈದ ದಕ್ಷಿಣ ಭಾಗದಲ್ಲಿರುವ ಅಲ್ ಮಕ್ತೌಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (DWC) ಕಡೆಗೆ ವರ್ಗಾಯಿಸಲಾಗುತ್ತದೆ.

26

ಮುಚ್ಚಲು ಕಾರಣವೇನು?
ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಈಗ ತುಂಬಾ ಜನನಿಬಿಡವಾಗಿದೆ. 2024ರಲ್ಲಿ ಸುಮಾರು 92.3 ಮಿಲಿಯನ್ ಜನರು ಈ ವಿಮಾನ ನಿಲ್ದಾಣವನ್ನು ಬಳಸಿದ್ದಾರೆ. ನಿಲ್ದಾಣದ ಸುತ್ತಮುತ್ತಲು ಮನೆಗಳು, ಇತರ ಪ್ರದೇಶಗಳು ಮತ್ತು ಹೆದ್ದಾರಿ ನಿರ್ಬಂಧಗಳು ಇದ್ದುದರಿಂದ, ಮತ್ತಷ್ಟು ವಿಸ್ತಾರ ಮಾಡಲು ಸಾಧ್ಯವಿಲ್ಲ. DWC ಈಗಾಗಲೇ ಆರಂಭವಾಗಿದೆ, ಆದರೆ ಈಗ ಅದು ಸಾಮಾನ್ಯವಾಗಿ ಸರಕು ಸಾಗಣೆಗಾಗಿ ಮಾತ್ರ ಬಳಸಲಾಗುತ್ತಿದೆ.
 

Related Articles

Related image1
ಭಾರತದ ಹಲವು ವಿಮಾನ ನಿಲ್ದಾಣ ಕ್ಲೂಸ್‌ , ಬೆಂಗಳೂರಲ್ಲಿ 29 ವಿಮಾನಗಳು ರದ್ದು
Related image2
ಲಾಹೋರ್‌ನಲ್ಲಿ ಸರಣಿ ಸ್ಫೋಟ, ಕಂಗೆಟ್ಟ ಪಾಕಿಸ್ತಾನ
36

ದೊಡ್ಡ ಯೋಜನೆ, ಭಾರಿ ವೆಚ್ಚ:
ಈ ಯೋಜನೆಯು ಸುಮಾರು 35 ಶತಕೋಟಿ ಡಾಲರ್ ವೆಚ್ಚದ ದೊಡ್ಡ ಯೋಜನೆಯಾಗಿದೆ. ಅಲ್ ಮಕ್ತೌಮ್ ಅಂತರರಾಷ್ಟ್ರೀಯ ವಿಮಾನ  ನಿಲ್ದಾಣವನ್ನು ಪ್ರತಿ ವರ್ಷ 260 ಮಿಲಿಯನ್ (26 ಕೋಟಿ) ಜನ ಪ್ರಯಾಣಿಕರಿಗೆ ಸೇವೆ ನೀಡುವ ಉದ್ದೇಶದಿಂದ ನಿರ್ಮಿಸಲಾಗುತ್ತಿದೆ. ಇದು ಇಂದಿನ ದುಬೈ ಅಂತರರಾಷ್ಟ್ರೀಯ ವಿಮಾನ  ನಿಲ್ದಾಣಕ್ಕಿಂತ ಮೂರು ಪಟ್ಟು ದೊಡ್ಡದಾಗಿರಲಿದೆ! ಮೊದಲ ಹಂತದ ಕಾಮಗಾರಿ ಪ್ರಾರಂಭವಾಗಿದ್ದು, ಈ ಹಂತದಲ್ಲಿ, ವರ್ಷಕ್ಕೆ 150 ಮಿಲಿಯನ್ ಜನರನ್ನು ಸೇವೆಗೊಳಿಸುವ ಟರ್ಮಿನಲ್ ಕಟ್ಟಲಾಗುತ್ತಿದೆ

46

ಮುಂದಿನ ಯೋಜನೆಯ ಪ್ರಕಾರ, ಹೊಸ ವಿಮಾನ ನಿಲ್ದಾಣದಲ್ಲಿ ಇವುಗಳಿರುತ್ತವೆ
5 ರನ್‌ವೇಗಳು (ವಿಮಾನ ಇಳಿಯಲು-ಹಾರಲು)
400 ಗೇಟ್‌ಗಳು
260 ಮಿಲಿಯನ್ ಜನರಿಗೆ ಸೇವೆ ನೀಡುವ ಸಾಮರ್ಥ್ಯ
ನೂತನ, ಅತಿದೊಡ್ಡ ಟರ್ಮಿನಲ್ 2032 ರಲ್ಲಿ ಓಪನ್  
ಈ ಯೋಜನೆಯ ಸಂಪೂರ್ಣ ಅಭಿವೃದ್ಧಿ 2050 ರೊಳಗಾಗಿ ಪೂರ್ಣ
ಡಿಜಿಟಲ್ ಚೆಕ್-ಇನ್ ವ್ಯವಸ್ಥೆ
ವೇಗವಾದ ಸಂಪರ್ಕ ವ್ಯವಸ್ಥೆ
 

56

ಹಳೆಯ DXB ಮುಂದೆ ಏನಾಗುತ್ತದೆ?
DXB ವಿಮಾನ ನಿಲ್ದಾಣ 1960ರಲ್ಲಿ ಆರಂಭವಾಯಿತು. ಆದರೆ, ಹೊಸ ವಿಮಾನ ನಿಲ್ದಾಣ DWC ಪೂರ್ಣವಾಗಿ ಸಜ್ಜಾಗುತ್ತಿದ್ದಂತೆ, DXB ತನ್ನ ಕಾರ್ಯಭಾರವನ್ನು ಸಂಪೂರ್ಣವಾಗಿ ನಿಲ್ಲಿಸಲಿದೆ. ಆಗ ಅದರ ಸುತ್ತಲಿನ ಜಾಗವನ್ನು ರಿಯಲ್ ಎಸ್ಟೇಟ್ (ಆಸ್ತಿ ವ್ಯಾಪಾರ) ಉದ್ದೇಶಕ್ಕಾಗಿ ಬಳಸಲಾಗಬಹುದು.


 

66

 ಯುಕೆ ಪ್ರಯಾಣಿಕರ ಮೇಲೆ ಪರಿಣಾಮ:
ದುಬೈ ಯುಕೆ ಜನರಿಗೆ ಬಹಳ ಜನಪ್ರಿಯ ರಜೆ ತಾಣವಾಗಿದೆ. ಪ್ರತಿದಿನ ಸುಮಾರು 17,000 ಯುಕೆ ನಿವಾಸಿಗಳು ದುಬೈಗೆ ಬರುತ್ತಾರೆ. ಪ್ರಸ್ತುತ ಎಮಿರೇಟ್ಸ್, ಬ್ರಿಟಿಷ್ ಏರ್‌ವೇಸ್‌ಗಳು DXB ನಿಂದ ವಿಮಾನಗಳನ್ನು ನಿರ್ವಹಿಸುತ್ತಿವೆ. ಆದರೆ, ನಿಧಾನವಾಗಿ ಎಲ್ಲಾ ಸೇವೆಗಳನ್ನು DWCಗೆ ಸ್ಥಳಾಂತರಿಸಲಾಗುತ್ತದೆ. 

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ವಿಮಾನ ನಿಲ್ದಾಣ
ಅಂತರರಾಷ್ಟ್ರೀಯ ಸುದ್ದಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved