MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • World News
  • ಜಾಗತಿಕ ತಾಪಮಾನ ಏರಿಕೆ 19ನೇ ಶತಮಾನದಲ್ಲಿ ಶುರುವಾಯ್ತಾ? ಅಧ್ಯಯನ ಬಿಚ್ಚಿಟ್ಟ ಶಾಕಿಂಗ್ ಸಂಗತಿ!

ಜಾಗತಿಕ ತಾಪಮಾನ ಏರಿಕೆ 19ನೇ ಶತಮಾನದಲ್ಲಿ ಶುರುವಾಯ್ತಾ? ಅಧ್ಯಯನ ಬಿಚ್ಚಿಟ್ಟ ಶಾಕಿಂಗ್ ಸಂಗತಿ!

ಹವಾಮಾನ ಬದಲಾವಣೆಯ ಮೇಲೆ ಮಾನವನ ಪ್ರಭಾವ 19ನೇ ಶತಮಾನದ ಅಂತ್ಯದಲ್ಲಿಯೇ ಆರಂಭವಾಗಿದ್ದು, ಜಾಗತಿಕ ತಾಪಮಾನ ಏರಿಕೆಯ ಸೂಚನೆಗಳು ಕಾರುಗಳ ಬಳಕೆಗೂ ಮುನ್ನವೇ ಕಂಡುಬಂದಿದ್ದವು ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ. ಕೈಗಾರಿಕಾ ಕ್ರಾಂತಿಯ ಪ್ರಭಾವ ಹವಾಮಾನದ ಮೇಲೆ ಆರಂಭಿಕ ಹಂತದಲ್ಲಿಯೇ ಗಮನಾರ್ಹವಾಗಿತ್ತು.

2 Min read
Gowthami K
Published : Jun 17 2025, 09:22 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Getty

ಇತ್ತೀಚೆಗೆ ನಡೆದ ಅಧ್ಯಯನವೊಂದು, ಹವಾಮಾನ ಬದಲಾವಣೆಯ (climate change) ಮೇಲೆ ಮಾನವ ಕ್ರಿಯೆಗಳ ಪ್ರಭಾವವು 19ನೇ ಶತಮಾನದ ಅಂತ್ಯದಲ್ಲಿಯೇ ಸುಮಾರು 1885ರ ವೇಳೆಗೆ ಆರಂಭವಾಗಿತ್ತು ಎಂಬ ಶಾಕಿಂಗ್ ವಿಚಾರವನ್ನು ಬಹಿರಂಗಪಡಿಸಿದೆ. ವಿಶೇಷವಾಗಿ, ಜಾಗತಿಕ ತಾಪಮಾನ (global warming ) ಏರಿಕೆಯ ಸ್ಪಷ್ಟ ಸೂಚನೆಗಳು ಅನಿಲ ಚಾಲಿತ ಕಾರುಗಳ ವ್ಯಾಪಕ ಬಳಕೆಗೆ ಮುಂಚೆಯೇ ಕಾಣಿಸಿಕೊಂಡಿದ್ದವು. ಇದನ್ನು ವಿಜ್ಞಾನಿಗಳು ಈ ಹಿಂದೆ ಊಹಿಸಿದ್ದಕ್ಕಿಂತ ಹಲವು ದಶಕಗಳ ಹಿಂದಿನ ಬೆಳವಣಿಗೆ ಎಂದು ಪರಿಗಣಿಸಬಹುದು.

26
Image Credit : Google

ಈ ಅಧ್ಯಯನವು ಕೈಗಾರಿಕೀಕರಣದ ಪ್ರಭಾವವನ್ನು ಪುನರ್ ವಿಮರ್ಶೆ ಮಾಡುತ್ತದೆ. ಪಳೆಯುಳಿಕೆ ಇಂಧನಗಳ ದಹನದಿಂದ ಉಂಟಾಗುವ ಹಸಿರುಮನೆ ಅನಿಲಗಳು, ವಿಜ್ಞಾನಿಗಳು ಈಗಾಗಲೇ ಊಹಿಸಿದ್ದಕ್ಕಿಂತ ಬಹಳ ಹಿಂದೆ, ವಾತಾವರಣದ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದವು ಎಂಬುದನ್ನು ಇದು ತೋರಿಸುತ್ತದೆ. ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ (PNAS) ವಿಜ್ಞಾನ ಜರ್ನಲ್‌ನಲ್ಲಿ ಈ ಅಧ್ಯಯನ ಪ್ರಕಟವಾಗಿದೆ. ಕೈಗಾರಿಕಾ ಕ್ರಾಂತಿ ಆರಂಭವಾದ ಕೇವಲ 25 ವರ್ಷಗಳ ನಂತರವೇ, ವಾತಾವರಣದ ಮೇಲ್ನೋಟದಲ್ಲಿ ಮಾನವ ಚಟುವಟಿಗಳ ಪ್ರಭಾವ (human-caused climate change) ಸ್ಪಷ್ಟವಾಗುತ್ತಿತ್ತು ಎಂದು ಅಧ್ಯಯನದಿಂದ ತಿಳಿದುಬರುತ್ತದೆ.

Related Articles

Related image1
ಬೇಸಿಗೆ ಕಾಲದಲ್ಲಿ ಫ್ರಿಜ್‌ನ ತಾಪಮಾನ ಎಷ್ಟಿರಬೇಕು? ಇಲ್ಲಿದೆ ನೋಡಿ ಉತ್ತರ
Related image2
50 ಡಿಗ್ರಿಗೆ ತಲುಪಲಿದೆ ಪಾಕ್‌ನ ತಾಪಮಾನ, ಇದು ಜಗತ್ತಿನಲ್ಲೇ ಹೆಚ್ಚು!
36
Image Credit : Getty

ಕಾರುಗಳ ಯುಗಕ್ಕೂ ಮುಂಚೆ ಹವಾಮಾನ ಬದಲಾವಣೆ ಆರಂಭ!

ಮಾನವನಿಂದ ತಾಪಮಾನ ಏರಿಕೆಯ ಆರಂಭಿಕ ಸಂಕೇತಗಳನ್ನು ಗುರುತಿಸಲು, ಸಂಶೋಧಕರು ಐತಿಹಾಸಿಕ ತಾಪಮಾನ ದಾಖಲೆಗಳು, ಹವಾಮಾನ ಮಾದರಿಗಳು ಮತ್ತು ವಾಯುಮಂಡಲದ ಎರಡನೇ ಪದರದ ಅಧ್ಯಯನವನ್ನು ಆಧಾರವನ್ನಾಗಿ ಮಾಡಿಕೊಂಡಿದ್ದಾರೆ. ಹಳೆಯ ದಾಖಲೆಗಳ ಜೊತೆಗೆ, ಆಧುನಿಕ ಹವಾಮಾನ ಮಾದರಿಗಳು ಹಾಗೂ ಪ್ರಬಲ ಕಂಪ್ಯೂಟರ್ ಅನಾಲಿಸಿಸ್‌ಗಳನ್ನು ಬಳಸಿದ್ದಾರೆ. ಅವರ ಅಂಕಿಅಂಶಗಳ ಪ್ರಕಾರ, 1885ರ ವೇಳೆಗೆ ಹಸಿರುಮನೆ ಅನಿಲಗಳು (Greenhouse gases) ವಾತಾವರಣದ ಮೇಲ್ಭಾಗವನ್ನು ತಂಪು ಮಾಡುತ್ತಿರುವುಗಳು ಕಂಡುಬಂದಿದೆ – ಇದು ಜಾಗತಿಕ ತಾಪಮಾನ ಹೆಚ್ಚಳದ ಪ್ರಾರಂಭದ ಪ್ರಮುಖ ಸೂಚಕ.

46
Image Credit : Google

ವಾಯುಮಂಡಲದ ತಂಪಾಗಿಸುವಿಕೆ:

ಹೆಚ್ಚು ಗಮನಾರ್ಹ ಸಂಗತಿಯೆಂದರೆ, ಈ ಎಲ್ಲಾ ಬದಲಾವಣೆಗಳು ಗ್ಯಾಸ್‌ ಕಾರುಗಳ ಆವಿಷ್ಕಾರಕ್ಕೂ ಮೊದಲು ಸಂಭವಿಸುತ್ತಿದ್ದವು. ವಿಜ್ಞಾನಿಗಳ ನಿಖರವಾದ ಲೆಕ್ಕಾಚಾರದ ಪ್ರಕಾರ, 1860ರಿಂದ 1899ರ ನಡುವೆ ಕೇವಲ 10 ppm (ಭಾಗಗಳು ಪ್ರತಿ ಮಿಲಿಯನ್) ಕಾರ್ಬನ್ ಡೈಆಕ್ಸೈಡ್‌ನ ಹೆಚ್ಚಳವೂ ಹವಾಮಾನದಲ್ಲಿ ಸ್ಪಷ್ಟ ಬದಲಾವಣೆ ತರುವಷ್ಟು ಸಾಕಾಗಿತ್ತು. ಹಸಿರುಮನೆ ಅನಿಲಗಳ ವಿಸರ್ಜನೆ ಕೆಳಗಿನ ವಾತಾವರಣವನ್ನು (ಟ್ರೋಪೋಸ್ಫಿಯರ್) ಬೆಚ್ಚಗಾಗಿಸಲು ಕಾರಣವಾದರೂ, ಇವು ವಾಯುಮಂಡಲದ ಮೇಲ್ಭಾಗವನ್ನು (ಸ್ಟ್ರಾಟೋಸ್ಪಿಯರ್‌) ತಂಪುಮಾಡಲು ಸಹ ಕಾರಣವಾಗಬಹುದು. PNAS ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಈಗಾಗಲೇ 1885ರ ವೇಳೆಗೆ ವಾಯುಮಂಡಲದಲ್ಲಿ ಮಾನವ ಚಟುವಟಿಕೆಗಳಿಂದ ಉಂಟಾದ ತಂಪಾಗುವ ಸಂಕೇತಗಳು ಗೋಚರವಾಗುತ್ತಿದ್ದವೆಂದು ಸಂಶೋಧಕರು ಪತ್ತೆಹಚ್ಚಿದ್ದಾರೆ.

56
Image Credit : Getty

ಕೇವಲ ಕಾರುಗಳು ಅಲ್ಲ, ಕೈಗಾರಿಕಾ ಕ್ರಾಂತಿಯ ಪ್ರಭಾವ:

1700ರ ದಶಕದ ಮಧ್ಯಭಾಗದಲ್ಲಿ ಆರಂಭವಾದ ಕೈಗಾರಿಕಾ ಕ್ರಾಂತಿ, ಪಳೆಯುಳಿಕೆ ಇಂಧನದ ಬಳಕೆಯಲ್ಲಿ ದೊಡ್ಡ ಮಟ್ಟದ ಏರಿಕೆಗೆ ಕಾರಣವಾಯಿತು. ಈ ಕ್ರಾಂತಿಯು ಪ್ರಾರಂಭಿಕ ಹವಾಮಾನ ಬದಲಾವಣೆ ಮತ್ತು ತಾಪಮಾನ ಏರಿಕೆಗೆ ಪ್ರಮುಖ ಕಾರಣವೆಂದು ಸಂಶೋಧಕರು ಗುರುತಿಸಿದ್ದಾರೆ. ಅನಿಲ ಚಾಲಿತ ಕಾರುಗಳ ವ್ಯಾಪಕ ಬಳಕೆ ಇತ್ತೀಚಿನ ಬೆಳವಣಿಗೆಯಾಗಿದ್ದರೂ, ಕಲ್ಲಿದ್ದಲು ಆಧಾರಿತ ಕಾರ್ಖಾನೆಗಳಂತಹ ಕೈಗಾರಿಕೀಕರಣದ ಪ್ರಾರಂಭಿಕ ಹಂತಗಳೇ ಈಗಾಗಲೇ ಹವಾಮಾನದ ಮೇಲೆ ಸ್ಪಷ್ಟ ಪರಿಣಾಮ ಬೀರುತ್ತಿದ್ದವು ಎಂಬುದನ್ನು ಅಧ್ಯಯನ ಸ್ಪಷ್ಟವಾಗಿ ಕಂಡುಕೊಂಡಿದೆ. ವಾಹನಗಳ ಬಳಕೆ ಮತ್ತು ಇತರೆ ಆಧುನಿಕ ತಂತ್ರಜ್ಞಾನಗಳು ವ್ಯಾಪಕವಾಗಿ ಬಳಸಲಾಗುವ ಮೊದಲೇ, ಹವಾಮಾನ ವ್ಯವಸ್ಥೆಯ ಮೇಲೆ ಮಾನವ ಚಟುವಟಿಕೆಗಳ ಪ್ರಭಾವ ಸ್ಥಿರವಾಗಿ ಪ್ರಾರಂಭವಾಗಿತ್ತು ಎಂಬುದನ್ನು ಈ ಅಧ್ಯಯನದ ಸಂಶೋಧನೆಗಳು ದೃಢಪಡಿಸುತ್ತವೆ.

66
Image Credit : Getty

ಬಹಳ ಹಿಂದೆಯೇ ಮಾನವನ ಹಸ್ತಕ್ಷೇಪ

ವುಡ್ಸ್ ಹೋಲ್ ಸಾಗರಶಾಸ್ತ್ರ ಸಂಸ್ಥೆಯ ಹವಾಮಾನ ತಜ್ಞ ಡಾ. ಬೆನ್ ಸ್ಯಾಂಟರ್ ಅವರು, ಈ ಫಲಿತಾಂಶಗಳು ತಮ್ಮನ್ನು ನಿಜಕ್ಕೂ ಆಶ್ಚರ್ಯಚಕಿತರನ್ನಾಗಿ ಮಾಡಿದವು ಎಂದು ತಿಳಿಸಿದ್ದಾರೆ. “1885ರ ಹೊತ್ತಿಗೆ ಮಾನವ ಚಟುವಟಿಯ ತೊಡೆಯನ್ನು ವಾತಾವರಣದ ಮೇಲಿನ ಪದರದಲ್ಲೇ ಗುರುತಿಸಲು ಸಾಧ್ಯವಾಯಿತು ಎಂಬುದು ನನಗೆ ಅನಿರೀಕ್ಷಿತ. ಆ ಕಾಲದಲ್ಲಿ ಇಂತಹ ತಂತ್ರಜ್ಞಾನಗಳಿದ್ದಿದ್ದರೆ, ನಾವು ಇದನ್ನು ಇಷ್ಟು ಬೇಗವೇ ಕಾಣಬಹುದಿತ್ತು,” ಎಂದು ಅವರು ಸುದ್ದಿಗಾರರಿಗೆ ಹೇಳಿದರು. ಹವಾಮಾನ ಬದಲಾವಣೆಯ ಇತಿಹಾಸದಲ್ಲಿ ಈ ಅಧ್ಯಯನ ಬಹುಮುಖ್ಯ ಸತ್ಯಗಳನ್ನು ಬೆಳಕಿಗೆ ತಂದಿದೆ. ಮಾನವನ ಹಸ್ತಕ್ಷೇಪ ನಿಜಕ್ಕೂ ಆರಂಭವಾಗಿದ್ದು ಬಹಳ ಹಿಂದೆಯೇ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಅಂತರರಾಷ್ಟ್ರೀಯ ಸುದ್ದಿ
ಸುದ್ದಿ
ಪರಿಸರ ಮಾಲಿನ್ಯ
ಪರಿಸರ ಸಂರಕ್ಷಣೆ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved