ಸಿಗಲಿಲ್ಲ ಸಿಗರೇಟ್, ಕಾಲ್ನಡಿಗೆಯಲ್ಲೇ ಮತ್ತೊಂದು ದೇಶಕ್ಕೆ ಹೋದ!

First Published 8, Apr 2020, 5:51 PM

ಇಡೀ ವಿಶ್ವವೇ ಸದ್ಯ ಕೊರೋನಾ ಹಾವಳಿಗೆ ತತ್ತರಿಸಿದೆ. ಆದರೆ ಈ ವೈರಸ್ ತಡೆಗಟ್ಟಲು ಯಾವುದೇ ಲಸಿಕೆ ಕಂಡು ಹಿಡಿಯದಿರುವುದರಿಂದ ಸದ್ಯ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲೂ ಲಾಕ್‌ಡೌನ್ ಘೋಷಿಸಲಾಗಿದೆ. ಜನರ ಬಳಿ ತಮ್ಮ ಮನೆಯಲ್ಲೇ ಉಳಿದುಕೊಳ್ಳುವಂತೆ ಮನವಿ ಮಾಡಲಾಗುತ್ತಿದೆ. ಜನರು ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಅತಿ ಅಗತ್ಯ ಕೆಲಸವಿದ್ದರಷ್ಟೇ ಹೊರ ಬರುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಫ್ರಾನ್ಸ್‌ನಲ್ಲಿ ನಡೆದ ಘಟನೆ ಬಹುತೇಕರನ್ನು ಅಚ್ಚರಿಗೀಡು ಮಾಡಿದೆ. ಇಲ್ಲೊಬ್ಬ ವ್ಯಕ್ತಿ ಸಿಗರೇಟ್‌ಗಾಗಿ ತನ್ನ ದೇಶದಿಂದ ಕಾಲ್ನಡಿಗೆಯಲ್ಲೇ ಮತ್ತೊಂದು ದೇಶ ತಲುಪಿದ್ದಾನೆ.
 
ಫ್ರಾನ್ಸ್‌ನಲ್ಲಿ ಈವರೆಗೂ 98  ಸಾವಿರಕ್ಕೂ ಅಧಿಕ ಮಂದಿಯಲ್ಲಿ ಕೊರೋನಾ ವೈರಸ್ ಸೋಂಕು ಕಾಣಿಸಿಕೊಂಡಿದೆ. ಇವರಲ್ಲಿ ಸರಿ ಸುಮಾರು ಒಂಭತ್ತು ಸಾವಿರ ಮಂದಿ ಮೃತಪಟ್ಟಿದ್ದಾರೆ.

ಹೀಗಿರುವಾಗ ಈ ದೇಶದಲ್ಲಿ ಲಾಕ್‌ಡೌನ್ ಹೇರಲಾಗಿದ್ದು, ಕಟ್ಟು ನಿಟ್ಟಾಗಿ ಪಾಲಿಸುವಂತೆ ಆದೇಶಿಸಲಾಗಿದೆ.

ಆದರೆ ಈ ಆದೇಶದ ನಡುವೆಯೂ ಇಲ್ಲೊಬ್ಬ ವ್ಯಕ್ತಿ ಕೇವಲ ಸಿಗರೇಟ್‌ಗಾಗಿ ಕಾಲ್ನಡಿಗೆಯಲ್ಲಿ ಮತ್ತೊಂದು ದೇಶ ತಲುಪಿದ್ದಾನೆ.

ಹೌದು ಈ ವ್ಯಕ್ತಿ ಫ್ರಾನ್ಸ್‌ನಿಂದ ಸ್ಪೇನ್‌ಗೆ ತೆರಳಿದ್ದಾನೆ. ಈ ಮೂಲಕ ಮಸಿಗರೇಟ್‌ ಖರೀದಿಸಲು ಮುಂದಾಗಿದ್ದಾನೆ.

ಸ್ಪೇನ್‌ಗೆ ತೆರಳಲು ಈತ ಗುಡ್ಡಗಾಡಿನ ಹಾದಿಯನ್ನು ಆಯ್ಕೆ ಮಾಡಿಕೊಂಡಿದ್ದಾನೆ. ಆದರೆ ಹೀಗೆ ಹೊರಟು ಸ್ಪೇನ್‌ನ ಒಂದು ಹಳ್ಳಿ ತಲುಪಿದಾಗ ಆತನನ್ನು ಹಿಡಿಯಲಾಗಿದೆ. ಆದರೆ ಈ ಹಳ್ಳಿಯಲ್ಲಿ ಕಡಿಮೆ ಬೆಲೆಗೆ ಸಿಗರೇಟ್ ಸಿಗುತ್ತದೆ ಎನ್ನಲಾಗಿದೆ.

ಸ್ಪೇನ್‌ಗೆ ತೆರಳಲು ಈತ ಬಳಸಿಕೊಂಡ ಗುಡ್ಡಗಾಡು ಪ್ರದೇಶ  ಅತ್ಯಂತ ಹೆಚ್ಚು ಚಳಿಯಿಂದ ಕೂಡಿತ್ತು ಎನ್ನಲಾಗಿದೆ. ದಾರಿ ಮಧ್ಯೆ ಆಯಾಸಗೊಂಡಿದ್ದ ಈತ ಬಹಳ ಸಮಯ ವಿಶ್ರಾಂತಿ ಪಡೆದು ಮತ್ತೆ ತನ್ನ ಪ್ರಯಾಣ ಆರಂಭಿಸಿದ್ದ  ಎನ್ನಲಾಗಿದೆ.

ಹೀಗಿದ್ದರೂ ಆತ ಗುಡ್ಡಗಳ ನಡುವೆ ಸಿಕ್ಕಾಕೊಂಡಿದ್ದು, ಈ ವೇಳೆ ಭದ್ರತಾ ಸಿಬ್ಬಂದಿಗಳ ಕಣ್ಣಿಗೆ ಈತ ಕಾಣಿಸಿಕೊಂಡಿದ್ದಾನೆ. ಆದರೆ ಸಿಬ್ಬಂದಿ ತಲುಪುವಷ್ಟರಲ್ಲಿ ಆತ ಪ್ರಜ್ಞೆತಪ್ಪಿ ನಾಲೆಗೆ ಬಿದ್ದಿದ್ದಾನೆ.

ಅಲ್ಲಿಂದ ಆತನನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ. ಬಳಿಕ ಲಾಕ್‌ಡೌನ್ ಉಲ್ಲಂಘಿಸಿದ ಹಾಗೂ ಅಕ್ರಮವಾಗಿ ಗಡಿ ದಾಟಿದ ಪ್ರಕರಣ ಸಂಬಂಧ ಕೇಸ್ ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ.

ಆತನನ್ನು ಮರಳಿ ಫ್ರಾನ್ಸ್‌ಗೆ ಕರೆದೊಯ್ಯಲಾಗಿದ್ದು, ಘಟನೆ ಮಾಹಿತಿ ಪಡೆದ ಬಳಿಕ ಸಿಗರೇಟ್‌ಗಾಗಿ ಆತ ಇಷ್ಟೆಲ್ಲಾ ಮಾಡಿದ ಎಂದು ತಿಳಿದ ಎಲ್ಲರೂ ಅಚ್ಚರಿಗೀಡಾಗಿದ್ದಾರೆ.

ಇತ್ತ ಜನರು ಜೀವ ಉಳಿಸಿಕೊಳ್ಳಲು ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರೆ, ಈ ವ್ಯಕ್ತಿ ಕೇವಲ ಸಿಗರೆಟ್‌ಗಾಗಿ ಬೇರೆ ದೇಶಕ್ಕೆ ಕಾಲ್ನಡಿಗೆಯಲ್ಲಿ ತೆರಳಿರುವುದು ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ.

loader