MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • World News
  • ಮತ್ತೊಂದು ರಾಯಲ್‌ ಡಿವೋರ್ಸ್? ತಾಯಿ ಡಯಾನಾ ವಿಚ್ಚೇದನದ ವಕೀಲರನ್ನೇ ನೇಮಿಸಿಕೊಂಡ ಯುವರಾಜ ವಿಲಿಯಂ!

ಮತ್ತೊಂದು ರಾಯಲ್‌ ಡಿವೋರ್ಸ್? ತಾಯಿ ಡಯಾನಾ ವಿಚ್ಚೇದನದ ವಕೀಲರನ್ನೇ ನೇಮಿಸಿಕೊಂಡ ಯುವರಾಜ ವಿಲಿಯಂ!

ಯುವರಾಜ ವಿಲಿಯಂ ಮತ್ತು ಕೇಟ್ ಮಿಡ್ಲಟನ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ವದಂತಿಗಳು ಹಬ್ಬಿವೆ. ವಿಲಿಯಂ, ತಾಯಿ ಡಯಾನಾ ಅವರ ವಿಚ್ಛೇದನ ವಕೀಲರನ್ನು ನೇಮಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಇದು ವಿಚ್ಛೇದನದ ಊಹಾಪೋಹಗಳಿಗೆ ಪುಷ್ಠಿ ನೀಡಿದೆ. ಆದರೆ  ಪ್ರಿನ್ಸ್ ಆಪ್ತ ಮೂಲಗಳೂ ತಂದೆಯ ಹಳೆಯ ಆಡಳಿತವನ್ನು ಅನುರಿಸದೆ ತನ್ನದೇ ಮಾರ್ಗದಲ್ಲಿ ಮುಂದುವರಿಯಲು ನಿರ್ಧರಿಸಿದ್ದಾರೆಂದು ಹೇಳಿದೆ. ವಿಚ್ಚೇದನಕ್ಕೆ ಕಾರಣ ಮಾಡೆಲ್‌ ಎನ್ನಲಾಗ್ತಿದೆ.

3 Min read
Gowthami K
Published : Apr 08 2025, 04:34 PM IST| Updated : Apr 08 2025, 05:24 PM IST
Share this Photo Gallery
  • FB
  • TW
  • Linkdin
  • Whatsapp
17

 ಬ್ರಿಟನ್‌ನ ರಾಜಮನೆತನದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ಮತ್ತೊಂದು ಸುದ್ದಿ ಹೊರಬಿದ್ದಿದೆ. ಕಳೆದ ವರ್ಷದ ಆರಂಭದಲ್ಲಿ ಬ್ರಿಟನ್ ರಾಜನ 3ನೇ ಚಾರ್ಲ್ಸ್ ಗೆ ಕ್ಯಾನರ್‌ ಇರುವುದು ಪತ್ತೆಯಾಗಿತ್ತು. ಇದಕ್ಕೂ ಮೊದಲು ಕೌಟುಂಬಿಕ ಕಲಹದ ಹಿನ್ನೆಲೆ ಚಾರ್ಲ್ಸ್‌ನಿಂದ  ಪುತ್ರ ಪ್ರಿನ್ಸ್ ಹ್ಯಾರಿ  ರಾಜಮನೆತನ ತೊರೆದು ತನ್ನ ಪತ್ನಿ, ನಟಿ ಮೆಘಾನ್ ಹಾಗೂ ಮಕ್ಕಳ ಜೊತೆ ಕ್ಯಾಲಿಫೋರ್ನಿಯಾದಲ್ಲಿ ವಾಸವಿದ್ದಾರೆ. ಆದರೆ ಇದೀಗ ಮತ್ತೊಂದು ಸುದ್ದಿ ಬಂದಿದೆ. ಬ್ರಿಟನ್‌ನ ಯುವರಾಜ ಪ್ರಿನ್ಸ್ ವಿಲಿಯಮ್ಸ್‌ ಮತ್ತು ಯುವರಾಣಿ ಕೇಟ್ ಮಿಡ್ಲಟನ್‌ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಕಳೆದ ಹಲವು ತಿಂಗಳುಗಳಿಂದ ಕೇಳಿಬರುತ್ತಿರುವ ಸುದ್ದಿ.

27

ಇದಕ್ಕೆ ಪೂರಕ ಎಂಬಂತೆ ಈಗ ಪ್ರಿನ್ಸ್ ವಿಲಿಯಂ ತನ್ನ ದಿವಂಗತ ತಾಯಿ ಪ್ರಿನ್ಸೆಸ್ ಡಯಾನಾ ಅವರ ವಿಚ್ಛೇದನ ವಕೀಲರನ್ನು ನೇಮಕ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪ್ರಿನ್ಸ್ ವಿಲಿಯಂ ಮತ್ತು ಕೇಟ್ ಮಿಡಲ್ಟನ್ ಅವರ ವಿಚ್ಛೇದನದ ವದಂತಿಗಳ ಬಗ್ಗೆ ತಿಂಗಳುಗಳ ಕಾಲ ಊಹಾಪೋಹಗಳಿದ್ದು, ಈಗ ನಡೆದಿರುವ ವಕೀಲರ ನೇಮಕ ಇದಕ್ಕೆ ಪುಷ್ಠಿ ನೀಡುವಂತಿದೆ.  ರಾಜಮನೆತನಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಈ ಸುದ್ದಿ ಆಘಾತ ನೀಡಿದೆ. ವರದಿಗಳ ಪ್ರಕಾರ, ಪ್ರಿನ್ಸ್ ವಿಲಿಯಂ ಕಿಂಗ್ ಚಾರ್ಲ್ಸ್ ಅವರ ವಕೀಲರಾದ ಹಾರ್ಬಾಟಲ್ ಮತ್ತು ಲೂಯಿಸ್ ಅವರನ್ನು ತೊರೆದು ಈಗ ಮಿಶ್ಕಾನ್ ಡಿ ರೇಯಾ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ. 1996 ರಲ್ಲಿ ಆಗಿನ ಪ್ರಿನ್ಸ್ ಚಾರ್ಲ್ಸ್ ಅವರಿಂದ ವಿಚ್ಛೇದನ ಪಡೆದಾಗ ರಾಜಕುಮಾರಿ ಡಯಾನಾಳ ಪರ ವಕಾಲತ್ತು ವಹಿಸಿದ್ದ ಲಂಡನ್ ಮೂಲದ ಸಂಸ್ಥೆಗೆ  ತಮ್ಮ ಮತ್ತು ಅವರ ಕುಟುಂಬದ ಪರವಾಗಿ ಕಾರ್ಯನಿರ್ವಹಿಸಲು ಸೂಚಿಸಿದ್ದಾರೆ.
 

37

2006 ರ ನ್ಯೂಸ್ ಆಫ್ ದಿ ವರ್ಲ್ಡ್ ಫೋನ್ ಹ್ಯಾಕಿಂಗ್ ಹಗರಣದ ಸಂದರ್ಭದಲ್ಲಿ ಹಾರ್ಬಾಟಲ್ & ಲೂಯಿಸ್ ಬ್ರಿಟಿಷ್ ರಾಜಮನೆತನದ ಪರ ವಕಾಲತ್ತು ವಹಿಸಿದ್ದರು. ಈ ಹಗರಣದಲ್ಲಿ ಪತ್ರಿಕೆಯು ಪ್ರಿನ್ಸ್ ವಿಲಿಯಂ ಮತ್ತು ಪ್ರಿನ್ಸ್ ಹ್ಯಾರಿ ಸೇರಿದಂತೆ ಉನ್ನತ ವ್ಯಕ್ತಿಗಳ ಧ್ವನಿಮೇಲ್‌ಗಳನ್ನು ಗುರಿಯಾಗಿಸಿಕೊಂಡು ಅಕ್ರಮ ಫೋನ್ ಹ್ಯಾಕಿಂಗ್‌ನಲ್ಲಿ ಭಾಗವಹಿಸಿದೆ ಎಂದು ಸುದ್ದಿಯಾಗಿತ್ತು. ಬಳಿಕ ಈ ಪ್ರಕರಣವನ್ನು ಮುಚ್ಚಿಹಾಕಲಾಗಿತ್ತು.

47

 ಕಿಂಗ್‌ ಚಾರ್ಲ್ಸ್ ಅವರ ದೀರ್ಘಕಾಲದ ಕಾನೂನು ತಂಡವಾದ ಹಾರ್ಬಾಟಲ್ & ಲೂಯಿಸ್ ಮತ್ತು ಅದರ ಪಾಲುದಾರ ಗೆರಾರ್ಡ್ ಟೈರೆಲ್  ಅನ್ನು ಯುವರಾಜ ಪ್ರಿನ್ಸ್ ವಿಲಿಯಂ ದೂರ ಇಟ್ಟಿದ್ದು,  ಪ್ರಿನ್ಸ್ ಚಾರ್ಲ್ಸ್ ಅವರಿಂದ ವಿಚ್ಛೇದನ ಪಡೆದಾಗ ರಾಜಕುಮಾರಿ ಡಯಾನಾಳನ್ನು ಪ್ರತಿನಿಧಿಸಿದ್ದ ಮಿಶ್ಕಾನ್ ಡಿ ರೇಯಾ ಎಂಬ ಸಂಸ್ಥೆಯನ್ನು ಆರಿಸಿಕೊಂಡಿದ್ದಾರೆ. ಡಯಾನಾ 36 ವರ್ಷದವಳಿದ್ದಾಗ ಪ್ಯಾರಿಸ್ ಕಾರು ಅಪಘಾತದಲ್ಲಿ ಸಾಯುವ ಒಂದು ವರ್ಷದ  ಮುಂಚೆ ಅಂದರೆ 1996 ರಲ್ಲಿ ಚಾರ್ಲ್ಸ್‌ನಿಂದ ವಿಚ್ಛೇದನ ಪಡೆದಾಗ ಸಂಸ್ಥೆಯ ಉಪ ಅಧ್ಯಕ್ಷ ಮತ್ತು ಡಯಾನಾ ಪರ ವಕೀಲರಾಗಿದ್ದ ಆಂಥೋನಿ ಜೂಲಿಯಸ್ ಅವರನ್ನು ಪ್ರಿನ್ಸ್ ಈಗ ನೇಮಿಸಿಕೊಂಡಿದ್ದಾರೆ.

57

ಮಾತ್ರವಲ್ಲ ಆಂಥೋನಿ ಜೂಲಿಯಸ್ ಯುವರಾಜ ಪ್ರಿನ್ಸ್ ಜೊತೆಗೆ ನಿಕಟ ವೃತ್ತಿಪರ ಸಂಪರ್ಕ ಹೊಂದಿದ್ದರು. ಏಕೆಂದರೆ ಅವರು 2012 ರಲ್ಲಿ ವಿಸರ್ಜನೆಯಾಗುವವರೆಗೂ ಡಯಾನಾ, ಪ್ರಿನ್ಸೆಸ್ ಆಫ್ ವೇಲ್ಸ್ ಸ್ಮಾರಕ ನಿಧಿಯ ಉಪಾಧ್ಯಕ್ಷರಾಗಿದ್ದರು ಮತ್ತು ಮೂಲ ಟ್ರಸ್ಟಿಗಳಲ್ಲಿ ಒಬ್ಬರಾಗಿದ್ದರು. ಯುವರಾಜ ಪ್ರಿನ್ಸ್  ವಿಲಿಯಂ ಅವರ ಅನಿರೀಕ್ಷಿತ ನಡೆ ಕಾನೂನು ವಲಯದಲ್ಲಿ ಚರ್ಚೆಯಾಗಿದೆ.ಬಕಿಂಗ್ಹ್ಯಾಮ್ ಅರಮನೆಯಲ್ಲಿ ತನ್ನ ತಂದೆಗಿಂತ ವಿಭಿನ್ನ ಮಾರ್ಗವನ್ನು ಅನುಸರಿಸಲು ಮುಂದಾಗಿರುವುದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ.

67

 ಮಾಡೆಲ್‌ ಜತೆ ಅಫೇರ್‌ ವಿಚ್ಚೇದನದ ಬಗ್ಗೆ ಚರ್ಚೆ
ಪ್ರಿನ್ಸ್ ವಿಲಿಯಂ ಮತ್ತು ಕೇಟ್ ಮಿಡಲ್ಟನ್ ವಿಚ್ಛೇದನದ ವದಂತಿಗಳು ಹೊಸದೇನಲ್ಲ. 2024 ರಲ್ಲಿ ಗಣನೀಯ ಪ್ರಮಾಣದ ಗಮನ ಸೆಳೆಯಿತು. ಅದಕ್ಕೆ ಕಾರಣ ಬ್ರಿಟನ್‌ನ ಯುವರಾಣಿ ಕೇಟ್ ಮಿಡ್ಲಟನ್‌  ಹಲವು ಸಮಯದಿಂದ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಳ್ಳದೇ ಇರುವ ಕುರಿತು ನಾನಾ ವದಂತಿಗಳು ಹಬ್ಬಲು ಕಾರಣವಾಯ್ತು. ಮಾಜಿ ಮಾಡೆಲ್‌ ರೋಸ್‌ ಹ್ಯಾನ್ಬರಿ ಜೊತೆ ಲವ್ವಿಡವ್ವಿ ನಡೆಸಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿತ್ತು. ಅಮೆರಿಕದ ಖ್ಯಾತ ಲೇಖಕ, ಟೀವಿ ಆ್ಯಂಕರ್‌ ಸ್ಟೆಫನ್‌ ಕಾಲಬರ್ಟ್‌  ಈ ಸಂಬಂಧ ಹೇಳಿಕೆ ನೀಡಿದ್ದು, ಬ್ರಿಟನ್‌ನಲ್ಲಿ ಭಾರೀ ಸಂಚಲನಕ್ಕೆ ಕಾರಣವಾಯ್ತು.
 

77

ರೋಸ್‌, ವಿಲಿಯಮ್ಸ್‌ ಮತ್ತು ಕೇಟ್‌ ಇಬ್ಬರಿಗೂ ಸ್ನೇಹಿತೆ. ಒಂದು ಸಮಯದಲ್ಲಿ ನೆರೆಮನೆಯಾಗಿದ್ದಾಕೆ. ವಿಲಯಮ್ಸ್‌ ಮತ್ತು ರೋಸ್‌ ನಡುವೆ ಸಂಬಂಧ ಕುರಿತು 2019ರಲ್ಲೇ ಸುದ್ದಿ ಹಬ್ಬಿತ್ತಾದರೂ ಬಳಿಕ ತಣ್ಣಗಾಗಿತ್ತು.  ಬಳಿಕ 2024 ರಲ್ಲಿ ಜೋಡಿ ಮತ್ತೆ ಕದ್ದುಮಚ್ಚಿ ಪ್ರೇಮ ಮುಂದುವರೆಸಿದೆ ಎಂದು ಸುದ್ದಿಯಾಯ್ತು. ಇದು ವಿಲಿಯಮ್ಸ್‌ ಮತ್ತು ಕೇಟ್‌ ದಾಂಪತ್ಯದಲ್ಲಿ ಬಿರುಕಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
 
 

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ವಿಚ್ಛೇದನ
ಅಂತರರಾಷ್ಟ್ರೀಯ ಸುದ್ದಿ
ಸಂಬಂಧಗಳು
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved