20 ವರ್ಷದ ಹಿಂದೆ ನಾಪತ್ತೆಯಾಗಿದ್ದ ದುಬೈನ ರಾಜಕುಮಾರಿ, ಸಿಕ್ತು ಮಹತ್ವದ ಸುಳಿವು!

First Published Feb 26, 2021, 5:09 PM IST

ದುಬೈ ದೊರೆ ಮೊಹಮ್ಮದ್ ಬಿನ್ ರಶೀದ್ ಅಲ್-ಮಖ್ದೂಮ್ ಮಗಳು ರಾಜಕುಮಾರಿ ಲತೀಫಾ ಸದ್ಯ ಭಾರೀ ಚರ್ಚೆಯಲ್ಲಿದ್ದಾರೆ. ತಂದೆಯ ಬಂಧನದಲ್ಲಿದ್ದ ಇವರ ವಿಡಿಯೋ ವೈರಲ್ ಆದಾಗಿನಿಂದ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದಾರೆ. ಹೀಗಿರುವಾಗಲೇ ಲತೀಫಾರವರು ಬ್ರಿಟನ್ ಪೊಲೀಸರ ಬಳಿ ಇಪ್ಪತ್ತು ವರ್ಷಗಳ ಹಿಂದೆ ಕಿಡ್ನಾಪ್ ಆಗಿರುವ ತನ್ನ ಅಕ್ಕ ರಾಜಕುಮಾರಿ ಶಂಸಾ ಪ್ರಕರಣದ ತನಿಖೆ ಆರಂಭಿಸುವಂತೆಯೂ ಮನವಿ ಮಾಡಿಕೊಂಡಿದ್ದಾರೆ. ರಾಜಕುಮಾರಿ ಶಂಸಾ 2000ನೇ ಇಸವಿಯಲ್ಲಿ ಬ್ರಿಟನ್ ರಾಜಧಾನಿ ಲಂಡನ್‌ನ ಕೇಂಬ್ರಿಡ್ಜ್ ಸ್ಟ್ರೀಟ್‌ನಿಂದ ನಾಪತ್ತೆಯಾಗಿದ್ದರು.