ಈ ಕಾರಣದಿಂದಾಗಿ ಮಹಿಳೆಯರನ್ನು ಹೆಚ್ಚು ಕಾಡುತ್ತೆ ಹಠಾತ್ ಹೃದಯ ಸ್ತಂಭನ
ಪುರುಷರಿಗಿಂತ ಮಹಿಳೆಯರು ಹೃದಯ ಸ್ತಂಭನಕ್ಕೆ ಒಳಗಾಗುಗುವ ಸಾಧ್ಯತೆ ಹೆಚ್ಚಿದೆ. ಅಧಿಕ ರಕ್ತದೊತ್ತಡ, ಋತುಬಂಧ, ಮಧುಮೇಹದಂತಹ ಸಮಸ್ಯೆಗಳು ಹಠಾತ್ ಹೃದಯ ಸ್ತಂಭನದ ಅಪಾಯವನ್ನು ಹೆಚ್ಚಿಸಬಹುದು. ಆದ್ದರಿಂದ ಅವುಗಳನ್ನು ಲಘುವಾಗಿ ತೆಗೆದುಕೊಳ್ಳುವ ತಪ್ಪನ್ನು ಮಾಡಬೇಡಿ.
ಸಡನ್ ಕಾರ್ಡಿಯಾಕ್ ಅರೆಸ್ಟ್ (sudden cardiac arrest) ಪ್ರಪಂಚದಾದ್ಯಂತದ ಜನರು ಹೆಚ್ಚು ಕಾಳಜಿ ವಹಿಸಬೇಕಾದ ವಿಷಯವಾಗಿದೆ. ಈಗ ಎಲ್ಲಾ ವಯಸ್ಸಿನ ಜನರು ಸಹ ಈ ಸಮಸ್ಯೆಯಿಂದ ತೊಂದರೆಗೀಡಾಗುತ್ತಿದ್ದಾರೆ. ಅನಾರೋಗ್ಯಕರ ಆಹಾರ ಮತ್ತು ಜೀವನಶೈಲಿ ಇದರಲ್ಲಿ ದೊಡ್ಡ ಪಾತ್ರ ವಹಿಸುತ್ತಿದೆ.
ಜಾಗತಿಕ ಸಂಶೋಧನೆಯ ಪ್ರಕಾರ, ಹಠಾತ್ ಹೃದಯ ಸ್ತಂಭನದ ಸುಮಾರು 40% ಪ್ರಕರಣಗಳನ್ನು ಮಹಿಳೆಯರಲ್ಲಿ ಕಾಣಬಹುದು ಮತ್ತು ಅವರ ರೋಗಲಕ್ಷಣಗಳು ಸಹ ಸಾಕಷ್ಟು ಭಿನ್ನವಾಗಿವೆ. ಅದಕ್ಕಾಗಿಯೇ ಮಹಿಳೆಯರು ಈ ರೋಗಕ್ಕೆ ಸಂಬಂಧಿಸಿದ ಅಪಾಯಗಳು ಮತ್ತು ಚಿಹ್ನೆಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ.
ಹಠಾತ್ ಹೃದಯ ಸ್ತಂಭನ ಎಂದರೇನು?: ಹಠಾತ್ ಹೃದಯ ಸ್ತಂಭನವು ಹೃದಯ ಬಡಿತವನ್ನು (heartbeat) ನಿಲ್ಲಿಸುವ ಮತ್ತು ರಕ್ತದೊತ್ತಡ ಕಡಿಮೆಯಾಗಲು ಪ್ರಾರಂಭಿಸುವ ಸ್ಥಿತಿಯಾಗಿದೆ. ಇದರಿಂದಾಗಿ ಹೃದಯಕ್ಕೆ ರಕ್ತವನ್ನು ಪಂಪ್ ಮಾಡಲು ಕಷ್ಟವಾಗುತ್ತದೆ. ಇದು ರೋಗಿಗೆ ಉಸಿರಾಟದಲ್ಲಿ ಸಾಕಷ್ಟು ತೊಂದರೆಯನ್ನು ಉಂಟುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ರೋಗಿಯು ಪ್ರಜ್ಞಾಹೀನನಾಗುತ್ತಾನೆ ಮತ್ತು ಸರಿಯಾಗಿ ಚಿಕಿತ್ಸೆ ದೊರೆಯದೇ ಸಾಯುತ್ತಾನೆ.
ಅಧಿಕ ರಕ್ತದೊತ್ತಡ, ಋತುಬಂಧ, ಮಧುಮೇಹದಂತಹ ಸಮಸ್ಯೆಗಳು ಹಠಾತ್ ಹೃದಯ ಸ್ತಂಭನದ ಅಪಾಯವನ್ನು ಹೆಚ್ಚಿಸುತ್ತವೆ ಎಂದು ಮಹಿಳೆಯರು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಆದ್ದರಿಂದ ಈ ಸಮಸ್ಯೆಗಳನ್ನು ಲಘುವಾಗಿ ತೆಗೆದುಕೊಳ್ಳುವ ತಪ್ಪನ್ನು ಮಾಡಬೇಡಿ. ನೀವು ಈ ಯಾವುದೇ ಕಾಯಿಲೆಗಳನ್ನು ಹೊಂದಿದ್ದರೆ, ಹೆಚ್ಚು ಜಾಗರೂಕರಾಗಿರಬೇಕು ಮತ್ತು ಕಾಳಜಿ ವಹಿಸಬೇಕು.
Image: Getty
ಹಠಾತ್ ಹೃದಯ ಸ್ತಂಭನಕ್ಕೆ ಕಾರಣಗಳು ಯಾವುವು?
ಋತುಬಂಧ(menopause): ಋತುಬಂಧವು ಮಹಿಳೆಯರ ಜೀವನದ ಒಂದು ಹಂತವಾಗಿದೆ, ಇದರಲ್ಲಿ ಅನೇಕ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಾಗುತ್ತವೆ. ಹಲವಾರು ಜಾಗತಿಕ ಅಧ್ಯಯನಗಳು ಋತುಬಂಧ ಮತ್ತು ಹೃದಯ ಸ್ತಂಭನ ಸೇರಿದಂತೆ ಹೆಚ್ಚಿದ ಪರಿಧಮನಿಯ ಹೃದಯ ಕಾಯಿಲೆಯ ನಡುವೆ ಬಲವಾದ ಸಂಬಂಧವನ್ನು ಕಂಡುಕೊಂಡಿವೆ. ಋತುಬಂಧದ ಸಮಯದಲ್ಲಿ ಮತ್ತು ನಂತರ, ಮಹಿಳೆಯರು ಅಂತಹ ಅನೇಕ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ, ಇದು ಹಠಾತ್ ಹೃದಯ ಸ್ತಂಭನದ ಅಪಾಯವನ್ನು ಹೆಚ್ಚಿಸುತ್ತೆ. ಅತಿಯಾದ ಒತ್ತಡ, ನಿದ್ರೆಯ ಕೊರತೆ ಮತ್ತು ತೂಕ ಹೆಚ್ಚಾಗುವುದು ಈ ರೋಗಲಕ್ಷಣಗಳಲ್ಲಿ ಕೆಲವು.
ಪಿಸಿಒಡಿ (PCOD): ಪಿಸಿಒಡಿ ಹೊಂದಿರುವ ಅನೇಕ ಮಹಿಳೆಯರು ಇನ್ಸುಲಿನ್ ಪ್ರತಿರೋಧವನ್ನು ಹೊಂದಿರುತ್ತಾರೆ, ಇದು ದೇಹದಲ್ಲಿ ಇನ್ಸುಲಿನ್ ಸಂಗ್ರಹಗೊಳ್ಳಲು ಕಾರಣವಾಗಬಹುದು, ಇದರಿಂದಾಗಿ ರಕ್ತದಲ್ಲಿನ ಗ್ಲೂಕೋಸ್ನ ಸಾಮಾನ್ಯ ಮಟ್ಟವನ್ನು ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ. ಸಂಶೋಧನೆಯ ಪ್ರಕಾರ, ಪಿಸಿಒಎಸ್ ಹೊಂದಿರುವ 35 ಪ್ರತಿಶತದಷ್ಟು ಮಹಿಳೆಯರು ಪ್ರಿ-ಡಯಾಬಿಟಿಸ್ ಹೊಂದಿದ್ದಾರೆ ಮತ್ತು 10 ಪ್ರತಿಶತದಷ್ಟು ಮಹಿಳೆಯರು 40 ವರ್ಷ ವಯಸ್ಸಿನಲ್ಲಿ ಮಧುಮೇಹವನ್ನು ಹೊಂದಿದ್ದಾರೆ.
ಇದಲ್ಲದೆ, ಆಂಡ್ರೊಜೆನ್ಗಳ ಹೆಚ್ಚಿದ ಮಟ್ಟವು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಈ ಹೆಚ್ಚುವರಿ ಇನ್ಸುಲಿನ್ ಕಾರಣದಿಂದಾಗಿ, ತೂಕವು ಹೆಚ್ಚಾಗುತ್ತದೆ ಮತ್ತು "ಗುಡ್ ಕೊಲೆಸ್ಟ್ರಾಲ್" ಅನ್ನು ಕಡಿಮೆ ಮಾಡಬಹುದು. ಇವೆಲ್ಲವೂ ಒಟ್ಟಾಗಿ ಹೃದಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತೆ. ಆದರೆ ಜೀವನಶೈಲಿಯಲ್ಲಿ ಅಗತ್ಯವಾದ ಬದಲಾವಣೆಗಳೊಂದಿಗೆ, ಅದರ ಅಪಾಯವನ್ನು ಕಡಿಮೆ ಮಾಡಬಹುದು.
ಗರ್ಭಾವಸ್ಥೆಯ ಮಧುಮೇಹ (diabetes in pregnancy): ಮಧುಮೇಹದಿಂದಾಗಿ, ಮಹಿಳೆಯರಲ್ಲಿ ಹೃದಯ ಸ್ತಂಭನ ಉಂಟಾದ ಅನೇಕ ಪ್ರಕರಣಗಳಿವೆ. ಇದಕ್ಕೆ ಒಂದು ಕಾರಣವೆಂದರೆ ಗರ್ಭಾವಸ್ಥೆಯ ಮಧುಮೇಹ, ಗರ್ಭಾವಸ್ಥೆಯ ಮಧುಮೇಹವು ಭವಿಷ್ಯದಲ್ಲಿ ಹೃದಯ ಸಮಸ್ಯೆಗಳನ್ನು ಹೇಗೆ ಉಂಟುಮಾಡುತ್ತದೆ ಎಂಬುದನ್ನು ಜಾಗತಿಕ ಅಧ್ಯಯನಗಳು ತಿಳಿಸಿವೆ. ಗರ್ಭಾವಸ್ಥೆಯ ಮಧುಮೇಹ ಹೊಂದಿರುವ ಮಹಿಳೆಯರು ಸಾಮಾನ್ಯ ಮಹಿಳೆಯರಿಗಿಂತ ಹೃದಯಾಘಾತ ಮತ್ತು ಹಠಾತ್ ಹೃದಯ ಸ್ತಂಭನದ 43% ಹೆಚ್ಚಿನ ಅಪಾಯವನ್ನು ಹೊಂದಿದ್ದಾರೆ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ.
ಅಧಿಕ ರಕ್ತದೊತ್ತಡ (high blood pressure): ಅಧಿಕ ರಕ್ತದೊತ್ತಡ ಹೃದಯ ಸ್ತಂಭನದ ಅಪಾಯವನ್ನು ಹೆಚ್ಚಿಸುತ್ತದೆ, ವಿಶೇಷವಾಗಿ ಮಹಿಳೆಯರಲ್ಲಿ ಇದು ಹೆಚ್ಚಿನ ಅಪಾಯವನ್ನುಂಟು ಮಾಡುತ್ತೆ. ಸಾಮಾನ್ಯ ಮಹಿಳೆಯರಿಗಿಂತ ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳಲ್ಲಿ ಹಠಾತ್ ಸಾವಿನ ಅಪಾಯವು 3 ಪಟ್ಟು ಹೆಚ್ಚಾಗಿದೆ.
ಒತ್ತಡ (Stress): ಮಹಿಳೆಯರಲ್ಲಿ ಒತ್ತಡದ ಮಟ್ಟವು ಪುರುಷರಿಗಿಂತ ಸುಮಾರು 50% ಹೆಚ್ಚಾಗಿದೆ. ನೀವು ಹೆಚ್ಚು ಒತ್ತಡ ಅಥವಾ ಆತಂಕದಿಂದ ಬಳಲುತ್ತಿದ್ದರೆ, ಇದರಿಂದಾಗಿ ನೀವು ನಿದ್ರೆ ಮಾಡದಿದ್ದರೆ, ತಿನ್ನಬೇಕು ಎಂದು ಅನಿಸದಿದ್ದರೆ, ತಕ್ಷಣ ಅದರ ಪರಿಹಾರಗಳ ಬಗ್ಗೆ ಗಮನ ಹರಿಸಿ. ಅಗತ್ಯವಿದ್ದರೆ, ತಜ್ಞರ ಸಲಹೆ ಪಡೆಯಿರಿ.