ಹೇಯ್ ನಿಮ್ಮ ಫೋಟೋ ನೋಡಿದೆ, ವ್ಯಾಟ್ಸಾಪ್‌ನಲ್ಲಿ ಈ ರೀತಿಯ ಸಂದೇಶ ಓಪನ್ ಮಾಡಬೇಡಿ
ಹೇಯ್ ನಿಮ್ಮ ಫೋಟೋ ನೋಡಿದೆ, ವ್ಯಾಟ್ಸಾಪ್‌ನಲ್ಲಿ ಈ ರೀತಿಯ ಸಂದೇಶ ಓಪನ್ ಮಾಡಬೇಡಿ, ಮುಖ್ಯವಾಗಿ ನೀವು ವ್ಯಾಟ್ಸಾಪ್‌ನ್ನು ಸಿಸ್ಟಮ್‌ಗೆ ಲಿಂಕ್ ಮಾಡ್ತಿದ್ದೀರಾ? ಘೋಸ್ಟ್ ಫೇರಿಂಗ್ ಸ್ಕ್ಯಾಮ್ ಇದೀಗ ಸದ್ದಿಲ್ಲದೆ ನಡೆಯುತ್ತಿದೆ ಎಚ್ಚರ.

ಘೋಸ್ಟ್ ಪೇರಿಂಗ್ ಸ್ಕ್ಯಾಮ್
ನಿಮ್ಮ ವ್ಯಾಟ್ಸಾಪ್ ಲ್ಯಾಪ್‌ಟಾಪ್ ಅಥವಾ ಸಿಸ್ಟಮ್‌ಗೆ ಪೇರ್ ಮಾಡುತ್ತಿದ್ದೀರಾ? ಅಥವಾ ಕೇವಲ ಮೊಬೈಲ್ ಮಾತ್ರ ಬಳಕೆ ಮಾಡುತ್ತಿದ್ದೀರಾ? ತಕ್ಷಣವೇ ವ್ಯಾಟ್ಸಾಪ್ ಸೆಟ್ಟಿಂಗ್ಸ್ ಚೆಕ್ ಮಾಡಿಕೊಳ್ಳಿ. ನಿಮ್ಮ ವ್ಯಾಟ್ಸಾಪ್ ಎಷ್ಟು ಕಡೆ ಪೇರಿಂಗ್ ಆಗಿದೆ ಅನ್ನೋದು ತಿಳಿದುಕೊಳ್ಳಿ. ನಿಮಗೆ ಗೊತ್ತಿಲ್ಲದೆ ರೀತಿ ಬೇರೆ ಯಾರಾದರೂ ಪೇರಿಂಗ್ ಮಾಡಿದ್ದಾರಾ ಅನ್ನೋದು ಚೆಕ್ ಮಾಡುವುದು ಉತ್ತಮ. ಕಾರಣ ಇದೀಗ ಘೋಸ್ಟ್ ಪೇರಿಂಗ್ ಸ್ಕ್ಯಾಮ್ ಶುರುವಾಗಿದೆ.
ಏನಿದು ಘೋಸ್ಟ್ ಪೇರಿಂಗ್?
ವ್ಯಾಟ್ಸಾಪ್ ಖಾತೆಯನ್ನು ಸಿಸ್ಟಮ್‌ಗೆ ಹೇಗೆ ಲಿಂಕ್ ಮಾಡಲಾಗುತ್ತದೋ, ಅದೇ ರೀತಿ ಸೈಬರ್ ವಂಚಕರು ನಿಮ್ಮ ವ್ಯಾಟ್ಸಾಪ್ ಖಾತೆಯನ್ನು ಅವರ ಲಿಂಕ್ ಅಥವಾ ಪೇರ್ ಮಾಡಲಿದ್ದಾರೆ. ಯಾವುದೇ ಒಟಿಪಿ, ಸ್ಕ್ಯಾನ್, ಪಾಸ್‌ವರ್ಡ್ ಇಲ್ಲದೆ ನಿಮ್ಮ ವ್ಯಾಟ್ಸಾಪ್ ಖಾತೆಯನ್ನು ಸೈಬರ್ ವಂಚರು ಪೇರ್ ಮಾಡುತ್ತಾರೆ. ಇಷ್ಟೇ ಅಲ್ಲ ರಿಯಲ್ ಟೈಮ್‌ನಲ್ಲಿ ನಿಮ್ಮ ಚಾಟ್, ಮಾಹಿತಿ ಅವರಿಗ ಓದಲು ಸಾಧ್ಯವಾಗಲಿದೆ.
ವ್ಯಾಟ್ಸಾಪ್ ಫೋಸ್ಟ್ ಪೇರಿಂಗ್ ಹೇಗೆ ಮಾಡುತ್ತಾರೆ?
ವ್ಯಾಟ್ಸಾಪ್ ಘೋಸ್ಟ್ ಪೇರಿಂಗ್ ಮಾಡುವವ ಸೈಬರ್ ವಂಚಕರು ಮೊದಲು ನಿಮಗೆ ಮೆಸೇಜ್ ಕಳುಹಿಸುತ್ತಾರೆ. ಅನಾಮಕಿ ಹೆಸರು ಅಥವಾ ನಕಲಿ ಹೆಸರಿನಲ್ಲಿ ಮೆಸೇಜ್ ಕಳುಹಿಸುತ್ತಾರೆ. ನಿಮ್ಮ ಫೋಟೋ ಒಂದನ್ನು ಅಥವಾ ನಕಲಿ ಫೋಟೋವನ್ನು ಅದರ ಜೊತೆಗೆ ಒಂದು ಲಿಂಕ್ ಕಳುಹಿಸುತ್ತಾರೆ. ಹೇ ನಿಮ್ಮ ಫೋಟೋ ನಾನು ಈಗಷ್ಟೇ ನೋಡಿದೆ ಎಂದು ಮೆಸೇಜ್ ಹಾಕುತ್ತಾರೆ. ನೀವು ಈ ಫೋಟೋ ನೋಡಿದರೆ ನಿಮ್ಮದೆ ಫೋಟೋ. ಸರಿ ಲಿಂಕ್ ಕ್ಲಿಕ್ ಮಾಡಿದರೆ ನಿಮಗೆ ಗೊತ್ತಿಲ್ಲದೆ, ಯಾವುದೇ ಒಟಿಪಿ ಇಲ್ಲದೆ ನಿಮ್ಮ ವ್ಯಾಟ್ಸಾಪ್ ಖಾತೆ ವಂಚಕರ ಜೊತೆ ಪೇರ್ ಆಗಲಿದೆ.
ಆರಂಭದಲ್ಲೇ ನಿಮ್ಮ ಫೋಟೋ, ಕುಟುಂಬ, ಆಪ್ತರ ಫೋಟೋ ಮೂಲಕ ಚಾಟ್
ವಂಚಕರು ಆರಂಬದಲ್ಲಿ ನಿಮ್ಮ ಫೋಟೋ, ಅಥವಾನಿಮ್ಮ ಆಪ್ತರು, ಕುಟುಂಬಸ್ಥರ ಫೋಟೋ , ವಿಡಿಯೋ ಕಳುಹಿಸಿ, ಈಗಷ್ಟೇ ಈಗ ನೋಡಿದೆ ಎಂದು ಮೆಸೇಜ್ ಕಳುಹಿಸುತ್ತಾರೆ. ಈ ಫೋಟೋ ಅಥವಾ ವಿಡಿಯೋ ಒಪನ್ ಮಾಡಿದರೆ ಅದು ನಿಮ್ಮದೆ ಅಥವಾ ಆಪ್ತರ ಫೋಟೋ. ಹೀಗಾಗಿ ಬಳಕೆದಾರರು ಅನುಮಾನ ಬರದ ರೀತಿ ಮತ್ತೊಂದು ಲಿಂಕ್ ಕಳುಹಿಸಿ ಇದರಲ್ಲಿ ನಿಮ್ಮ ವಿಡಿಯೋ ಇದೆ ಅಥವಾ ಫೋಟೋ ಇದೆ ಎಂದು ಸಂದೇಶ ಕಳುಹಿಸುತ್ತಾರೆ. ಎಲ್ಲಾ ಸಂದೇಶ ಒಂದೇ ರೀತಿ ಇರುವುದಿಲ್ಲ, ಅಗತ್ಯ, ವ್ಯಕ್ತಿಗೆ ತಕ್ಕಂತೆ ಬದಲಾಗುತ್ತದೆ. ಲಿಂಕ್ ಕ್ಲಿಕ್ ಮಾಡಿದರೆ ವ್ಯಾಟ್ಸಾಪ್ ಖಾತೆ ಹ್ಯಾಕ್ ಆಗಲಿದೆ.
ಎಚ್ಚರಿಕೆ ನೀಡಿದ ಜೆನ್ ಡಿಜಿಟಲ್
ಈ ಸೈಬರ್ ವಂಚನೆ ಕುರಿತು ಜೆನ್ ಡಿಜಿಟಲ್ ಎಚ್ಚರಿಕೆ ನೀಡಿದೆ. ನಾರ್ಟನ್, ಅವಿಸ್ತಾ, ಅವಿರಾ, ಎವಿಜಿ ಸೆಕ್ಯೂರಿಟಿ ಬ್ರ್ಯಾಂಡ್ ಪೇರೆಂಟ್ ಕಂಪನಿಯಾಗಿರುವ ಜೆನ್ ಡಜಿಟಲ್ ಈ ಎಚ್ಚರಿಕೆ ನೀಡಿದೆ. ಎಚ್ಚರ ತಪ್ಪಿದರೆ ವ್ಯಾಟ್ಸಾಪ್ ಖಾತೆ ವಂತಕರ ಕೈಸೇರಲಿದೆ. ಮಾಹಿತಿಗಳು ಸೋರಿಕೆಯಾಗಲಿದೆ ಎಂದಿದೆ.
ಎಚ್ಚರಿಕೆ ನೀಡಿದ ಜೆನ್ ಡಿಜಿಟಲ್
ಎಚ್ಚರಿಕೆ ಇರಲಿ
- ಅಪರಿಚಿತ, ಅನಾಮಕಿರ ಸಂದೇಶ, ಲಿಂಕ್ ಕ್ಲಿಕ್ ಮಾಡಬೇಡಿ
- ನಿಮ್ಮ ಫೋಟೋ, ವಿಡಿಯೋ ಇದೆ ಅನ್ನೋವು ಲಿಂಕ್ ಓಪನ್ ಮಾಡಬೇಡಿ
- ಸಂದೇಶ ಕಳುಹಿಸಿದ್ದು ಯಾರು ಅನ್ನೋದು ಖಚಿತಪಡಿಸಿಕೊಳ್ಳಿ
- ವ್ಯಾಟ್ಸಾಪ್ ಸೆಟ್ಟಿಂಗ್ಸ್‌ನಲ್ಲಿ 2 ಸ್ಟೆಪ್ಸ್ ವೆರಿಫಿಕೇಶನ್ ಆನ್ ಮಾಡಿಕೊಳ್ಳಿ
- ವ್ಯಾಟ್ಸಾಪ್ ಸಮಯಕ್ಕೆ ತಕ್ಕಂತೆ ಅಪ್‌ಡೇಟ್ ಮಾಡುತ್ತಿರಿ
ಎಚ್ಚರಿಕೆ ಇರಲಿ
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

