ಮಕ್ಕಳಿಗೆ ಫೋನ್ ಕೊಡ್ತೀರಾ? ಪೋಷಕರೇ ಸೈಬರ್ ದಾಳಿ ಅಪಾಯದ ಬಗ್ಗೆ ತಿಳಿದುಕೊಳ್ಳಿ
ಮಕ್ಕಳಿಗೆ ಫೋನ್ ಕೊಟ್ಟಿದ್ದೀರಾ? ಆದ್ರೆ ಅವರಿಗೆ ಇಂಟರ್ನೆಟ್ ಸುರಕ್ಷಿತವಾಗಿ ಬಳಸೋದು ಹೇಗೆ ಅಂತ ಹೇಳಿಕೊಟ್ಟಿದ್ದೀರಾ? ಹೇಳಿಕೊಡದಿದ್ರೆ ಅವರು ಅಪಾಯಕ್ಕೆ ಸಿಲುಕಬಹುದು. ಸೈಬರ್ ದಾಳಿಗಳಿಂದ ಮಕ್ಕಳನ್ನು ರಕ್ಷಿಸಲು ಉಪಯುಕ್ತ ಸಲಹೆಗಳನ್ನು ತಿಳಿದುಕೊಳ್ಳಿ.

ಹೊಸ ವಿಷಯಗಳಿಗೆ ಮಕ್ಕಳು ಬೇಗ ಆಕರ್ಷಿತರಾಗ್ತಾರೆ. ಈ ಪೈಕಿ ಮೊಬೈಲ್ ಫೋನ್ ಬಳಕೆ ಮಕ್ಕಳಲ್ಲಿ ಹೆಚ್ಚಾಗುತ್ತಿದೆ. ಮಕ್ಕಳು ಸ್ಮಾರ್ಟ್ ಫೋನ್ ಹೆಚ್ಚು ಬಳಕೆ ಮಾಡುವುದರಿಂದ ಆಗುವ ಆರೋಗ್ಯ ಅಪಾಯಗಳ ಬಗ್ಗೆ ಈಗಾಗಲೇ ಹಲವು ಬಾರಿ ಮಾಹಿತಿ ಹಂಚಿಕೊಳ್ಳಲಾಗಿದೆ. ಆದರೆ ಇದೀಗ ಅಪಾಯ ಸೈಬರ್ ದಾಳಿಯಿಂದಲೂ ಇದೆ. ಮಕ್ಕಳು ಫೋನ್ ಬಳಕೆ ಮಾಡುವುದರಿಂದ ಸೈಬರ್ ದಾಳಿಗೆ ಸಿಲುಕವ ಅಪಾಯ ಹೆಚ್ಚಿದೆ. ಇಂಟರ್ನೆಟ್‌ನಲ್ಲಿ ಹೊಸ ವಿಡಿಯೋ, ಫೋಟೋಗಳು ಸಿಗುತ್ತವೆ. ಮಕ್ಕಳು ಅವುಗಳನ್ನು ನೋಡುವಾಗ ಅಪಾಯಕ್ಕೆ ಸಿಲುಕಬಹುದು. ಅದಕ್ಕೆ ಪೋಷಕರು ಮಕ್ಕಳಿಗೆ ಇಂಟರ್ನೆಟ್ ಸುರಕ್ಷಿತವಾಗಿ ಬಳಸುವುದು ಹೇಗೆ ಅಂತ ಹೇಳಿಕೊಡಬೇಕು.
ಇಂಟರ್ನೆಟ್ ಕೇವಲ ದೊಡ್ಡವರಿಗೆ ಮಾತ್ರ ಅಲ್ಲ. ಮಕ್ಕಳಿಗೂ ಅದು ಬೇಕಾಗುತ್ತದೆ. ಅಸೈನ್ಮೆಂಟ್, ಪ್ರಾಜೆಕ್ಟ್‌ಗಳಿಗೆ ಇಂಟರ್ನೆಟ್ ಬಳಸುವುದು ಅನಿವಾರ್ಯ. ಆದರೆ ಸುರಕ್ಷಿತವಾಗಿ ಬಳಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಸಾಮಾನ್ಯವಾಗಿ ಮಕ್ಕಳಿಗೆ ಮೊಬೈಲ್ ಹೇಗೆ ಬಳಸಬೇಕು ಎಂದು ಹೇಳಿಕೊಡುವುದಿಲ್ಲ. ಕಾರಣ ಚಿಕ್ಕಂದಿನಿಂದಲೇ ಮಕ್ಕಳು ಫೋನ್ ಬಳಕೆ ಮಾಡುವುದನ್ನು ಸ್ವತಃ ಕಲಿತಿರುತ್ತಾರೆ. ಆದರೆ ಸರಿಯಾಗಿ ಬಳಕೆ ವಿಧಾನವನ್ನು ಕಲಿಸುವುದು ಅತೀ ಅಗತ್ಯವಾಗಿದೆ
ಇತ್ತೀಚೆಗೆ ಸೈಬರ್ ಕ್ರೈಮ್ ಹೆಚ್ಚಾಗಿದೆ. ಫೋನ್ ಹ್ಯಾಕ್, ಫೇಸ್‌ಬುಕ್, ಇನ್‌ಸ್ಟಾ ಹ್ಯಾಕ್ ಮಾಡಿ ಬೆದರಿಕೆ ಹಾಕುವುದು, ಫಿಶಿಂಗ್ ಹೀಗೆ ನಾನಾ ರೀತಿಯ ಅಪಾಯಗಳಿವೆ. ಮಕ್ಕಳು ಇಂಟರ್ನೆಟ್ ಬಳಸುವಾಗ ಜಾಗರೂಕರಾಗಿರಬೇಕು. ಒಂದು ಕ್ಲಿಕ್ ಸೈಬರ್ ದಾಳಿಗೆ ಸುಲಬ ಸುತ್ತಾಗುವ ಸಾಧ್ಯತೆ ಇದೆ. ಫಿಶಿಂಗ್ ಲಿಂಕ್ ಕ್ಲಿಕ್ ಮಾಡಿ ಡೇಟಾ ಸೋರಿಕೆಯಾಗಬಗುದು. ಇದರಿಂದ ಡಿಜಿಟಲ್ ಅರೆಸ್ಟ್ ಸೇರಿದಂತೆ ಹಲವು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ.
ಪೇರೆಂಟ್ ಕಂಟ್ರೋಲ್
ಮಕ್ಕಳ ಫೋನ್‌ನಲ್ಲಿ ಪೇರೆಂಟ್ ಕಂಟ್ರೋಲ್ ಆಪ್ಷನ್ ಬಳಸಿ. ನಿಮ್ಮ ಇಂಟರ್ನೆಟ್ ಸರ್ವೀಸ್ ಪ್ರೊವೈಡರ್ ಜೊತೆ ಮಾತನಾಡಿ ಕೆಲವು ವೆಬ್‌ಸೈಟ್‌ಗಳನ್ನು ಬ್ಲಾಕ್ ಮಾಡಿ.
ಸೈಬರ್ ಕ್ರೈಮ್ ಬಗ್ಗೆ ಅರಿವು
ಮಕ್ಕಳಿಗೆ ಸೈಬರ್ ಕ್ರೈಮ್ ಬಗ್ಗೆ ತಿಳಿಸಿ. ವೈಯಕ್ತಿಕ ಮಾಹಿತಿಯನ್ನು ಯಾರ ಜೊತೆಗೂ ಹಂಚಿಕೊಳ್ಳಬಾರದು ಎಂದು ಹೇಳಿ.
ಆ್ಯಂಟಿ ವೈರಸ್
ಫೋನ್‌ನಲ್ಲಿ ಆಂಟಿ ವೈರಸ್ ಇನ್‌ಸ್ಟಾಲ್ ಮಾಡಿ. ವೆಬ್‌ಕ್ಯಾಮ್, ಆಡಿಯೋ ಸೆಟ್ಟಿಂಗ್ಸ್ ಆಫ್ ಮಾಡಿ.
ಸ್ಟ್ರಾಂಗ್ ಪಾಸ್‌ವರ್ಡ್
ಸ್ಟ್ರಾಂಗ್ ಪಾಸ್‌ವರ್ಡ್ ಬಳಸುವುದು ಹೇಗೆ ಅಂತ ಮಕ್ಕಳಿಗೆ ಹೇಳಿಕೊಡಿ.
ಗಮನಿಸಿ
ಮಕ್ಕಳ ಆನ್‌ಲೈನ್ ಆಕ್ಟಿವಿಟಿಗಳನ್ನು ಗಮನಿಸಿ. ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದರೆ ತಕ್ಷಣ ಕ್ರಮ ಕೈಗೊಳ್ಳಿ.