China Green Hat Meaning: ಚೀನಾ ಪುರುಷರು ಹಸಿರು ಟೋಪಿ ಧರಿಸಲು ಹಿಂದೇಟು ಹಾಕೋದ್ಯಾಕೆ?
ಚೀನಾದಲ್ಲಿ ಪುರುಷರು ಹಸಿರು ಬಣ್ಣದ ಟೋಪಿ ಧರಿಸುವುದನ್ನು ಅವಮಾನವೆಂದು ಪರಿಗಣಿಸುತ್ತಾರ. ಈ ಐತಿಹಾಸಿಕ ನಂಬಿಕೆಯಿಂದಾಗಿ, ಇಂದಿಗೂ 'ಹಸಿರು ಟೋಪಿ ಧರಿಸುವುದು' ಎಂದರೆ ಪತ್ನಿಗೆ ಮೋಸ ಮಾಡಿದವ ಎಂಬ ಅರ್ಥವನ್ನು ನೀಡುತ್ತದೆ.

ಹಸಿರು ಬಣ್ಣದ ಟೋಪಿ
ನೆರೆಯ ಚೀನಾ ತನ್ನ ಪ್ರಜೆಗಳ ಮೇಲೆ ಹಲವು ನಿರ್ಬಂಧಗಳನ್ನು ಹಾಕಿದೆ. ಇಲ್ಲಿಯ ವಿಚಿತ್ರ ನಿಯಮಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಚೀನಾದ ಪುರುಷರು ಹಸಿರು ಬಣ್ಣದ ಟೋಪಿಗಳನ್ನು ಧರಿಸಲು ಹಿಂದೇಟು ಹಾಕುತ್ತಾರೆ. ಯಾಕೆ ಹೀಗೆ ಎಂಬುದರ ಮಾಹಿತಿ ಇಲ್ಲಿದೆ.
ಚೀನಾದ ಯುವಕರು
ಚೀನಾದಲ್ಲಿ ಹಸಿರು ಟೋಪಿ ಧರಿಸುವುದನ್ನು ಅವಮಾನಕಾರ ಎಂದು ಪರಿಗಣಿಸಲಾಗುತ್ತದೆ. ಈ ಒಂದು ನಂಬಿಕೆಯಿಂದ ಇಂದಿಗೂ ಚೀನಾದ ಯುವಕರು ಸೇರಿದಂತೆ ಪುರುಷರು ಸಹ ಹಸಿರು ಕ್ಯಾಪ್ ಹಾಕಿಕೊಳ್ಳಲ್ಲ. ಹಾಗಾಗಿ ಚೀನಾದಲ್ಲಿ ಹಸಿರು ಟೋಪಿಗಳು ಸಿಗೋದು ತುಂಬಾನೇ ವಿರಳ. ಯಾಕೆ ಅವಮಾನ ಎಂದು ಪರಿಗಣಿಸಲಾಗುತ್ತೆ ಎಂದು ನೋಡೋಣ ಬನ್ನಿ.
ಹಸಿರು ಟೋಪಿ ಅಥವಾ ಸ್ಕಾರ್ಫ್
ಯುವಾನ್ ಮತ್ತು ಮಿಂಗ್ ರಾಜವಂಶಗಳ ಅವಧಿಯಲ್ಲಿ, ವೇಶ್ಯೆಯರೊಂದಿಗೆ ಸಂಬಂಧ ಹೊಂದಿರುವ ಪುರುಷರು ಮತ್ತು ಗೌರವಾನ್ವಿತ ನಾಗರೀಕರರನ್ನು ಪ್ರತ್ಯೇಕವಾಗಿಸಲು ಹಸಿರು ಟೋಪಿಯ ಉಪಾಯ ಮಾಡಿತ್ತು. ವೇಶ್ಯೆ ಅಥವಾ ಅಕ್ರಮ ಸಂಬಂಧ ಹೊಂದಿರುವ ಪುರುಷರು ಸಾರ್ವಜನಿಕವಾಗಿ ಹಸಿರು ಟೋಪಿ ಅಥವಾ ಸ್ಕಾರ್ಫ್ ಧರಿಸುವಂತೆ ಒತ್ತಡ ಹಾಕಲಾಗುತ್ತಿತ್ತು.
ನಂಬಿಕೆ
ಹಸಿರು ಟೋಪಿ ಧರಿಸಿದ ಪುರುಷ ಪತ್ನಿಗೆ ಮೋಸ ಮಾಡಿದವ ಎಂದರ್ಥ. ಸದ್ಯ ಈ ಸಂಬಂಧ ಯಾವುದೇ ನಿಬಂಧನೆಗಳು ಚೀನಾದಲ್ಲಿಲ್ಲ. ಆದ್ರೂ ನೂರಾರು ವರ್ಷಗಳಿಂದ ಈ ನಂಬಿಕೆಯನ್ನು ಪಾಲನೆ ಮಾಡಿಕೊಂಡು ಬರಲಾಗುತ್ತಿದೆ. ಆದ್ದರಿಂದ ಚೀನಾದಲ್ಲಿ ಪುರುಷರು ಹಸಿರು ಟೋಪಿಯನ್ನು ಧರಿಸುವುದಿಲ್ಲ.
ಇದನ್ನೂ ಓದಿ: 50 ಪೈಸೆಗೆ ಫುಲ್ ಮಿಲ್, 20 ಪೈಸೆಗೆ ಇಡ್ಲಿ: 1962ರ ರೇಟ್‌ನಲ್ಲಿ ಊಟ ತಿಂಡಿ ಚಹಾ ಕೊಟ್ಟ ಉಡುಪಿ ವಿಹಾರ್
ಡೈ ಲು ಮಾವೋ
"ಡೈ ಲು ಮಾವೋ" ಎಂಬ ಚೀನೀ ನುಡಿಗಟ್ಟು ಇದೆ. ಇದರ ಅಕ್ಷರಶಃ ಅರ್ಥ ಹಸಿರು ಟೋಪಿ ಧರಿಸುವುದು, ಆದರೆ ಸಾಮಾಜಿಕವಾಗಿ ಇದರ ಅರ್ಥ ಮೋಸ ಹೋಗುವುದು. ಹಾಗಾಗಿ ಹಸಿರು ಟೋಪಿ ಸ್ವೀಕರಿಸುವುದು ಅಥವಾ ಧರಿಸುವುದು ದ್ರೋಹಕ್ಕೆ ಸಮಾನ ಎಂದು ಪರಿಗಣಿಸಲಾಗುತ್ತದೆ. ಚೀನೀ ಪುರುಷರು ಎಷ್ಟೇ ಸ್ಟೈಲಿಶ್ ಆಗಿದ್ದರೂ ಸಹ, ಸಾಮಾನ್ಯವಾಗಿ ಹಸಿರು ಬಣ್ಣದ ಟೋಪಿಗಳನ್ನು ಖರೀದಿಸಲು ಅಥವಾ ಧರಿಸಲು ನಿರಾಕರಿಸುತ್ತಾರೆ.
ಇದನ್ನೂ ಓದಿ: ಒಂದು ದಿನದ ಪ್ರವಾಸಕ್ಕೆ ಸೂಕ್ತವಾದ ಕೇರಳದ 5 ಅದ್ಭುತ ಪ್ರವಾಸಿ ತಾಣಗಳು ಇಲ್ಲಿವೆ

