ಮುಂಬೈನ ಗೋರಗಾಂವ್‌ನಲ್ಲಿರುವ ಉಡುಪಿ ವಿಹಾರ್ ಹೊಟೇಲ್ ಒಂದು ದಿನದ ಮಟ್ಟಿಗೆ 1962ರ ಬೆಲೆಯಲ್ಲಿ  ಜನರಿಗೆ ಆಹಾರ ನೀಡಿತು. 50 ಪೈಸೆಗೆ ಊಟ, 20 ಪೈಸೆಗೆ ಇಡ್ಲಿ, ಚಹಾ ಸಿಕ್ಕಿದ್ದರಿಂದ ಜನರು ಮಳೆಯ ನಡುವೆಯೂ ಕ್ಯೂ ನಿಂತು ಖುಷಿಯಿಂದ ಭೋಜನ ಸವಿದರು.

ಮುಂಬೈ: ಆಹಾರೋದ್ಯಮದಲ್ಲಿ ದೇಶ ವಿದೇಶದಲ್ಲಿ ಹೆಸರು ಮಾಡಿರುವ ಹೊಟೇಲ್‌ಗಳು ಎಂದರೆ ಉಡುಪಿ ಹೊಟೇಲ್‌ಗಳು. ಯಾವುದೇ ಊರಿಗೆ ನೀವು ಹೋಗಿ ಅಲ್ಲಿ ಉಡುಪಿ ಹೆಸರಿನ ಹೊಟೇಲ್‌ಗಳು ನಿಮಗೆ ಸಿಗದೇ ಇರೋದೇ ಇಲ್ಲ. ಅದೇ ರೀತಿ ಕರ್ನಾಟಕದ ಕರಾವಳಿಯವರೇ ಹೆಚ್ಚು ನೆಲೆಸಿರುವ ಮಹಾನಗರಿ ಮುಂಬೈನಲ್ಲೂ ಉಡುಪಿ ಹೊಟೇಲ್‌ಗಳಿಗೇನು ಕಡಿಮೆ. ಇಲ್ಲ, ತಮ್ಮದೇ ಆದ ವಿಶಿಷ್ಟ ಆಹಾರ ಶೈಲಿ ಹಾಗು ರುಚಿಗಳಿಂದಾಗಿ ದೇಶದ ಪ್ರಮುಖ ನಗರಿಗಳು ಸೇರಿದಂತೆ ವಿದೇಶದಲ್ಲೂ ಉಡುಪಿ ಹೊಟೇಲ್‌ಗಳು ಸಾಕಷ್ಟು ಫೇಮಸ್ ಆಗಿವೆ.

1962ರ ದರದಲ್ಲಿ ಊಟ, ತಿಂಡಿ ಚಹಾ:

ಅದೇ ರೀತಿ ಮುಂಬೈನ ಗೋರಗಾಂವ್‌ನಲ್ಲಿರುವ ಪ್ರಸಿದ್ಧ ಉಡುಪಿ ವಿಹಾರ್ ಹೊಟೇಲ್ ಒಂದು ದಿನದ ಮಟ್ಟಿಗೆ ಜನರಿಗೆ 1962ರಲ್ಲಿ ಹೇಗೆ ತಮ್ಮ ಹೊಟೇಲ್‌ನಲ್ಲಿ ಆಹಾರಗಳಿಗೆ ಬೆಲೆ ಇತ್ತೋ ಅದೇ ಬೆಲೆಯಲ್ಲಿ ನಗರದ ಜನರಿಗೆ ಆಹಾರ ನೀಡಿದೆ. ಹೀಗಾಗಿ ಜನರಿಗೆ ಕೇವಲ 50 ಪೈಸೆಗೆ ಮಧ್ಯಾಹ್ನದ ಊಟ 20 ಪೈಸೆಗೆ ಇಡ್ಲಿ ಚಹಾವನ್ನು ವಿತರಿಸಲಾಗಿತ್ತು. ಹೀಗಾಗಿ ಜನ ಭಾರಿ ಸಂಖ್ಯೆಯಲ್ಲಿ ಅಲ್ಲಿ ಬಂದು ಸೇರಿದ್ದು, ಉಡುಪಿ ಹೊಟೇಲ್ ನೀಡಿದ ಈ ವಿಶೇಷ ಸೌಲಭ್ಯದ ಮೂಲಕ 1962ರ ದರದಲ್ಲಿ ತಮ್ಮ ನೆಚ್ಚಿನ ತಿನಿಸುಗಳ ರುಚಿ ಸವಿದರು.

ಈ ಆಫರ್ ಸವಿಯಲ್ಲೂ ಮಳೆಯಲ್ಲು ಕ್ಯೂ ನಿಂತ ಜನ:

1962ರಲ್ಲಿ ಆರಂಭವಾದ ಈ ಉಡುಪಿ ವಿಹಾರ್ ರೆಸ್ಟೋರೆಂಟ್‌ನ್ನು ಬೇರೆ ಹೊಸ ಕಟ್ಟಡದಕ್ಕೆ ಶಿಫ್ಟ್ ಮಾಡಲಾಗುತ್ತಿದೆ. ಹೀಗಾಗಿ ಗೋರೆಗಾಂವ್‌ನಲ್ಲಿರುವ ಈ ಹಳೆಯ ಹೊಟೇಲ್‌ ಕಟ್ಟಡವನ್ನು ಧ್ವಂಸಗೊಳಿಸಲು ನಿರ್ಧರಿಸಲಾಗಿದೆ. ಹೀಗಾಗಿ ಹೊಟೇಲ್‌ನವರು ಮುಂಬೈ ಜನರಿಗೆ ಕೊನೆದಿನದಂಗವಾಗಿ ವಿಶೇಷ ಆಫರನ್ನು ನೀಡಿದ್ದರು. ಈ ಬಗ್ಗೆ ಟಿವಿಗಳಲ್ಲಿ ಜಾಹೀರಾತನ್ನು ಕೂಡ ನೀಡಿದ್ದರು. ಆಪ್ಕೆ ಜಮಾನೇ ಮೇ ಬಾಪ್ ಕೆ ಜಮಾನೇ ಕೆ ದಾಮ್ ಅಂದರೆ ನಿಮ್ಮ ಯುಗ, ನಿಮ್ಮ ತಂದೆಯ ಯುಗದ ಬೆಲೆಗಳು ಎಂಬ ಟ್ಯಾಗ್ ಲೈನ್‌ನೊಂದಿಗೆ ಈ ಜಾಹೀರಾತು ನೀಡಲಾಗಿತ್ತು. ಅದರಂತೆ ಮುಂಬೈನ ಗೋರೆಗಾಂವ್‌ನಲ್ಲಿರುವ ಪ್ರಸಿದ್ಧ ರೆಸ್ಟೋರೆಂಟ್‌ನಲ್ಲಿ ರೆಸ್ಟೋರೆಂಟ್ ಧ್ವಂಸಗೊಳ್ಳುವ ಮೊದಲು 1962 ರ ಬೆಲೆಯಲ್ಲಿ ಜನರಿಗೆ ಆಹಾರವನ್ನು ನೀಡಿತು. ಹೀಗಾಗಿ ಈ ಯೋಜನೆಯ ಲಾಭ ಪಡೆಯಲು ರೆಸ್ಟೋರೆಂಟ್‌ನಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು.

ಪೂರ್ವ ಗೋರೆಗಾಂವ್ ಹೊಟೇಲ್‌ನಲ್ಲಿ ಕೇವಲ ಒಂದು ದಿನ ಈ ವಿಶೇಷ ಆಫರ್ ನೀಡಲಾಗಿತ್ತು. ಹೀಗಾಗಿ ಜನ ಮುಂಬೈನ ಮಳೆಯನ್ನು ಕೂಡ ಲೆಕ್ಕಿಸದೇ ತಮ್ಮ ನೆಚ್ಚಿನ ಆಹಾರವನ್ನು ಕಡಿಮೆ ದರದಲ್ಲಿ ಸವಿಯುವುದಕ್ಕೆ ರಸ್ತೆಯಲ್ಲಿಯೇ ಕ್ಯೂ ನಿಂತಿದ್ದರು. ಈ ಸಂದರ್ಭದಲ್ಲಿ ರೆಸ್ಟೋರೆಂಟ್ ತನ್ನ ವಿದಾಯದ ಸೂಚಕವಾಗಿ ತನ್ನ ಎಲ್ಲಾ ಜನಪ್ರಿಯ ಭಕ್ಷ್ಯಗಳನ್ನು 1962 ರಲ್ಲಿ ಮಾರಾಟವಾಗುತ್ತಿದ್ದ ಬೆಲೆಯಲ್ಲೇ ಬಡಿಸಿತು. ಅದರಲ್ಲೂ 50 ಪೈಸೆಗೆ ಪೂರ್ಣ ಪ್ರಮಾಣದ ಮಧ್ಯಾಹ್ನದ ಊಟ ಸಿಗುತ್ತಿರುವುದನ್ನು ನೋಡಿ ಜನ ನಿಜಕ್ಕೂ ಅಚ್ಚರಿಯ ಜೊತೆ ಖುಷಿ ಖುಷಿಯಿಂದ ಭೋಜನ ಸವಿದರು. ಜಿಲೇಬಿ, ವಡಾ ಮತ್ತು ಇಡ್ಲಿಯಂತಹ ಇತರ ವಸ್ತುಗಳನ್ನು ಕೇವಲ 12 ಪೈಸೆಗೆ ಗ್ರಾಹಕರಿಗೆ ನೀಡಲಾಯ್ತು.

ಇದೇ ವೇಳೆ ಉಡುಪಿ ವಿಹಾರ್‌ನಲ್ಲಿ 1962ರ ಮೆನುವನ್ನು ಇಡಲಾಗಿತ್ತು. ಅದರಲ್ಲಿ ಯಾವ ಯಾವ ಆಹಾರಕ್ಕೆ ಅಂದು ಯಾವ ದರವಿತ್ತು ಎಂಬ ವಿವರವಿತ್ತು. ಅದೇ ದರದಲ್ಲಿ ಗ್ರಾಹಕರಿಗೆ ಆಹಾರವನ್ನು ಪೂರೈಕೆ ಮಾಡಲಾಗಿತ್ತು.

ಅಂದಹಾಗೆ 1962 ಉಡುಪಿ ವಿಹಾರ್ ಹೊಟೇಲ್‌ನ ಆಹಾರದ ಮೆನು ಹೀಗಿದೆ.

  • ಒಂದು ಪ್ಲೇಟ್ ರೈಸ್‌ (ಪಾತಾಳ ಭಾಜಿ / ತೆಂಡು / ಚನ್ನಾ / ರೈಸ್ / ದಾಲ್ / ಚಾಸ್ / 4 ಪೂರಿ / ಹುರಿದ ಪಾಪಡ್ ಒಳಗೊಂಡಿರುವ ಫುಲ್ ಮಿಲ್) - 0.50 ಪೈಸೆ
  • ಶೀರಾ - 0.12 ಪೈಸೆ
  • ಉಪ್ಮಾ - 0.12 ಪೈಸೆ
  • ಇಡ್ಲಿ - 0.20 ಪೈಸೆ
  • ಮೇಡು ವಾಡಾ - 0.20 ಪೈಸೆ
  • ದೋಸೆ (ಸಾದಾ / ಮಸಾಲಾ) - 0.20 ಪೈಸೆ
  • ಬಟಾಟ ವಡಾ - 0.12 ಪೈಸೆ
  • ಉಸಲ್ ಪಾವ್ (ವತನ) - 0.12 ಪೈಸೆ
  • ಬಟಾಟ ವಡಾ ಉಸಲ್ - 0.12 ಪೈಸೆ
  • ಪುರಿ ಭಾಜಿ - 0.12 ಪೈಸೆ
  • ವೆಜ್ ಪಕೋಡ (ಈರುಳ್ಳಿ / ಮೇಥಿ / ಬಟಾಟಾ) - 0.07 ಪೈಸೆ ಮಿಶ್ರಣ ಮಾಡಿ
  • ಚಹಾ - 0.12 ಪೈಸೆ
  • ಜಲೇಬಿ (4 ಪಿಸಿಗಳು) - 0.12 ಪೈಸೆ

View post on Instagram

Scroll to load tweet…