MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ganesh Chaturthi 2026 Date & Time
Today's Horoscope in Kannada
Ganesh Chaturthi Special Trains
2027 Lucky Zodiac Signs
Brics Summit 2026
Bengaluru Tunnel Road Business Corridor
ED Raid on Satish Jarkiholi
Karnataka Guarantee Schemes
Bengaluru Economy by 2037
Karnataka Apex Bank Election
BJP Padayatra
Prajwal Revanna Case
Duleep Trophy Final
Bengaluru-Mangaluru Vande Bharat
  • Home
  • Viral News
  • ಮಂಡ್ಯ: ಸತ್ತ ಭಿಕ್ಷುಕಿ ಗುಡಿಸಲಿನಲ್ಲಿ ಹಣದ ಮೂಟೆಗಳ ರಾಶಿ, ಮನೆಯವರು ಎಣಿಸಲಾಗದೇ ಮಸೀದಿಗೆ ತಂದರು!

ಮಂಡ್ಯ: ಸತ್ತ ಭಿಕ್ಷುಕಿ ಗುಡಿಸಲಿನಲ್ಲಿ ಹಣದ ಮೂಟೆಗಳ ರಾಶಿ, ಮನೆಯವರು ಎಣಿಸಲಾಗದೇ ಮಸೀದಿಗೆ ತಂದರು!

ಮಂಡ್ಯದಲ್ಲಿ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಅವರ ಸಾವಿನ ನಂತರ ಮನೆಯನ್ನು ಪರಿಶೀಲಿಸಿದಾಗ, ಭಿಕ್ಷೆಯಿಂದ ಸಂಗ್ರಹಿಸಿದ್ದ ಲಕ್ಷ ಲಕ್ಷ ಕಂತೆ-ಕಂತೆ ನಗದು ಹಣ ಪತ್ತೆಯಾಗಿದೆ. ಈ ಹಣವನ್ನು ಸಂಬಂಧಿಕರು ಹಂಚಿಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

2 Min read
Author : Sathish Kumar KH
Published : Aug 23 2026, 07:36 PM IST
Share this Photo Gallery
  • FB
  • TW
  • Linkdin
  • Whatsapp
15
ಭಿಕ್ಷುಕಿಯ ಮನೆಯಲ್ಲಿ ಕಂತೆ ಕಂತೆ ಹಣ
Image Credit : Asianet News

ಭಿಕ್ಷುಕಿಯ ಮನೆಯಲ್ಲಿ ಕಂತೆ ಕಂತೆ ಹಣ

ಮಂಡ್ಯ (ಆ.23): ಸಿಕ್ಕರೆ ಊಟ, ಇಲ್ಲದಿದ್ದರೆ ಉಪವಾಸ... ಊರೂರು ಅಲೆದು ಭಿಕ್ಷೆ ಬೇಡುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟ ಬಳಿಕ ಅವರ ಮನೆಯಲ್ಲಿ ಬರೋಬ್ಬರಿ ₹8 ಲಕ್ಷಕ್ಕೂ ಅಧಿಕ ನಗದು ಹಣ ಪತ್ತೆಯಾಗಿರುವ ಅಚ್ಚರಿಯ ಘಟನೆ ಮಂಡ್ಯ ನಗರದಲ್ಲಿ ಬೆಳಕಿಗೆ ಬಂದಿದೆ. ಬದುಕಿದ್ದಾಗ ಕಣ್ಣೆತ್ತಿಯೂ ನೋಡದ ಸಂಬಂಧಿಕರು, ಸಾವಿನ ನಂತರ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಹಂಚಿಕೊಂಡಿದ್ದಾರೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಹಲವು ವರ್ಷಗಳಿಂದ ಭಿಕ್ಷಾಟನೆ ಮಾಡುತ್ತಿದ್ದ ನೂರ್
Image Credit : Asianet News

ಹಲವು ವರ್ಷಗಳಿಂದ ಭಿಕ್ಷಾಟನೆ ಮಾಡುತ್ತಿದ್ದ ನೂರ್

ಮಂಡ್ಯ ನಗರದ ಗುತ್ತಲು ಬಡಾವಣೆಯ ನಿವಾಸಿಯಾಗಿದ್ದ ನೂರ್ (ಹೆಸರು) ಎಂಬ ವೃದ್ಧೆ, ಕುಟುಂಬಸ್ಥರು ಹಾಗೂ ಸಂಬಂಧಿಕರ ಆಸರೆ ಇಲ್ಲದೆ ಹಲವು ವರ್ಷಗಳಿಂದ ನಗರದ ವಿವಿಧೆಡೆ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ನಿನ್ನೆ (ಗುರುವಾರ) ತಮ್ಮ ಪುಟ್ಟ ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ವೃದ್ಧೆ ಮೃತಪಟ್ಟ ಸುದ್ದಿ ತಿಳಿದ ಸ್ಥಳೀಯರು ಹಾಗೂ ಸಂಬಂಧಿಕರು ಸೇರಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

Related Articles

Related image1
ಇಂದೋರ್: ಒಂದೂವರೆ ತಿಂಗಳಲ್ಲಿ 2.5 ಲಕ್ಷ ಗಳಿಸಿದ ಭಿಕ್ಷುಕಿ! ಇವಳ ಬಳಿ ಇದೆ ಜಮೀನು, ಮನೆ, ಕಾರು..
Related image2
ಬೀದಿ ವ್ಯಾಪಾರಿಗಳಿಗೆ ಬಡ್ಡಿಗೆ ಸಾಲ ಕೊಡ್ತಾನೆ ಈ ಭಿಕ್ಷುಕ, 3 ಮನೆ, ಕಾರು ಆಟೋರಿಕ್ಷಾ: ಈತನ ಐಷಾರಾಮ ನೋಡಿ ಅಧಿಕಾರಿಗಳೇ ಶಾಕ್
35
ಮೂಟೆಗಟ್ಟಲೆ ನೋಟು-ನಾಣ್ಯಗಳು ಪ್ರತ್ಯಕ್ಷ!
Image Credit : Asianet News

ಮೂಟೆಗಟ್ಟಲೆ ನೋಟು-ನಾಣ್ಯಗಳು ಪ್ರತ್ಯಕ್ಷ!

ಅಂತ್ಯಸಂಸ್ಕಾರ ಮುಗಿದ ನಂತರ ಸಂಬಂಧಿಕರು ಹಾಗೂ ಸ್ಥಳೀಯ ಮುಖಂಡರು ವೃದ್ಧೆ ವಾಸವಿದ್ದ ಮನೆಯನ್ನು ಪರಿಶೀಲಿಸಲು ತೆರಳಿದ್ದಾರೆ. ಈ ವೇಳೆ ಮನೆಯ ಒಳಗಿದ್ದ ಮೂಟೆಗಳು, ಪೆಟ್ಟಿಗೆಗಳನ್ನು ತೆರೆದು ನೋಡಿದಾಗ ಎಲ್ಲರಿಗೂ ಶಾಕ್ ಕಾದಿತ್ತು. ಮನೆಯ ಮೂಲೆ ಮೂಲೆಗಳಲ್ಲಿ ಕಂತೆ ಕಂತೆ ನೋಟುಗಳು ಹಾಗೂ ನಾಣ್ಯಗಳ ಮೂಟೆಗಳು ಪತ್ತೆಯಾಗಿದ್ದವು. ಹಲವು ವರ್ಷಗಳಿಂದ ತನಗೆ ಭಿಕ್ಷೆಯಲ್ಲಿ ಬಂದ ಹಣವನ್ನು ಆ ವೃದ್ಧೆ ಖರ್ಚು ಮಾಡದೆ ಹಾಗೆಯೇ ಕೂಡಿಟ್ಟಿದ್ದರು ಎನ್ನಲಾಗಿದೆ.

45
ಎಣಿಕೆಯಲ್ಲಿ ₹8 ಲಕ್ಷಕ್ಕೂ ಅಧಿಕ ಹಣ ಪತ್ತೆ!
Image Credit : Asianet News

ಎಣಿಕೆಯಲ್ಲಿ ₹8 ಲಕ್ಷಕ್ಕೂ ಅಧಿಕ ಹಣ ಪತ್ತೆ!

ಸ್ಥಳೀಯರು ಮತ್ತು ಸಂಬಂಧಿಕರು ಒಟ್ಟಾಗಿ ಕುಳಿತು ನಾಣ್ಯಗಳು ಮತ್ತು ನೋಟುಗಳನ್ನು ಎಣಿಕೆ ಮಾಡಲು ಆರಂಭಿಸಿದ್ದು, ಎಣಿಕೆಯ ನಂತರ ಒಟ್ಟು ಮೊತ್ತ ₹8 ಲಕ್ಷಕ್ಕೂ ಅಧಿಕ ಇರುವುದು ದೃಢಪಟ್ಟಿದೆ. ಬಳಿಕ ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಮಾತುಕತೆ ನಡೆಸಿ, ಆ ಹಣವನ್ನು ವೃದ್ಧೆಯ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದುಬಂದಿದೆ.

55
'ಬದುಕಿದ್ದಾಗ ನೋಡದವರು, ಹಣಕ್ಕೆ ಮುಗಿಬಿದ್ದರು!'
Image Credit : Asianet News

'ಬದುಕಿದ್ದಾಗ ನೋಡದವರು, ಹಣಕ್ಕೆ ಮುಗಿಬಿದ್ದರು!'

ಈ ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರಲ್ಲಿ ತೀವ್ರ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. 'ವೃದ್ಧೆ ಬದುಕಿದ್ದಾಗ ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ಬೀದಿ ಬೀದಿ ಅಲೆದಾಗ ಯಾವೊಬ್ಬ ಸಂಬಂಧಿಯೂ ಸಹಾಯಕ್ಕೆ ಬರಲಿಲ್ಲ. ಆದರೆ ಆಕೆ ಸತ್ತ ಮೇಲೆ ಆಕೆಯ ಭಿಕ್ಷಾಟನೆಯ ಕಷ್ಟದ ಹಣವನ್ನು ಮುಲಾಜಿಲ್ಲದೆ ಹಂಚಿಕೊಂಡಿದ್ದಾರೆ' ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ. ಈ ಘಟನೆ ಮಂಡ್ಯದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ವೈರಲ್ ಸುದ್ದಿ
ಕರ್ನಾಟಕ ಸುದ್ದಿ
ಮಂಡ್ಯ
ಮಹಿಳೆಯರು

Latest Videos
Recommended Stories
Recommended image1
Elon musk: ಪೌರತ್ವದ ಕುರಿತು ಭಾರತವನ್ನು ಏಕಾಏಕಿ ಹಾಡಿ ಹೊಗಳಿದ ಎಲಾನ್‌ ಮಸ್ಕ್‌!
Recommended image2
15 ವರ್ಷಗಳ ದೇಶಸೇವೆ ಮುಗಿಸಿ ಮನೆಗೆ ಬಂದ ಇಂಡಿಯನ್‌ ನೇವಿ ಹೀರೋ: ಪತಿಗೆ ಹಾರ ಹಾಕಿ, ಆರತಿ ಎತ್ತಿ ಸಂಭ್ರಮಿಸಿದ ಪತ್ನಿ!
Recommended image3
​'ನಿನ್ನ ಕೈ ಅಡುಗೆ ಬೇಡ' ಎಂದವನಿಗೆ ಜಗತ್ತಿನ ಪ್ರಸಿದ್ಧ ವ್ಯಕ್ತಿಗಳ ಪಟ್ಟಿ ತೋರಿಸಿ ಸುಮ್ಮನಾಗಿಸಿದ ಶೆಫ್!
Related Stories
Recommended image1
ಇಂದೋರ್: ಒಂದೂವರೆ ತಿಂಗಳಲ್ಲಿ 2.5 ಲಕ್ಷ ಗಳಿಸಿದ ಭಿಕ್ಷುಕಿ! ಇವಳ ಬಳಿ ಇದೆ ಜಮೀನು, ಮನೆ, ಕಾರು..
Recommended image2
ಬೀದಿ ವ್ಯಾಪಾರಿಗಳಿಗೆ ಬಡ್ಡಿಗೆ ಸಾಲ ಕೊಡ್ತಾನೆ ಈ ಭಿಕ್ಷುಕ, 3 ಮನೆ, ಕಾರು ಆಟೋರಿಕ್ಷಾ: ಈತನ ಐಷಾರಾಮ ನೋಡಿ ಅಧಿಕಾರಿಗಳೇ ಶಾಕ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved