ಪರ್ಸ್ ನಲ್ಲಿ ಮೃತ ವ್ಯಕ್ತಿಯ ಫೋಟೊ ಇಟ್ಟುಕೊಳ್ಳೋದು ಸರೀನಾ? ತಪ್ಪಾ?
ಕೆಲವು ಜನರೊಂದಿಗೆ ನಾವು ಎಷ್ಟು ಅಟ್ಯಾಚ್ ಆಗಿರುತ್ತೇವೆ ಅಂದ್ರೆ ಅವರ ಮರಣದ ನಂತರವೂ ನಾವು ಅವರನ್ನು ಮರೆಯಲು ಸಾಧ್ಯವಿಲ್ಲ. ಹಾಗಾಗಿ ಅವರ ಫೋಟೊ ಇಟ್ಟುಕೊಳ್ಳುತ್ತೇವೆ. ಆದರೆ ಮೃತರ ಫೋಟೊ ಪರ್ಸ್ ನಲ್ಲಿ ಇಟ್ಟುಕೊಳ್ಳೊದು ಸರೀನಾ?

ಕೆಲವು ಜನರು ನಮಗೆ ಎಷ್ಟು ಪ್ರಿಯರಾಗುತ್ತಾರೆ ಎಂದರೆ ಅವರ ಮರಣದ ನಂತರವೂ ನಾವು ಅವರನ್ನು ಮರೆಯಲು ಸಾಧ್ಯವಿಲ್ಲ. ಅವರ ನೆನಪಿನಲ್ಲಿ, ನಾವು ಸತ್ತವರ ಚಿತ್ರಗಳನ್ನು ನಮ್ಮ ಪರ್ಸ್ ಗಳಲ್ಲಿ ಇಡುತ್ತೇವೆ. ಆದರೆ ಈ ರೀತಿ ಫೋಟೊಗಳನ್ನು ಇಟ್ಟುಕೊಳ್ಳೋದು ಸರೀನಾ? ತಪ್ಪಾ?
ನಾವಂತು ಅವರ ಮೇಲಿನ ಪ್ರೀತಿಯಿಂದ ಸಾವನ್ನಪ್ಪಿದವರ ಫೋಟೊಗಳನ್ನು ತಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳುತ್ತೇವೆ. ಆದರೆ ಶಾಸ್ತ್ರಗಳ ಪ್ರಕಾರ ಸಾವನ್ನಪ್ಪಿದವರ ಫೋಟೊ ಪರ್ಸ್ ನಲ್ಲಿ ಇಟ್ಟುಕೊಳ್ಳಬೇಕೇ ಅಥವಾ ಬೇಡವೇ ಅನ್ನೋದನ್ನು ತಿಳಿಯೋಣ.
ಧರ್ಮಗ್ರಂಥಗಳ ಪ್ರಕಾರ, ನಾವು ಯಾವತ್ತೂ ಸಾವನ್ನಪ್ಪಿದ ವ್ಯಕ್ತಿಯ ಫೋಟೊಗಳನ್ನು (dead person photo) ನಮ್ಮ ಜೇಬಿನಲ್ಲಿ ಇಡಬಾರದು. ಮೃತ ವ್ಯಕ್ತಿಯ ಫೋಟೊ ಪರ್ಸ್ ಅಥವಾ ಸುತ್ತಮುತ್ತಲಿನ ಪ್ರದೇಶಗಳಿಗೆ ನಕಾರಾತ್ಮಕ ಶಕ್ತಿಯನ್ನು ತರುತ್ತದೆ ಎನ್ನುವ ನಂಬಿಕೆ ಬಹಳ ಹಿಂದಿನಿಂದ ಇದೆ. ಹಾಗಾಗಿ ಫೋಟೊ ಇಡಬಾರದು ಎನ್ನಲಾಗುತ್ತೆ.
ಪರ್ಸ್ ಅನ್ನೋದು ನಮ್ಮ ಪ್ರಗತಿಯೊಂದಿಗೆ ಸಂಬಂಧ ಹೊಂದಿರುವ ಒಂದು ವಸ್ತುವಾಗಿದೆ. ಒಮ್ದು ವೇಳೆ ನಾವು ಪರ್ಸ್ ನಲ್ಲಿ ಮೃತ ವ್ಯಕ್ತಿಯ ಚಿತ್ರವನ್ನು ಇಟ್ಟುಕೊಳ್ಳುವುದರಿಂದ ನಮ್ಮ ಪ್ರಗತಿಗೆ ಅಡ್ಡಿಯಾಗುತ್ತದೆ.
ಹಣ ಮತ್ತು ಉಪಯುಕ್ತ ವಸ್ತುಗಳನ್ನು ಇಡಲು ಪರ್ಸ್ ಬಳಸಲಾಗುತ್ತದೆ. ಅದರಲ್ಲಿ ಮೃತ ವ್ಯಕ್ತಿಗಳ ಚಿತ್ರಗಳನ್ನು ಇಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಅಂತಹ ಸಂದರ್ಭದಲ್ಲಿ, ನೀವು ಸಾಲಕ್ಕೆ ಸಿಲುಕಬಹುದು. ಆರ್ಥಿಕ ಸಮಸ್ಯೆಯನ್ನು ಸಹ ಎದುರಿಸುವ ಸಾಧ್ಯತೆ ಇದೆ.
ಆದರೆ ನೀವು ನಿಮ್ಮ ಪರ್ಸ್ ನಲ್ಲಿ ಲಕ್ಷ್ಮಿ ದೇವಿ (Goddess Lakshmi), ಆಮೆ, ಶ್ರೀ ಯಂತ್ರ ಅಥವಾ ಇತರ ಯಾವುದೇ ಶುಭ ಚಿಹ್ನೆಯ ಚಿತ್ರವನ್ನು ಇಡಬೇಕು. ಇವುಗಳನ್ನು ಇಡೋದರಿಂದ ನಿಮ್ಮತ್ತ ಸಕಾರಾತ್ಮಕತೆ ಆಕರ್ಷಿತವಾಗುತ್ತೆ. ನಿಮ್ಮ ಪರ್ಸ್ ಹಣದಿಂದ ತುಂಬುತ್ತೆ. ಹಣಕಾಸಿನ ಸಮಸ್ಯೆ ಬರೋದು ಕಡಿಮೆಯಾಗುತ್ತೆ.