ಪವಿತ್ರ ಗಂಗಾಜಲವನ್ನು ಅಡುಗೆ ಮನೆಯಲ್ಲಿಟ್ಟರೆ ರೋಗ ದೂರ, ವಾಸ್ತು ಟಿಪ್ಸ್ ಇಲ್ಲಿವೆ!
ನಿಮಗೆ ಗೊತ್ತೆ ಇರೋ ಹಾಗೆ ಹಿಂದೂ ಧರ್ಮದಲ್ಲಿ ಗಂಗಾಜಲವನ್ನು ತುಂಬಾನೆ ಪವಿತ್ರ ಎನ್ನಲಾಗುತ್ತದೆ. ಇದನ್ನು ಸರಿಯಾದ ಜಾಗದಲ್ಲಿ ಇಡಬೇಕು ಎನ್ನುವ ನಂಬಿಕೆ ಇದೆ. ಹಾಗಿದ್ರೆ ಇದನ್ನು ಅಡುಗೆ ಕೋಣೆಯಲ್ಲಿ ಇಡೋದು ಸರೀನಾ ತಪ್ಪಾ ತಿಳಿಯೋಣ.
ಹಿಂದೂ ಧರ್ಮದಲ್ಲಿ ಗಂಗಾಜಲವನ್ನು (Gangajal) ತುಂಬಾ ಪವಿತ್ರ ಮತ್ತು ಪೂಜನೀಯ ಎಂದು ಪರಿಗಣಿಸಲಾಗುತ್ತದೆ. ಇವುಗಳ ಬಳಕೆಯನ್ನು ಪೂಜೆ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಮಾಡಲಾಗುತ್ತೆ. ಗಂಗಾಜಲ ಬಳಸೋದರಿಂದ ಜೀವನದ ಎಲ್ಲಾ ಕಷ್ಟಗಳು ಮತ್ತು ಪಾಪ ದೂರವಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಗಂಗಾಜಲದ ಬಳಕೆಯಿಂದ ನೀವು ಜೀವನದಲ್ಲಿ ಬರುವಂತಹ ಕೆಲವು ಸಮಸ್ಯೆಗಳನ್ನು ದೂರ ಮಾಡಬಹುದು… ಅದು ಹೇಗೆ ಅನ್ನೋದನ್ನು ತಿಳಿಯೋಣ.
ಮನೆಯಲ್ಲಿಡಿ ಗಂಗಾಜಲ
ವಾಸ್ತುವಿನ (Vastu shastra) ಪ್ರಕಾರ ಮನೆಯಲ್ಲಿ ಗಂಗಾಜಲ ಇರಲೇಬೇಕು. ಇದರಿಂದಾಗಿ ಮನೆಯಲ್ಲಿ ಪೂರ್ತಿಯಾಗಿ ಸಕಾರಾತ್ಮಕ ಶಕ್ತಿ ತುಂಬಿರುತ್ತೆ ಜೊತೆಗೆ ಮನೆಯಲ್ಲಿ ಯಾವಾಗಲೂ ಸುಖ ಶಾಂತಿ ನೆಲೆಯಾಗಿರುತ್ತೆ.
ಅಡುಗೆ ಕೋಣೆಯಲ್ಲಿ ಗಂಗಾಜಲ ಇಡೋದು
ಮನೆಯ ವಾಸ್ತುವಿನಲ್ಲಿ ಅಡುಗೆ ಕೋಣೆ (Kitchen) ಸಹ ಪ್ರಮುಖ ಭಾಗ. ಹಾಗಾಗಿ ಈ ಜಾಗದಲ್ಲಿ ಗಂಗಾಜಲವನ್ನು ಇಡೋದು ಸಹ ಶುಭ ಎನ್ನಲಾಗುತ್ತದೆ. ನೀವು ಸಹ ಅಡುಗೆ ಕೋಣೆಯಲ್ಲಿ ಗಂಗಾಜಲ ಇಡಬಹುದು.
ಈ ರೀತಿಯಾಗಿ ಗಂಗಾಜಲ ಇರಿಸಿ
ಅಡುಗೆ ಕೋಣೆಯಲ್ಲಿ ಯಾರ ದೃಷ್ಟಿಯೂ ಬೀಳದಂತಹ ಜಾಗದಲ್ಲಿ ಗಂಗಾಜಲವನ್ನು ಇಡಬೇಕು ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಹೀಗೆ ಮಾಡೋದರಿಂದ ಮನೆಯಲ್ಲಿ ಯಾವುದೇ ಕ್ಲೇಶಗಳು ನಡೆಯೋದಿಲ್ಲ.
ರೋಗಗಳು ದೂರವಾಗುತ್ತೆ
ಮನೆಯಲ್ಲಿ ಪ್ರತಿದಿನ ಜಗಳ ನಡೆಯೋದರಿಂದ ಸರಿಯಾಗಿ ಅಡುಗೆ ಮಾಡೋದಕ್ಕೂ ಮನಸ್ಸು ಇರೋದಿಲ್ಲ. ಇದರಿಂದಾಗಿ ಮನೆಯ ಸದ್ಯರು ರೋಗಗಳನ್ನು ಹೊಂದುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತೆ. ಹಾಗಾಗಿ ಅಡುಗೆ ಕೋಣೆಯಲ್ಲಿ ಗಂಗಾಜಲ ಇಟ್ಟರೆ ಮತ್ತು ನೀವು ಗಂಗಾಜಲ ಸೇವಿಸಿದರೆ ಆರೋಗ್ಯ ಸಮಸ್ಯೆ ಕಾಡೋದಿಲ್ಲ.
ಮನೆಯಲ್ಲಿ ಜಗಳ ಕಡಿಮೆಯಾಗುತ್ತೆ
ನಿಮ್ಮ ಮನೆಯಲ್ಲಿ ಮನೆಮಂದಿ ನಡುವೆ ಪದೇ ಪದೇ ಅಥವಾ ಹೆಚ್ಚಾಗಿ ಜಗಳ (quarrel) ನಡೆಯುತ್ತಿದ್ದರೆ, ಯಾರಿಗೂ ಗೊತ್ತಾಗದ ಹಾಗೆ, ಯಾರಿಗೂ ಕಾಣದಂತೆ ಗಂಗಾಜಲವನ್ನು ಅಡುಗೆ ಕೊಣೆಯಲ್ಲಿರಿಸಿ. ಬಳಿಕ ಬದಲಾವಣೆ ನೋಡಿ.
ಭಯಾನಕ ಕನಸುಗಳು ಕಾಣೋದಿಲ್ಲ
ನಿಮಗೆ ಪದೇ ಪದೇ ಕೆಟ್ಟ ಕನಸುಗಳು (nightmare) ಬೀಳುತ್ತಿದ್ದರೆ, ನಿಮ್ಮ ಹಾಸಿಗೆ ಮೇಲೆ ಒಂದೆರಡು ಹನಿಗಳಷ್ಟು ಗಂಗಾಜಲ ಸಿಂಪಡಿಸಿ. ಇದರಿಂದ ಕೆಟ್ಟ ಕನಸು ಬೀಳದೆ ಚೆನ್ನಾಗಿ ನಿದ್ರೆ ಮಾಡೊದಕ್ಕೆ ಸಾಧ್ಯವಾಗುತ್ತೆ.
ಆರ್ಥಿಕ ಲಾಭ
ಮನೆಯಲ್ಲಿ ಗಂಗಾಜಲವನ್ನು ಇರಿಸೋದರಿಂದ ಆರ್ಥಿಕ ಲಾಭ ಉಂಟಾಗುತ್ತದೆ. ಅಲ್ಲದೇ ಮನೆಯಲ್ಲಿ ಸುಖ ಸಮೃಧ್ದಿ ಯಾವಾಗಲೂ ನೆಲೆಯಾಗಿರುತ್ತದೆ. ಅಷ್ಟೇ ಯಾಕೆ ಮನೆಯಲ್ಲಿ ಲಕ್ಷ್ಮೀ ದೇವಿಯೂ (Goddess Lakshmi) ಸದಾ ನೆಲೆಸುತ್ತಾಳೆ.