MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Vaastu
  • Vastu tips: ಮನೆಯಲ್ಲಿ ಕಲಹ ತಂದಿಡೋ ಅಪಶಕುನದ ವಸ್ತುಗಳಿವು..

Vastu tips: ಮನೆಯಲ್ಲಿ ಕಲಹ ತಂದಿಡೋ ಅಪಶಕುನದ ವಸ್ತುಗಳಿವು..

ಇವು ಸಾಮಾನ್ಯ ದೈನಂದಿನ ಬಳಕೆಯ ವಸ್ತುಗಳೇ. ಆದರೆ, ಇವನ್ನು ಮನೆಯಲ್ಲಿಟ್ಟರೆ ಮನೆಯಲ್ಲಿ ಕಲಹ ತಪ್ಪಿದ್ದಲ್ಲ ಎನ್ನುತ್ತದೆ ವಾಸ್ತು. ಯಾವುವು ಈ ವಸ್ತುಗಳು? ನಿಮ್ಮ ಮನೆಯಲ್ಲೂ ಇದೆಯೇ? ಇದ್ದರೆ ಇಂದೇ ಹೊರಗೆಸೆಯಿರಿ. 

2 Min read
Author : Suvarna News
Published : Apr 04 2023, 03:56 PM IST
Share this Photo Gallery
  • FB
  • TW
  • Linkdin
  • Whatsapp
19

ಕೆಲವೊಮ್ಮೆ ಮನೆಯಲ್ಲಿ ಇದ್ದಕ್ಕಿದ್ದಂತೆ ಹಲವಾರು ಜಗಳಗಳು ನಡೆಯಲು ಪ್ರಾರಂಭಿಸುತ್ತವೆ. ಸಣ್ಣಪುಟ್ಟ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳೇಳಲು ಶುರುವಾಗುತ್ತದೆ. ಇದರಿಂದ ಸಂಸಾರದಲ್ಲಿ ಉದ್ವಿಗ್ನತೆ, ವೈಮನಸ್ಸು ಹೆಚ್ಚುತ್ತದೆ. ಮನೆಯ ಸದಸ್ಯರಿಗೆ ಪರಸ್ಪರ ಮುಖ ನೋಡಲು ಇಷ್ಟವಾಗುವುದಿಲ್ಲ. ಇದು ಏಕೆ ನಡೆಯುತ್ತಿದೆ ಎಂದು ಅರ್ಥವಾಗುತ್ತಿಲ್ಲವೇ? ಆದರೆ, ಇದರ ಹಿಂದೆ ಹಲವು ಕಾರಣಗಳಿರಬಹುದು, ಆದರೆ, ಅದರಲ್ಲಿ ವಾಸ್ತು ದೋಷವೂ ಒಂದಾಗಿರಬಹುದು. 
 

29

ಮನೆಯಲ್ಲಿ ಇರುವ ಕೆಲ ವಸ್ತುಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಡಿ ಕಲಹಕ್ಕೆ ಕಾರಣವಾಗುತ್ತವೆ. ಈ ವಸ್ತುಗಳನ್ನು ಇಟ್ಟುಕೊಂಡರೆ ಮನೆಯಲ್ಲಿ ಅಪಶ್ರುತಿ ಉಂಟಾಗುತ್ತದೆ. ಹಾಗೆ ಮನೆಯಲ್ಲಿ ಇಡಬಾರದಂತಹ 5 ವಸ್ತುಗಳ ಬಗ್ಗೆ ಹೇಳಲಿದ್ದೇವೆ. 

39

ಮನೆಯಲ್ಲಿ ಯಾವ ವಸ್ತುಗಳನ್ನು ಇಡಬಾರದು?

ಹರಿದ ಹಳೆಯ ಬಟ್ಟೆಗಳನ್ನು ಮನೆಯಲ್ಲಿ ಇಡಬಾರದು. ಇದು ಮನೆಯಲ್ಲಿ ಬಡತನವನ್ನು ತರುತ್ತದೆ. ಇದು ಕುಟುಂಬ ಸದಸ್ಯರಲ್ಲಿ ನಕಾರಾತ್ಮಕತೆಯನ್ನು ಇಡುತ್ತದೆ. ಹಣಕಾಸಿನ ತೊಂದರೆಯನ್ನೂ ಎದುರಿಸಬೇಕಾಗುತ್ತದೆ.

49

ನಿಮ್ಮ ಮನೆಯಲ್ಲಿ ಒಡೆದ ಗಾಜು, ಒಡೆದ ಕನ್ನಡಿ ಇಡಬೇಡಿ. ಇದು ಕೂಡಾ ಮನಸ್ಸುಗಳು ಒಡೆಯಲು ಕಾರಣವಾಗುತ್ತದೆ.  ಹಾಗಾಗಿ, ಒಡೆದ ಗಾಜುಗಳನ್ನು ಕೂಡಲೇ ವಿಲೇವಾರಿ ಮಾಡಿ.

59

ಕೆಟ್ಟ ಬೂಟುಗಳನ್ನು, ಬಳಸದ ಚಪ್ಪಲಿಗಳನ್ನು ಸಹ ಇಡಬಾರದು, ಇದರಿಂದಾಗಿ ಮನೆಯಲ್ಲಿ ಜಗಳಗಳು ಪ್ರಾರಂಭವಾಗುತ್ತವೆ. ಮನೆಯಲ್ಲಿ ಕಲಹ ಹೆಚ್ಚುತ್ತದೆ. ಆದಷ್ಟು ಬೇಗ ಅದನ್ನು ಮನೆಯಿಂದ ಹೊರಹಾಕಿ.
 

69

ಕೆಟ್ಟ ಗಡಿಯಾರವನ್ನು ಮನೆಯ ವಾಸ್ತುವಿಗೆ ಒಳ್ಳೆಯದೆಂದು ಪರಿಗಣಿಸಲಾಗುವುದಿಲ್ಲ. ಇದರಿಂದಾಗಿ ಕೆಟ್ಟ ಸಮಯವನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಅದು ಮನೆಯಲ್ಲಿ ಹಾಳಾಗಿ ನಿಂತಿದ್ದರೆ, ತಕ್ಷಣ ಅದನ್ನು ಹೊರ ಹಾಕಿ ಇಲ್ಲವೇ ಸರಿಪಡಿಸಿ.

79

ಕೆಟ್ಟ ಬೀಗಗಳನ್ನು ಮನೆಯಲ್ಲಿ ಇಡಬಾರದು. ಇದು ಕುಟುಂಬಕ್ಕೆ ಅಶುಭ. ಈ ಕಾರಣದಿಂದಾಗಿ, ಮನೆಯಲ್ಲಿ ತೊಂದರೆ ಹೆಚ್ಚಾಗುತ್ತದೆ. ಹಾಗಾಗಿ, ನಿಮ್ಮ ಮನೆಯಲ್ಲಿ ಈ ರೀತಿಯ ಏನಾದರೂ ಇದ್ದರೆ, ಅದನ್ನು ಕಸದ ಬುಟ್ಟಿಗೆ ಎಸೆಯಿರಿ.

89

ಹಳೆ ಪತ್ರಿಕೆಗಳ ಬಂಡಲ್ ಕೂಡ ಮನೆಯಲ್ಲಿ ಇಡಬಾರದು. ಇದು ಮನೆಯ ವಾಸ್ತುವಿನ ಮೇಲೂ ಪರಿಣಾಮ ಬೀರುತ್ತದೆ. ಅಂತಹ ಯಾವುದೇ ಬಳಸದ ವಸ್ತುವನ್ನು ಮತ್ತು ಕೆಟ್ಟದ್ದನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಕ್ಲೇಶವನ್ನು ಹೆಚ್ಚಿಸುತ್ತದೆ.

99

ನೃತ್ಯ ಮಾಡುವ ಶಿವನ ಕಾಸ್ಮಿಕ್ ಚಿತ್ರವು ಪ್ರತಿಯೊಂದು ಶ್ರೇಷ್ಠ ನೃತ್ಯ ಪ್ರೇಮಿಗಳ ಮನೆಯಲ್ಲಿ ಕಂಡುಬರುತ್ತದೆ. ನಿಸ್ಸಂದೇಹವಾಗಿ, ನಟರಾಜ ಕಲೆಯ ಸಂಕೇತವಾಗಿದೆ. ಆದರೆ ಅದೇ ಸಮಯದಲ್ಲಿ, ಇದು ವಿನಾಶದ ಸಂಕೇತವಾಗಿದೆ. ನೃತ್ಯ ರೂಪವು ತಾಂಡವ ನೃತ್ಯ ಅಂದರೆ ವಿನಾಶವನ್ನು ಪ್ರತಿನಿಧಿಸುತ್ತದೆ, ಆದ್ದರಿಂದ ಇದನ್ನು ಮನೆಯಲ್ಲಿ ಇಡುವುದನ್ನು ಸಂಪೂರ್ಣವಾಗಿ ತಪ್ಪಿಸಿ.

About the Author

SN
Suvarna News
ದುರದೃಷ್ಟ

Latest Videos
Recommended Stories
Recommended image1
ಸುದಿನಗಳು ಆರಂಭವಾಗುವ ಮುನ್ನ ಸಿಗಲಿದೆ ಈ ಶುಭ ಸಂಕೇತ! ನಿಮ್ಮ ಮನೇಲೂ ಈ ಬದಲಾವಣೆಗಳಾಗುತ್ತಿವೆಯೇ?
Recommended image2
Astro Tips for Students: ಪರೀಕ್ಷೆ ಬರೆಯುವ ಮುನ್ನ ಈ ಕೆಲಸ ಮಾಡಿ… ಮೆದುಳು ಸೂಪರ್ ಫಾಸ್ಟ್ ಆಗಿ ವರ್ಕ್ ಆಗುತ್ತೆ!
Recommended image3
Vastu Tips: ಬೆಳಗ್ಗೆ ಎದ್ದ ತಕ್ಷಣ ಈ ವಸ್ತುಗಳನ್ನು ನೋಡಿದ್ರೆ ಅದೃಷ್ಟ ಕೆಟ್ಟಂತೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved