ಮದುವೆಯೇ ಆಗ್ತಾ ಇಲ್ವಾ? ಈ ಗಿಡ ನೆಟ್ಟು ನೋಡಿ
ಹಸಿರು ಸಸ್ಯಗಳು ಸುಂದರವಾಗಿ ಕಾಣುವುದು ಮಾತ್ರವಲ್ಲದೆ, ಅವು ಮನಸ್ಸನ್ನು ನಿರಾಳಗೊಳಿಸುತ್ತವೆ. ಮನೆಯಲ್ಲಿ ಹಸಿರು ಸಸ್ಯಗಳಿದ್ದರೆ, ಸಕಾರಾತ್ಮಕತೆಯ ಹರಿವು (Positive Energy) ಹೆಚ್ಚಾಗುತ್ತೆ. ವಾಸ್ತು ಶಾಸ್ತ್ರದಲ್ಲಿ ಕೆಲವು ಸಸ್ಯಗಳನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಹಸಿರು ಸಸ್ಯಗಳು ಪ್ರಗತಿ, ಸಂತೋಷ (Happiness) ಮತ್ತು ಸಮೃದ್ಧಿಯ ಆಗಮನಕ್ಕೆ ಸಹಾಯ ಮಾಡುತ್ತವೆ. ಮನೆಯಲ್ಲಿ ಯಾವ ಗಿಡಗಳನ್ನು ನೆಟ್ಟರೆ, ಯಾವ ರೀತಿಯ ಅಭಿವೃದ್ಧಿ ಉಂಟಾಗುತ್ತೆ ಅನ್ನೋದು ನಿಮಗೆ ತಿಳಿದಿದೆಯೇ? ಇಲ್ಲಾ ಅನ್ನೋದಾದ್ರೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಮನೆಯಲ್ಲಿ ಗಿಡಗಳನ್ನು(Plants) ನೆಡುವುದು ಉತ್ತಮ ಆರೋಗ್ಯದೊಂದಿಗೆ ಸಂಪತ್ತಿನ ಆಗಮನಕ್ಕೆ ದಾರಿ ತೆರೆಯುತ್ತೆ. ಇದಲ್ಲದೆ, ಮನೆಯಲ್ಲಿ ಕೆಲವು ಸಸ್ಯಗಳನ್ನು ನೆಡೋದರಿಂದ ವಿವಾಹದ ಅಡೆತಡೆಯನ್ನು ತೆಗೆದುಹಾಕುತ್ತೆ. ಈ ಸಸ್ಯಗಳಲ್ಲಿ ಒಂದು ಪಿಯೋನಿಯಾ. ಇದರ ಬಗ್ಗೆ ಮಾಹಿತಿ ತಿಳಿಯೋಣ.
ವಾಸ್ತು ಶಾಸ್ತ್ರದ ಪ್ರಕಾರ, ಮದುವೆಯನ್ನು(Marriage) ಕೆಲವು ಕಾರಣಗಳಿಗಾಗಿ ಮಾಡಲು ಸಾಧ್ಯವಾಗದಿದ್ದರೆ ಅಥವಾ ಮದುವೆ ವಿನಾಕಾರಣ ಮುಂದೆ ಹೋಗುತ್ತಿದ್ದರೆ, ಮನೆಯಲ್ಲಿ ಪಿಯೋನಿಯಾ ಹೂವಿನ ಗಿಡ ನೆಡಬೇಕು. ಪಿಯೋನಿಯಾದ ಹೂವನ್ನು ಹೂವುಗಳ ರಾಣಿ ಎಂದು ಕರೆಯಲಾಗುತ್ತೆ. ಈ ಹೂವನ್ನು ಸೌಂದರ್ಯ, ಪ್ರಣಯದ ಸಂಕೇತ ಎಂದು ಪರಿಗಣಿಸಲಾಗುತ್ತೆ. ಆದ್ದರಿಂದ ಈ ಸಸ್ಯದ ಬಗ್ಗೆ ತಿಳಿದುಕೊಳ್ಳೋಣ...
ಪರಸ್ಪರ ಪ್ರೀತಿಗಾಗಿ
ವಾಸ್ತು ದೋಷಗಳಿಂದಾಗಿ, ಮನೆಯ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿರಬಹುದು. ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮನೆಯಲ್ಲಿರುವ ಪ್ರತಿಯೊಂದೂ ಸಣ್ಣ ಮತ್ತು ದೊಡ್ಡ ವಿಷಯವು ಚರ್ಚೆಗೆ ಕಾರಣವಾಗಿ ಜಗಳವಾಗುತ್ತಿದ್ದರೆ, ಮನೆಯಲ್ಲಿ ಪಿಯೋನಿಯಾ(Peonia) ಅಥವಾ ಅದರ ಸಸ್ಯದ ವರ್ಣಚಿತ್ರವನ್ನು ಇರಿಸಿ.
ಪಿಯೋನಿಯಾ ಸಸ್ಯವನ್ನು ನೈಋತ್ಯ ದಿಕ್ಕಿಗೆ ನೆಡಿ. ಏಕೆಂದರೆ ಈ ದಿಕ್ಕಿನ ಸಂಬಂಧವು ಕುಟುಂಬದಲ್ಲಿ ವಾಸಿಸುವ ಜನರ ನಡುವಿನ ಸಂಬಂಧವನ್ನು ತೋರಿಸುತ್ತೆ. ಮನೆಯಲ್ಲಿನ ನೆಮ್ಮದಿಗಾಗಿ ಮತ್ತು ಸಂತೋಷಕ್ಕಾಗಿ(Happiness) ಈ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ನೆಡಬೇಕಾಗುವುದು ಮುಖ್ಯ.
ಮದುವೆಯಲ್ಲಿ ವಿಳಂಬವಾದರೆ(Late marriage), ಈ ಕ್ರಮಗಳನ್ನು ಅಳವಡಿಸಿ
ವಾಸ್ತುವಿನ ಪ್ರಕಾರ, ಮನೆಯಲ್ಲಿ ಹುಡುಗ ಅಥವಾ ಹುಡುಗಿಯ ಮದುವೆಯಲ್ಲಿ ವಿಳಂಬವಾದರೆ, ಡ್ರಾಯಿಂಗ್ ರೂಮಿನಲ್ಲಿ ಪಿಯೋನಿಯಾ ಹೂವಿನ ಗಿಡ ಅಥವಾ ಹೂವುಗಳ ವರ್ಣಚಿತ್ರವನ್ನು ಇರಿಸಿ. ಹಾಗೆಯೇ, ಯಾರಿಗಾದರೂ ಮದುವೆಗೆ ಈ ಸಸ್ಯ ಅಥವಾ ವರ್ಣಚಿತ್ರಗಳನ್ನು ಉಡುಗೊರೆಯಾಗಿ ನೀಡಬಹುದು.
ಸಂತೋಷದ ಜೀವನಕ್ಕೆ ಪರಿಹಾರೋಪಾಯಗಳು
ಸಂತೋಷದ ಜೀವನಕ್ಕಾಗಿ, ಮನೆಯ ನೈಋತ್ಯ ಮೂಲೆಯಲ್ಲಿ ಪಿಯೋನಿಯಾ ಸಸ್ಯ ನೆಡಿ. ವಾಸ್ತು ಶಾಸ್ತ್ರದ ಪ್ರಕಾರ, ಇದನ್ನು ಮಾಡೋದರಿಂದ, ಮನೆಯಲ್ಲಿ ಸಂತೋಷ ನೆಲೆಸುತ್ತೆ. ಹೀಗೆ ಮಾಡೋದ್ರಿಂದ ಮನೆಯಲ್ಲಿ ನೆಮ್ಮದಿ ಇರುತ್ತೆ, ಜೊತೆಗೆ ದಾಂಪತ್ಯ ಜೀವನ(Life) ಚೆನ್ನಾಗಿರುತ್ತೆ.
ಗಾರ್ಡನ್‌ನ (Garden) ಈ ದಿಕ್ಕಿನಲ್ಲಿ ಪೈಯೋನಿಯಾ ನೆಡಿ
ನೀವು ತೋಟದಲ್ಲಿ ಪಿಯೋನಿಯಾ ಸಸ್ಯ ನೆಡಬೇಕೆಂದಿದ್ದರೆ, ಅದನ್ನು ಮನೆಯ ಪ್ರವೇಶ ದ್ವಾರದ ಬಲಭಾಗದಲ್ಲಿ ನೆಡಿರಿ. ಇದು ನಿಮ್ಮ ಮನೆಯಲ್ಲಿ ಸಕಾರಾತ್ಮಕತೆಯನ್ನು ತರುತ್ತೆ. ಹೆಚ್ಚಿನ ಮಾಹಿತಿಗಾಗಿ ನೀವು ವಾಸ್ತು ತಜ್ಞರ ಬಳಿ ಸಲಹೆ ಕೇಳೋದು ಉತ್ತಮ.