ಗರ್ಭಿಣಿ ಮಲಗೋ ಕೋಣೆ ಈ ದಿಕ್ಕಲ್ಲಿದ್ರೆ ಅಮ್ಮ-ಮಗು ಇಬ್ಬರಿಗೂ ಕಷ್ಟ
ಯಾವುದೇ ವಿವಾಹಿತ ದಂಪತಿಯ ಜೀವನದ ಪ್ರಮುಖ ಭಾಗ ಗರ್ಭಧಾರಣೆ. ಆದರೆ, ಇತ್ತೀಚಿನ ದಿನಗಳಲ್ಲಿ ಗರ್ಭಾಶಯ ವೈಫಲ್ಯದ ಅನೇಕ ಪ್ರಕರಣಗಳನ್ನು ನೋಡುತ್ತಿದ್ದೇವೆ ಮತ್ತು ಇದಕ್ಕೆ ಹಲವಾರು ಕಾರಣಗಳಿವೆ. ಬೇರೆ ಬೇರೆ ರೀತಿಯ ಅರೋಗ್ಯ ಸಮಸ್ಯೆಗಳಿಂದ ಈ ರೀತಿ ಆಗಬಹುದು ಅಥವಾ ಮನೆಯಲ್ಲಿ ಕೆಲವು ವಾಸ್ತು ದೋಷಗಳು ಗರ್ಭಧರಿಸಲು ತಡೆಯೊಡ್ಡುತ್ತವೆ. ಸಾಮಾನ್ಯವಾಗಿ ಮನೆಗಳಲ್ಲಿ ಕಂಡುಬರುವ ಕೆಲವು ವಾಸ್ತು ದೋಷಗಳು ಮತ್ತು ಅವುಗಳನ್ನು ಸರಿಪಡಿಸಲು ಮಾರ್ಗಗಳು ಇಲ್ಲಿವೆ.
ವಾಸ್ತು ದೋಷಗಳನ್ನು ಅರ್ಥ ಮಾಡಿಕೊಳ್ಳುವ ಮೊದಲು ನೀರು, ಗಾಳಿ, ಅಗ್ನಿ, ಭೂಮಿ ಮತ್ತು ಜಾಗ ಎಂಬ ಪಂಚ ಸಹಜ ಅಂಶಗಳ ತರ್ಕವನ್ನು ಅರ್ಥ ಮಾಡಿಕೊಳ್ಳಬೇಕು, ಏಕೆಂದರೆ ವಾಸ್ತು ಶಾಸ್ತ್ರವು ಈ ಪಂಚಸಹಜ ಅಂಶಗಳನ್ನು ಆಧರಿಸಿದೆ.
ಮಗುವನ್ನು ಗರ್ಭಿಣಿಸಲು ಎಲ್ಲಾ ಅಂಶಗಳು ಸಮತೋಲನವಾಗಿರಬೇಕು. ಲೈಂಗಿಕ ಸಂಬಂಧಗಳಿಗೆ ಕಾರಣವಾಗಿರುವ ಅಂಶಗಳಿಗೆ ಆಗ್ನೇಯ ದಿಕ್ಕಿನಲ್ಲಿ ಕಂಡುಬರುವ ಅಗ್ನಿ ಮೂಲವಸ್ತು. ಅದೇ ಅಗ್ನಿ ಅಂಶವು ಮಹಿಳೆಯ ಗರ್ಭಧರಿಸುವ ಮತ್ತು ಪಕ್ವಗೊಳಿಸುವ ಜವಾಬ್ದಾರಿಯೂ ಆಗಿದೆ.
ಉತ್ತಮ ಸಂಬಂಧ ಮತ್ತು ಉತ್ತಮ ಲೈಂಗಿಕ ಜೀವನಕ್ಕಾಗಿ ದಂಪತಿಗಳು ನೈಋತ್ಯ ದಿಕ್ಕಿನಲ್ಲಿ ಮಲಗಬೇಕು. ದಂಪತಿಗಳು ಮನೆಯ ವಾಯುವ್ಯ ಭಾಗದಲ್ಲಿ ಪರ್ಜನ್ಯ ಎಂಬ ಒಂದು ನಿರ್ದಿಷ್ಟ ಶಕ್ತಿ ಕ್ಷೇತ್ರದಲ್ಲಿ ಮಲಗಬಹುದು, ಇದು ಖಂಡಿತವಾಗಿಯೂ ಗರ್ಭಾಶಯಕ್ಕೆ ಸಹಾಯಕವಾಗಿದೆ. ಈ ಶಕ್ತಿಕ್ಷೇತ್ರವು ದೇಹ ಮತ್ತು ಮನಸ್ಸನ್ನು ತಂಪಾಗಿಮತ್ತು ಸ್ಥಿರವಾಗಿರಿಸಲು ಸಹಾಯ ಮಾಡುತ್ತದೆ.
ಒಮ್ಮೆ ಮಹಿಳೆ ಮಗುವನ್ನು ಗರ್ಭ ಧಾರಣೆ ಮಾಡಿದ ನಂತರ ಮಗುವಿನ ಸ್ಥಿರತೆಗಾಗಿ ಈಶಾನ್ಯ ದಿಕ್ಕಿನಿಂದ ನೈರುತ್ಯ ದಿಕ್ಕಿನಲ್ಲಿ ಸ್ಥಳಾಂತರಿಸಬೇಕು. ಅದೇ ರೀತಿ ಮಲಗುವ ಕೋಣೆ ಪೂರ್ವ ಮತ್ತು ಆಗ್ನೇಯ ಅಥವಾ ಪಶ್ಚಿಮ ಮತ್ತು ವಾಯುವ್ಯ ದ ನಡುವೆ ಇದ್ದರೆ, ಗರ್ಭಿಣಿಯಾಗಲಿ ಕಷ್ಟಗಳು ಎದುರಾಗಬಹುದು.
ನೈಋತ್ಯದಲ್ಲಿ ಶೌಚಾಲಯವಿದೆ ಅಥವಾ ಈ ದಿಕ್ಕು ಕಡಿದಾಗಿ ಅಥವಾ ದುರ್ಬಲವಾಗಿದ್ದರೆ ಆಗ ಮಗು ಹೊಂದುವ ಸಾಧ್ಯತೆ ಕಡಿಮೆ. ಅಲ್ಲದೆ ಮನೆಯಲ್ಲಿ ಅಗ್ನಿಮೂಲಾಂಶ ದುರ್ಬಲವಾಗಿದ್ದರೆ ಆಗ ಮನುಷ್ಯನ ಸಂತಾನೋತ್ಪತ್ತಿ ಸಾಮರ್ಥ್ಯವು ದುರ್ಬಲವಾಗುತ್ತದೆ.
ದಕ್ಷಿಣ ದಿಕ್ಕಿನಲ್ಲಿ ಶೌಚಾಲಯವಿದ್ದರೆ ಅಥವಾ ಈಶಾನ್ಯ ದಿಕ್ಕಿನಲ್ಲಿ ಅಡುಗೆ ಮನೆ ಇದ್ದರೆ ಅದು ಸಂತಾನೋತ್ಪತ್ತಿ ಸಾಮರ್ಥ್ಯಕ್ಕೆ ಅಡ್ಡಿಯಾಗುತ್ತದೆ ಮತ್ತು ದುರ್ಬಲವಾಗುತ್ತದೆ. ಅಷ್ಟೇ ಅಲ್ಲದೆ ಗರ್ಭಾವಸ್ಥೆಯ ವಿವಿಧ ತೊಂದರೆಗಳಿಗೆ ಕಾರಣವಾಗಬಹುದು ಎಂಬ ಕಾರಣದಿ೦ದ, ಮನೆಯ ಮಧ್ಯಭಾಗದಲ್ಲಿ ಯಾವುದೇ ಮೆಟ್ಟಿಲು ಅಥವಾ ಭಾರವಾದ ಯಾವುದೇ ವಸ್ತುವಿರಬಾರದು.
ಗರ್ಭಿಣಿ ಮಹಿಳೆ ಕತ್ತಲ ಕೋಣೆಯಲ್ಲಿ ಇರಲು ಎಂದಿಗೂ ಅವಕಾಶ ಮಾಡಿಕೊಡಬೇಡಿ. ಯಾವಾಗಲೂ ಆಕೆಯ ಸುತ್ತ ಸಾಕಷ್ಟು ಬೆಳಕು ಇರುವಂತೆ ನೋಡಿಕೊಳ್ಳಿ.
ತಪ್ಪಿಸಬೇಕಾದ ಕೆಲವು ವಿಷಯಗಳು:
ಗರ್ಭಿಣಿ ಮಹಿಳೆಯು ಯಾವುದೇ ಭಯಾನಕ,ಬೇಸರ ಅಥವಾ ಖಿನ್ನತೆಗೆ ಒಳಗಾಗುವಂತಹ ಯಾವುದೇ ಚಲಚಿತ್ರಗಳನ್ನು ನೋಡಬಾರದು.
ಗರ್ಭಿಣಿ ಮಹಿಳೆಯ ಭಾವನೆಗಳಿಗೆ ಯಾವುದೇ ಧಕ್ಕೆಆಗಬಾರದು ಎಂದು ತುಂಬಾ ಎಚ್ಚರಿಕೆ ವಹಿಸಬೇಕು.
ಯುದ್ಧ ಹಿಂಸೆಯ ಕ್ರೌರ್ಯದಂತಹ ನಕಾರಾತ್ಮಕ ಮನಸ್ಥಿತಿಯನ್ನು ಬಿಂಬಿಸುವ ಚಿತ್ರಗಳನ್ನು ನೋಡಬಾರದು
ಗರ್ಭಿಣಿ ಮಹಿಳೆ ಕಪ್ಪು ಅಥವಾ ಗಾಢ ಕೆಂಪು ಬಣ್ಣದ ಬಟ್ಟೆ ಧರಿಸಬಾರದು.
ಗರ್ಭಿಣಿ ಮಹಿಳೆ ಎಂದೂ ಬೀಮ್ ಕೆಳಗೆ ಮಲಗಬಾರದು.
ಮನೆಯಲ್ಲಿ ಬೋನ್ಸಾಯಿ ಅಥವಾ ಮುಳ್ಳಿನ ಗಿಡಗಳನ್ನು ಇಡಬೇಡಿ.
ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳು ಸಾಕಷ್ಟು ವಿಕಿರಣಗಳನ್ನು ಉಂಟುಮಾಡುವುದರಿಂದ, ಎಲೆಕ್ಟ್ರಾನಿಕ್ ಸಾಧನಗಳ ಬಳಕೆ ಕಡಿಮೆ ಇರಬೇಕು.
ಯಾವುದನ್ನು ಅನುಸರಿಸಬೇಕು: ಗರ್ಭಿಣಿ ಮಹಿಳೆಯ ಮನೆಯಲ್ಲಿನ ಹಿತ್ತಲು ಅಥವಾ ತೋಟದ ಆಗ್ನೇಯ ದಿಕ್ಕಿನಲ್ಲಿ ಹಣ್ಣಿನ ಗಿಡವನ್ನು ಬೆಳೆಸುವುದು ಉತ್ತಮ. ಗುಲಾಬಿ ಬಣ್ಣದ ಹರಳುಗಳನ್ನು ಬೆಡ್ ರೂಂನಲ್ಲಿ ಇಡಬೇಕು. ಮಲಗುವ ಕೋಣೆಯಲ್ಲಿರುವ ಕನ್ನಡಿಗಳನ್ನು ಮುಚ್ಚಬೇಕು ಅಥವಾ ಸಂಪೂರ್ಣವಾಗಿ ಆ ಕೋಣೆಯಿಂದ ತೆಗೆದು ಹಾಕಬೇಕು.
ಮನೆಯಲ್ಲಿ ಧನಾತ್ಮಕ ವಾತಾವರಣ ವಿರಮಿಸಲು ಯಾವಾಗಲೂ ತಾಜಾ ಹೂಗಳನ್ನು ಇಡಿ. ಬೆಡ್ ಬಳಿ ಅಥವಾ ವಾಯುವ್ಯ ದಿಕ್ಕಿನಲ್ಲಿ ಬಾಲಕೃಷ್ಣನ ಚಿಕ್ಕ ಪ್ರತಿಮೆ ಅಥವಾ ಫೋಟೋವನ್ನು ಇಡುವುದು ಉತ್ತಮ. ಬೆಡ್ ರೂಮಿನಲ್ಲಿ ನವಿಲುಗರಿಯನ್ನು ಇಡುವುದು ಸಹ ಪಾಸಿಟಿವ್ ಫೀಲಿಂಗ್ ಉಂಟು ಮಾಡಬಹುದು.